ನಗರದ ಮೂಲಭೂತ ಸೌಲಭ್ಯಗಳ ಸಮಸ್ಯೆ ಪರಿಹರಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವರಲ್ಲಿ ಕೆಂಗನಾಳ ಒತ್ತಾಯ

(ಸಂಜೆವಾಣಿ ವಾರ್ತೆ)
ವಿಜಯಪುರ:ಆ.13: ವಿಜಯಪುರ ನಗರದಲ್ಲಿ ಅನೇಕ ಸಮಸ್ಯೆಗಳನ್ನು ಜನತೆ ಎದುರಿಸುತ್ತೆದ್ದಾರೆ. ಈ ಸಮಸ್ಯೆಗಳನ್ನು ಬಗೆಹರಿಸುವ ಕಡೆಗೆ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಪರಿಹರಿಸುವ ನಿಟ್ಟಿನಲ್ಲಿ ಗಮನ ಹರಿಸಬೇಕೆಂದು ಜನಪರ ಸಾಮಾಜಿಕ ಹೋರಾಟಗಾರ ಡಾ. ಎಪಿಜೆ ಆಬ್ದುಲಕಲಾಂ ಸಮಾಜ ಸೇವಾ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಕೆಂಗನಾಳ ಆಗ್ರಹಿಸಿದ್ದಾರೆ.
ಬಹುದಿನಗಳ ಬೇಡಿಕೆಯಾಗಿರುವ ವಜ್ರಹನುಮಾನ ರೇಲ್ವೆ ಬ್ರಿಜ್ ಮೇಲೆ ಮೇಲು ಸೇತುವೆ ಕಾಮಗಾರಿಯನ್ನು ವಿಶ್ವೇಶ್ವರಯ್ಯ ವೃತ್ತದಿಂದ ಬಾಗಲಕೋಟೆ ರಸ್ತೆಯ ಮೇಲು ಸೇತುವೆಯವರೆಗೆ ಮಾಡಲು ಸಚಿವರು ಮುಂದಾಗಬೇಕು.
ನಗರದಲ್ಲಿ ಒಳಚರಂಡಿ ಕಾಮಗಾರಿಯಿಂದಾಗಿ ಹಲವಾರು ರಸ್ತೆಗಳು ಹಾಳಾಗಿ ಹೋಗಿವೆ. ಅಲ್ಲದೇ ಮ್ಯಾನ್‍ಹೋಲ್ ಸಹ ತೆರೆಯಲ್ಪಟ್ಟಿವೆ. ಇದರಿಂದ ವಾಹನಗಳ ಸಂಚಾರಕ್ಕೆ ತೊಂದರೆ ಉಂಟಾಗುತ್ತಿದೆ. ಮುಂದೆ ಅಪಘಾತ ಸಂಭವಿಸುವ ಸಾಧ್ಯತೆ ಇದೆ. ಕೂಡಲೇ ಹದಗೆಟ್ಟಿರುವ ರಸ್ತೆಗಳನ್ನು ದುರಸ್ತಿ ಮಾಡಬೇಕು.
ಅಭಿವೃದ್ದಿ ವಿಷಯದಲ್ಲಿ ನಗರ ಯೋಜನಾ ಅಭಿವೃದ್ಧಿ ಅಧಿಕಾರಿಗಳು ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಅವೈಜ್ಷಾ£ಕ ಯೋಜನೆಗಳನ್ನು ಮಾಡಿವುದರಿಂದ ಅನುದಾನ ಸರಿಯಾಗಿ ಬಳಕೆಯಾಗುತ್ತಿಲ್ಲ. ಆಯಾಕಟ್ಟಿನ ಸ್ಥಳದಲ್ಲಿ ಮೂತ್ರಾಲಯಗಳನ್ನು ಮಾಡುವದರಿಂದ ಹಿರಿಯ ನಾಗರಿಕರಿಗೆ, ಮಹಿಳೆಯರಿಗೆ, ಸಾರ್ವಜ£ಕರಿಗೆ ತುಂಬಾ ಅನುಕೂಲವಾಗುತ್ತದೆ. ನಗರದ ಸಮೀಪವಿರುವ ಟೋಲ್ ನಾಕಾ ಅವೈಜ್ಷಾನಿಕವಾಗಿದೆ. ನಗರದ ಜನತೆ ಕೆಲ ಬಡಾವಣೆಗಳಿಗೆ ತೆರಳಬೇಕಾದರೆ ಟೋಲ್ ಶುಲ್ಕ ಕಟ್ಟಬೇಕಾಗುತ್ತದೆ. ಇದು ಅನಾವಶ್ಯಕ ವೆಚ್ಚ ಜನರಿಗೆ ಉಂಟಾಗುತ್ತಿದೆ. ಈ ಟೋಲದ ನಾಕಾವನ್ನು ಮನಗೂಳಿ ಸಮೀಪ £ರ್ಮಾಣ ಮಾಡುವಂತೆ ಕ್ರಮ ವಹಿಸಬೇಕು.
ನಗರ ಅರ್ಧ ಭಾಗಕ್ಕೆ ಸರಿಯಾಗಿ ಕುಡಿಯುವ ನೀರು ಪೂರೈಕೆಯಾಗುತ್ತಿಲ್ಲ. ಇದರಿಂದ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಜಲ ನಗರ, ರಾಜಾಜಿ ನಗರ, ಕೆ.ಎಸ್‍ಆರ್.ಟಿಸಿ ಕಾನಿ, ಗಡಗಿ ಕಾಲನಿ, ಸಾಯಿ ರೆಸಿಡೆನ್ಸಿ ಸೇರಿದಂತೆ ಅನೇಕ ಬಡಾವಣೆಗಳಿಗೆ ಸಮರ್ಪಕವಾಗಿ ನೀರು ಬರುತ್ತಿಲ್ಲ. ಈ ಸಮಸ್ಯೆ ನಿವಾರಣೆಗೆ ಬೇಗಂತಲಾಂನಲ್ಲಿ ಜಾಕವೆಲ್ ಮಾಡಿದರೆ ನಗರದ ಕುಡಿಯುವ ನೀರಿನ ಸಮಸ್ಯೆ ನಿವಾರಿಸಬಹುದು.
ಮಹಾನಗರ ಪಾಲಿಕೆ ಸದಸ್ಯರಿಗೆ ಕೂಡಲೇ ಅಧಿಕಾರ ಸಿಗುವಂತೆ ಮಾಡಬೇಕು. ತಾಲೂಕು ಪಂಚಾಯತ, ಜಿಲ್ಲಾ ಪಂಚಾಯತಗಳಿಗೆ ಕೂಡಲೇ ಚುನಾವಣೆ ನಡೆಯುವಂತೆ ಸರ್ಕಾರ ಕ್ರಮವಹಿಸುವಂತೆ ಒತ್ತಡ ಹೇರಬೇಕು. ಕೂಡಲೇ ವಿಮಾನ ನಿಲ್ದಾಣ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸಿ ಜನರಿಗೆ ಅನುಕೂಲ ಮಾಡಿಕೊಡಬೇಕು.
ವಿದ್ಯುತ ಇಲಾಖೆಯಲ್ಲಿನ ಸರ್ವರ್ ಸಮಸ್ಯೆ ಬಗೆಹರಿಸಬೇಕು. ಈ ಇಲಾಖೆಯಲ್ಲಿ ಆನ್ಲೈನ್ನಲ್ಲಿ ಎಲ್ಲ ಕೆಲಸಗಳು ಆಗುತ್ತವೆ. ಸರ್ವರ್ ಇಲ್ಲದ ಕಾರಣದಿಂದ ಕೆಲಸಗಳನ್ನು ಮಾಡುವುದು ಆಪ್ನೈನನಲ್ಲಿ. ಪ್ರತಿವರ್ಷ ಕೆಇಆರ್‍ಸಿಗೆ ಕಂಪನಿ ನಷ್ಠದಲ್ಲಿದೆ ಅಂತಾ ದರ ಏರಿಕೆ ಕಡ್ಟಾಯವಾಗಿದೆ. ಒಂದು ವರ್ಷಕ್ಕೆ 500-600 ಕೋಟಿ ಲಾಭದಲ್ಲಿ ತರಬಹುದು. ಆದರೆ ಇಲಾಖೆಯಲ್ಲಿನ ಅಧಿಕಾರಿಗಳ ಕಾರ್ಯವೈಖರಿಯಿಂದಾಗಿ ಸಾಧ್ಯವಾಗುತ್ತಿಲ್ಲ. ನಿಗಮದ ಅಧಿಕಾರಿಗಳು ಎಲ್ಲಾ ಜಿಲ್ಲೆಗಳಿಗೆ ಭೇಟಿ ನೀಡದೇ ಇರುವದರಿಂದ ಕಂಪನಿ ನಷ್ಟದಲ್ಲಿ ಇರಲು ಮೂಲ ಕಾರಣವಾಗಿದೆ. ಈ ಇಲಾಖೆಯಲ್ಲಿನ ಸಮಸ್ಯೆಗಳನ್ನು ಒಬ್ಬ ಜನಪ್ರತಿನಿಧಿ ಬಗೆಹರಿಸಿದರೆ ಅವರು ಸಾಕಷ್ಟು ಹೆಸರು ಮಾಡಿಕೊಳ್ಳಬಹುದು. ಇದರ ಬಗ್ಗೆ ಅವರು ತೀರ್ಮಾನ ಮಾಡಬೇಕೆಂದು. ನಗರದ ಬಸ್ ನಿಲ್ದಾಣದ ಮುಂಭಾಗ ಸ್ಥಾಪನೆ ಮಾಡಿರುವ ರಾಣಿ ಚನ್ನಮ್ಮ ಪ್ರತೆಮೆಯನ್ನು ಕೂಡಲೇ ಅನಾವರಣ ಮಾಡಬೇಕೆಂದು ಮಲ್ಲಿಕಾರ್ಜುನ ಕೆಂಗನಾಳ ಆಗ್ರಹಿಸಿದ್ದಾರೆ.