ನಗರದ ಮಿಲ್ಲರ್ ಪೇಟೆಯಲ್ಲಿ ಪ್ರೀತಿ ವಿಷಯಕ್ಕೆ ಸ್ನೇಹಿತನನ್ನು ಕೊಂದರು

ಬಳ್ಳಾರಿ, ಮೇ.03: ನಗರದ ಮಿಲ್ಲರ್ ಪೇಟೆಯ ಆಟೋ ನಿಲ್ದಾಣದ ಬಳಿ ನಿನ್ನೆ ತಡ ರಾತ್ರಿ ಸ್ನೇಹಿತರು ಪ್ರೀತಿ ವಿಷಯದಲ್ಲಿ ಆತನನ್ನು ಕೊಂದು ಪರಾರಿಯಾಗಿರುವ ಘಟನೆ ನಡೆದಿದೆ. ಈ ಬಗ್ಗೆ ಬ್ರೂಸ್‍ಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.
ತಂದೆ ಕಾರ್ಪೆಂಟರ್ ಮಗ ಇಸ್ಮಯಿಲ್ (19) ಜೀನ್ಸ್ ಉದ್ಯಮದಲ್ಲಿ ಕಾರ್ಮಿಕ. ಈತ ಯುವತಿಯೊಬ್ಬಳನ್ನು ಪ್ರೀತಿಸುವ ಸಂಬಂಧ ಆತನ ಸ್ನೇಹಿತರಲ್ಲಿ ವೈಷಮ್ಯಕ್ಕೆ ಕಾರಣವಾಗಿ ನಿನ್ನೆ ತಡರಾತ್ರಿ ಸ್ನೇಹಿತರು ಮೂರು ಜನ ಸೇರಿ. ಇಸ್ಮಯಿಲ್‍ನ ಕುತ್ತಿಗೆ ಕೊಯ್ದು ಕೊಲೆ ಮಾಡಿ ಪರಾರಿಯಾಗಿದ್ದಾರೆಂದು ತಿಳಿಸುಬಂದಿದೆ. ಪೊಲೀಸರ ತನಿಖೆಯಿಂದ ಸತ್ಯ ಏನೆಂಬುದು ಹೊರಬರಬೇಕಿದೆ.