ನಗರದ ಮಹತ್ವ ಸಾರುವ ಸಾಂಪ್ರದಾಯಿಕ ಮತಗಟ್ಟೆ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಮೇ.10: ಆರು ಮತಗಟ್ಟೆಗಳನ್ನು ಹೊಂದಿರುವ ನಗರದ ಬಾಲ ಭಾರತಿ ಮತಗಟ್ಟೆಯನ್ನು ಜಿಲ್ಲಾಡಳಿತ ಸಾಂಪ್ರದಾಯಿಕ ಮತಗಟ್ಟೆಯನ್ಮಾಗಿ ಅಲಂಕರಿಸಿ ಮತದಾನದ ಪ್ರಮಾಣ  ಹೆಚ್ಚಳಕ್ಕೆ ಪ್ರಯತ್ನಿಸಿದೆ.
ಇಲ್ಲಿ  ಬಯಲಾಟದ ಪಾತ್ರ, ದುರ್ಗಮ್ಮದೇವಸ್ಥಾನದ ಬಳಿಯ ವಿಗ್ರಹ,  ಬಳ್ಳಾರಿ ತೇರು, ರೈಲು ನಿಲ್ದಾಣ, ಕೋಟೆ ಸಿಡಿ ಬಂಡಿ ರಥೋತ್ಸವ , ಕೋಟೆ ಮಲ್ಲೇಶ್ವರ ದೇವಸ್ಥಾನ, ಗಡಿಯಾರ ಗೋಪುರ, ಡಿಸಿ ಕಚೇರಿಯ ಪ್ರತಿಕೃತಿಗಳನ್ನು ರಚಿಸಿ ಇಡಲಾಗಿತ್ತು. ಅವುಗಳ ಮುಂದೆ ನಿಂತು ಹಲವಾರು ಜನ  ಸೆಲ್ಫಿ ತೆಗೆದುಕೊಂಡಿದ್ದು ಕಂಡು ಬಂತು