ನಗರದ ಮಸೀದಿಗಳ ಅಭಿವೃದ್ಧಿಗೆ 65 ಲಕ್ಷ ರೂ ಮಂಜೂರು: ಭರತ್


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಫೆ.04: ನಗರದ  6  ಮಸೀದಿಗಳ ಅಭಿವೃದ್ಧಿಗೆ ಸರ್ಕಾರದಿಂದ 65 ಲಕ್ಷ ರೂ ಅನುದಾನ ಮಂಜೂರಾಗಿದೆ.
ನಗರ ಶಾಸಕ  ಭರತ್ ರೆಡ್ಡಿ, ನಗರದ 16 ಪ್ರಾರ್ಥನಾ ಮಂದಿರಗಳ ಅಭಿವೃದ್ಧಿಗೆ ಸರ್ಕಾರದಿಂದ ಅನುದಾನ ಬಿಡುಗಡೆ‌ಮಾಡುವಂತೆ ಕಳೆದ ವರ್ಷ ಡಿಸೆಂಬರ್‌ನಲ್ಲಿ ಬೆಳಗಾವಿಯಲ್ಲಿ ನಡೆದ ಚಳಿಗಾಲದ ಅಧಿವೇಶನದಲ್ಲಿ ವಕ್ಫ್  ಸಚಿವ ಜಮೀರ್ ಅಹ್ಮದ್‌ ಅವರಿಗೆ ಪತ್ರ ಬರೆದು ಕೋರಿದ್ದರು.
ಇದರಿಂದಾಗಿ ಸರ್ಕಾರದಿಂದ ಮೊದಲನೆಯ ಹಂತದಲ್ಲಿ 6 ಮಸೀದಿಗಳ ಅಭಿವೃದ್ಧಿಗೆ ಅನುದಾನ‌ ಮಂಜೂರಾಗಿದೆಂದು ಶಾಸಕ ಭರತ್ ರೆಡ್ಡಿ ತಿಳಿಸಿದ್ದಾರೆ.
ಆಂದ್ರಾಳಿನ ಸುನ್ನಿ ಮಸೀದ್, 12 ನೇ ವಾರ್ಡಿನ ತಾಜಿಯ ಮೊಹಲ್ಲಾ ಮಸೀದ್, ಟ್ಯಾಂಕ್ ಬಂಡ್ ರೋಡನ್ ಸುನ್ನಿ ಜಾಮೀಯಾ ಮಸೀದ್, ದೇವಿನಗರದ ಮದರಸಾ ಮತ್ತು ಸಿದ್ಸಿಕಿ ಮಸೀದಿ, ಗಾಂಧಿನಗರದ ಅಹಮ್ಮದ್ ಮಸೀದ್ ಮತ್ತು ಗುಗ್ಗರಹಟ್ಟಿಯ ಜನ್ನತುಲ್ ಫರ್ಧುಸ್ ಮಸೀದ್ ಗಳಿಗೆ ಅನುದಾನ ಮಂಜೂರು ಮಾಡಿದೆ.