ನಗರದ ಮತಯಾಚನೆ ಮಾಡಿದ ಕೇಂದ್ರ ಇಂಧನ ಸಚಿವ ಕಿಶನ್ ಪಾಲ್


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಏ.25: ನಗರ ವಿಧಾನಸಭಾ ಕ್ಷೇತ್ರದ ಚುನಾವಣೆ ಹಿನ್ನಲೆಯಲ್ಲಿ ಕೇಂದ್ರದ 
ಇಂಧನ ಹಾಗೂ ಬೃಹತ್ ಕೈಗಾರಿಕಾ  ರಾಜ್ಯ ಸಚಿವ  ಕಿಶನ್ ಪಾಲ್ ಗುರ್ಜರ್ ಅವರು. ಬಿಜೆಪಿ ಅಭ್ಯರ್ಥಿ ಸೋಮಶೇಖರ ರೆಡ್ಡಿ ಅವರೊಂದಿಗೆ ಇಲ್ಲಿನ 11ನೇ ವಾರ್ಡಿನ ಸಭಾಪತಿ ಸ್ಟ್ರೀಟ್ ನಲ್ಲಿ ಭ್ರಷ್ಟಾಚಾರ ರಹಿತವಾದ ಆಡಳಿತಕ್ಕಾಗಿ ಬಿಜೆಪಿಗೆ  ಮತ ನೀಡುವಂತೆ ಕೋರಿದರು.
ರಾಜ್ಯದ ಆರ್ಥಿಕ ಅಭಿವೃದ್ಧಿ ಮತ್ತು ದೇಶದ ಸುರಕ್ಷತೆ ಬಿಜೆಪಿಯಿಂದ ಮಾತ್ರ ಸಾಧ್ಯ, 2ಜಿ, ಕಲ್ಲಿದ್ದಲು ಮೊದಲಾದ ಹಗರಣಗಳಿಂದ ದೇಶವನ್ನು ಕಾಂಗ್ರೆಸ್ ಸಂಕಷ್ಟಕ್ಕೆ ಸಿಲುಕಿಸಿದನ್ನು ನೆನಪಿಸಿ. ಯಾವುದೇ ಕಾರಣಕ್ಕೆ ಕಾಂಗ್ರೆಸ್ ಗೆ ಮತ ನೀಡಿ ದೇಶ ರಕ್ಷಣೆಯಿಂದ ನಿಮ್ಮನ್ನು ನೀವು ದೂರವಾಗಬೇಡಿ ಎಂದರು.
ಶಾಸಕ ಸೋಮಶೇಖರ ರೆಡ್ಡಿ ಅವರು ಈ ದೇಶದಲ್ಲಿ ಹಿಂದುಗಳ ರಕ್ಷಣೆ ಆಗಬೇಕು ಜೊತೆಗೆ  ಸರ್ವ ಧರ್ಮಗಳ ಸಂರಕ್ಷಣೆ ನಡೆಯಬೇಕೆಂದರೆ ಬಿಜೆಪಿಯಿಂದ ಮಾತ್ರ ಸಾಧ್ಯ ಅದಕ್ಕಾಗಿ ತಮಗೆ ಮತ ನೀಡಿ ಆಯ್ಕೆ ಮಾಡಬೇಕೆಂದು ಮನವು‌ಮಾಡಿದರು.
ಈ ಸಂದರ್ಭದಲ್ಲಿ ಜೈನ ಸಮುದಾಯದ, ಪಕ್ಷದ  ಮುಖಂಡರು ಹಾಗೂ ಕಾರ್ಯಕರ್ತರು ವಾರ್ಡಿನ ಪ್ರಮುಖರು,  ಕಾರ್ಯಕರ್ತರು  ಭಾಗಿಯಾಗಿದ್ದರು