ನಗರದ ಬಡ ಮಕ್ಕಳಿಗಾಗಿ ತಮ್ಮ ವಯಕ್ತಿಕ ಸಮಯ ಕೊಡುತ್ತಿರುವ ಶಿಕ್ಷಕರ ಕಾರ್ಯ ಶ್ಲಾಘನೀಯ : ಕೆ.ಎಂ.ವಿಶ್ವನಾಥ ಮರತೂರ

ಕಲಬುರಗಿ,ಮಾ.14- ಸರಕಾರಿ ಶಾಲೆಯಲ್ಲಿ ಮಕ್ಕಳಿಗೆ ಪಾಠ ಕಲಿಸುವ ಶಿಕ್ಷಕರು ಸಹಜವಾಗಿದ್ದಾರೆ ಆದರೆ ಶಾಲಾ ಅವಧಿಯ ಕೆಲಸಗಳ ಜೊತೆಗೆ ತಮ್ಮ ಏರಿಯಾದಲ್ಲಿ ಇರುವಂತಹ ಬಡ ಮಕ್ಕಳಿಗಾಗಿ ಸಂಜೆ ಸಮಯವನ್ನು ಮೀಸಲಿಟ್ಟಿರುವ ಶಿಕ್ಷಕರು ಕಲ್ಬುರ್ಗಿ ನಗರದಲ್ಲಿ ಇತ್ತೀಚಿಗೆ ಕಂಡುಬಂದರು. ಕಳೆದ ಎರಡು ತಿಂಗಳಿಂದ ಸತತವಾಗಿ ಸಂಜೆ 6:30 ರಿಂದ 7:30ರ ವರೆಗೆ ದಂಪತಿಗಳಿಬ್ಬರೂ ಕೂಡಿ ತಮ್ಮ ಏರಿಯಾದ ಬಡ ಮಕ್ಕಳಿಗಾಗಿ ಉಚಿತ ಶಿಕ್ಷಣವನ್ನು ಕೊಡುತ್ತಿದ್ದಾರೆ. ಈ ತರಗತಿಗಳಲ್ಲಿ ಬಹಳ ಮುಖ್ಯವಾಗಿ ಮಕ್ಕಳಿಗೆ ಪರೀಕ್ಷಾ ದೃಷ್ಟಿಯಿಂದ ತಯಾರಿ ಮಾಡುತ್ತಿದ್ದು, ಈ ತರಗತಿಯ ಮೂಲಕ ಮಕ್ಕಳಿಗೆ ಉಚಿತವಾಗಿ ಕಲಿಸುತ್ತಿದ್ದಾರೆ. ಕಲ್ಬುರ್ಗಿ ನಗರದ ವೀರೇಂದ್ರ ಪಾಟೀಲ್ ಬಡಾವಣೆಯ ಅಂಬೇಡ್ಕರ್ ಗಾರ್ಡನ್ ನಲ್ಲಿ ಈ ಚಟುವಟಿಕೆಯನ್ನು ಶಿಕ್ಷಕರಾದ ಮಹೇಶ್ ಕುಮಾರ್ ಬಡಿಗೇರ್ ಹಾಗೂ ಅವರ ಧರ್ಮಪತ್ನಿ ಉಚಿತ ತರಗತಿಗಳನ್ನು ನಡೆಸುತ್ತಿದ್ದಾರೆ. ಈ ತರಗತಿಯಿಂದ ಹಾಯ್ ಏರಿಯಾದ 100ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪರೀಕ್ಷಾ ದೃಷ್ಟಿಯಿಂದ ಅತ್ಯಂತ ಲಾಭದಾಯಕವಾಗಿದೆ ಎಂದು ಇತ್ತೀಚೆಗೆ ಭೇಟಿ ನೀಡಿದ ಪ್ರಜ್ಞಾ ಸಂಸ್ಥೆಯ ನಿರ್ದೇಶಕರಾದ ಕೆ.ಎಂ. ವಿಶ್ವನಾಥ ಮರತೂರ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಇದೊಂದು ವಿನೂತನ ಚಟುವಟಿಕೆಯಾಗಿದ್ದು ಅತ್ಯಂತ ಪ್ರೀತಿ ಮತ್ತು ಗೌರವದಿಂದ ಮಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ಈ ತರಗತಿಗಳು ಬಡ ಮಕ್ಕಳಿಗೆ ಅತ್ಯಂತ ಪ್ರಯೋಜನಕಾರಿಯಾಗಿದ್ದು ಶಿಕ್ಷಕರ ಈ ಕಾರ್ಯ ಶ್ಲಾಘನೀಯವಾಗಿದೆ ಎಂದು ಹೇಳಿದರು. ತಮ್ಮ ಬಿಡುವಿನ ವೇಳೆಯನ್ನು ತಮ್ಮ ಏರಿಯಾದಲ್ಲಿ ಇರುವಂತಹ ಬಡ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ವಿನಿಯೋಗಿಸುತ್ತಿರುವುದು ಅತ್ಯಂತ ಸಂತೋಷದ ವಿಷಯವಾಗಿದೆ ಎಂದರು. ಈ ಏರಿಯಾದಲ್ಲಿ ಇರುವಂತಹ ಸಾರ್ವಜನಿಕರು ಈ ತರಗತಿಗೆ ಕೈಜೋಡಿಸಿದ್ದು ತರಗತಿಗೆ ಬೇಕಾಗಿರುವ ಮೂಲಭೂತ ಸೌಕರ್ಯಗಳನ್ನು ಒದಗಿಸಿದ್ದು ಇಂತಹ ಕಾರ್ಯ ಅತ್ಯಂತ ಅಪರೂಪದ ಆಗಿದ್ದು ನಡೆಸುತ್ತಿರುವ ಶಿಕ್ಷಕರು ಶ್ಲಾಘನೀಯ ಎಂದು ತಿಳಿಸಿದರು.

ಈ ಭೇಟಿಯ ಸಮಯದಲ್ಲಿ ಶಿಕ್ಷಕ ಮಹೇಶ ಕುಮಾರ ಬಡಿಗೇರ್ ಹಾಗೂ ಏರಿಯಾದ ಸಾರ್ವಜನಿಕರು ಹಾಜರಿದ್ದರು.