ನಗರದ ಪ್ರತಿ ವಾರ್ಡ್ ಸ್ವಚ್ಛತೆಗೆ ಜನತಾದಳ ಒತ್ತಾಯ

ರಾಯಚೂರು.ಜು.೧೦- ನಗರ ಸಭೆಯಿಂದ ತಕ್ಷಣವೇ ಖಾತಾ ನೀಡವುದು ಪ್ರತಿ ವಾರ್ಡನಲ್ಲಿ ಸ್ವಚ್ಛತೆ ಕಾಪಾಡಲು ಜಿಲ್ಲಾ ಜನತಾದಳದ ಅವತಿಯಿಂದ ನಗರಸಭೆ ಅಧ್ಯಕ್ಷರಿಗೆ ಮನವಿ ಸಲ್ಲಿಸಿದರು.
ಕಳೆದ ಆರು ತಿಂಗಳಿಂದ ನಗರ ಸಭೆಯಿಂದ ಖಾತೆ ನೀಡದ ಕಾರಣ ಜನಸಾಮಾನ್ಯರಿಗೆ ತುಂಬಾ ತೊಂದರೆ ಉಂಟಾಗಿದೆ ಖಾತೆ ನಿರ್ವಹಿಸುತ್ತಿರುವ ಸಿಬ್ಬಂದಿಯ ಅವ್ಯವಹಾರ ನಡೆಸಿರುವ ಕಾರಣ ಅದನ್ನು ತಡೆ ಈಡಲಾಗಿದೆ ಇದರಿಂದ ನಿಜವಾಗಿ ಜನಸಾಮಾನ್ಯರಿಗೆ ಖಾತಾ ಸಿಗದ ಕಾರಣ ಬ್ಯಾಂಕಿನ ಸಾಲ ಸೀಗದೆ,ಮನೆ ಕಟ್ಟಲುಪ್ಲಾಟ್ ಮಾರಾಟ ಮಾಡದಂತೆ ಆಗಿದೆ. ಇದಕ್ಕೆಲ್ಲ ಖಾತಾ ನೀಡಿದವರುವದು ಆಗಿದೆ ಈಗಾಗಲೇ ಸಾವಿರಾರು ಅರ್ಜಿಯಗಳು ಬಾಕಿ ಇವೆ ಇದರಿಂದ ನಗರಸಭೆಯ ಆದಾಯ ಖೊತಾ ಆಗುತ್ತಿದೆ. ಅದಕಾರಣ ಖಾತಾ ನೀಡಿವಕೆ ಪಾರದರ್ಶಕ ಮೂಲಕ ನೀಡುವ ವ್ಯವಸ್ಥೆಯನ್ನು ಮಾಡಬೇಕು ಮತ್ತು ಮನೆಗಳ ತೆರಿಗೆ ತೆಗೆದು ಕೊಳ್ಳುತ್ತಿಲ್ಲ ಆನ್ ಲೈನ್ ತೊಂದರೆ ಇದೆ ಹೇಳುತ್ತಿದ್ದಾರೆ ಈ ಬಗೆ ಸಹ ಕ್ರಮ ತೆಗೆದುಕೊಳ್ಳಬೇಕು ನಾಳೆ ನಡೆಯಲಿರುವ ನಗರ ಸಭೆಯ ಸಾಮಾನ್ಯ ಸಭೆಯಲ್ಲಿ ಸೂಕ್ತ ನಿರ್ಣಯ ಕೈಗೊಳ್ಳುವ ಮೂಲಕ ಜನರಿಗೆ ಖಾತಾ ನೀಡಬೇಕು.
ಅದೇ ರೀತಿಯ ಪ್ರತಿ ವಾರ್ಡನಲ್ಲಿ ಕಸ ವಿಲೇವಾರಿಯ ಸರಿಯಾಗುವಂತೆ ಕ್ರಮ ತೆಗೆದುಕೊಳ್ಳುವ ಬೇಕು ಈಗಾಗಲೇ ರಾಯಚೂರ ನಗರದಲ್ಲಿ ರಾಶಿ ರಾಶಿ ಕಸ ಬಿದ್ದಿರುವ ಕಂಡುಬರುತ್ತದೆ ಇದನ್ನು ಸರಿಪಡಿಸುವ ಪ್ರಯತ್ನ ತಾವು ಮಾಡಿ ಸುಂದರ ನಗರ ಕಾಣುವಂತೆ ಮಾಡಬೇಕೆಂದು ಮನವಿ ಮಾಡಿಕೊಳ್ಳುತ್ತವೆ
ನಗರದಲ್ಲಿ ಕೆಲವು ಕಡೆ ಅರ್ಧ ಮಾಡಿ ಕೆಲಸ ಬಿಟ್ಟರುವದು ಕಂಡು ಬರುತ್ತವೆ ಇವುಗಳನ್ನು ಬೇಗನೇ ಮುಗಿಸಲು ನಿರ್ದೇಶನ ನೀಡಬೇಕು ಶಶಿಮಹಲ್ ಈರಣ್ಣ ವೃತ್ತದಲ್ಲಿ ಭಾರಿ ಗಾತ್ರದ ಸುರಂಗ ಮಾಡಿ ಕೆಲಸ ಮಾಡದೇ ಬಿಟ್ಟರುವ ಕಾರಣ ಜನರಿಗೆ ತುಂಬಾ ತೊಂದರೆ ಉಂಟಾಗುತ್ತಿದೆ .ಟಿಪ್ಪು ಸುಲ್ತಾನ ರಸ್ತೆಯ ಕಾಮಗಾರಿಯ,ಸೇತುವೆ ನಿರ್ಮಾಣ ಕಾಮಗಾರಿಯ ಬೇಗನೆ ಮುಗಿಸಲು ತಾವು ನಾಳೆ ನಡೆಯಲಿರುವ ನಗರ ಸಭೆಯ ಸಾಮಾನ್ಯ ಸಭೆಯುಲ್ಲಿ ಸೂಕ್ತ ನಿರ್ಣಯ ಕೈಗೊಂಡ ಜನತೆಗೆ ಸೌಲಭ್ಯ ಕಲ್ಪಿಸಬೇಕೆಂದು ಒತ್ತಯಿಸಿದರು.
ಈ ಸಂದರ್ಭದಲ್ಲಿ ಎನ್.ಶಿವಶಂಕರ ವಕೀಲ,ರಾಮಕೃಷ್ಣ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.