ನಗರದ ನಾಗರೀಕರಿಗೆ ವ್ಯಾಪಾರಿಗಳಿಗೆ ತಾಲೂಕಾಡಳಿತದಿಂದ ಕೊವಿಡ್ ಲಸಿಕೆ

ಲಿಂಗಸಗೂರು.ಜೂ.೦೫-ಕೊವಿಡ್ ನಿಯಂತ್ರಣಕ್ಕಾಗಿ ತಾಲೂಕಾಡಳಿತವು ಸತತವಾಗಿ ಶ್ರಮಿಸುತ್ತಿದ್ದು ಪಟ್ಟಣದ ಹಿರಿಕಿರಿ ನಾಗರೀಕರಿಗೆ ಮತ್ತು ವ್ಯಾಪಾರಿಗಳಿಗೆ ತಾಲೂಕಾಡಳಿತದವತಿಯಿಂದ ಕೊವಿಡ್ ಲಸಿಕೆಯನ್ನು ಹಾಕಿಸುವ ಕಾರ್ಯಕ್ರಮಕ್ಕೆ ಸಹಾಯಕ ಆಯುಕ್ತರಾದ ರಾಜಶೇಖರ ಡಂಬಳರವರು ಚಾಲನೆ ನೀಡಿದರು.
ಪಟ್ಟಣದ ಶಾಸಕರ ಶಾಲೆಯಲ್ಲಿ ತಾಲೂಕಾಡಳಿದಿಂದ ೪೫ ವರ್ಷದ ಒಳಗಿನವರಿಗೆ ಮತ್ತು ೪೫ ವರ್ಷ ಮೇಲ್ಪಟ್ಟ ನಾಗರೀಕರಿಗೆ ಹೀಗೆ ಎರಡು ವಿಭಾಗವನ್ನು ಮಾಡಿ ಕೊವಿಡ್ ಲಸಿಕೆಯನ್ನು ನೀಡಲಾಯಿತು ಈಗಾಗಲೆ ಬೀದಿಬದಿ ವ್ಯಾಪಾರಿಗಳಿಗೆ ಲಸಿಕೆ ಹಾಕಲಾಗಿದ್ದು ಒಟ್ಟ೩೬೮ ಇದ್ದು ಅದರಲ್ಲಿ ೩೦೦ ಜನರಿಗೆ ಹಾಕಲಾಗಿದೆ ೬೮ ಜನ ಮಾತ್ರ ಬಾಕಿ ಉಳಿದಿದೆ ಎಂದು ಹೇಳಲಾಗುತ್ತಿದೆ ಅದರಂತೆ ಇಂದು ಹೋಟೆಲ್ ಮತ್ತು ಕಿರಾಣಿ ಅಂಗಡಿಗಳ ಮಾಲೀಕರು ಮತ್ತು ಅದರಲ್ಲಿಯೆ ಕೆಲಸಗಾರರಿಗೆ ಲಸಿಕೆಯನ್ನು ಹಾಕಲಾಗಿದ್ದು ಹಂತಹಂತವಾಗಿ ನಗರದ ಎಲ್ಲರಿಗೂ ಲಸಿಕೆಯನ್ನು ಹಾಕುವ ಕೆಲಸವನ್ನು ತಾಲೂಕಾಡಳಿತದಿಂದ ಮಾಡಲಾಗುತ್ತಿದೆ ಎಂದು ಪುರಸಭೆಯ ಮುಖ್ಯಾಧಿಕಾರಿ ವಿಜಯಲಕ್ಷ್ಮೀಯವರು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಸಹಾಯಕ ಆಯುಕ್ತರಾದ ರಾಜಶೇಖರ ಡಂಬಳ, ತಹಸೀಲ್ದಾರ ಚಾಮರಾಜ ಪಾಟೀಲ್, ಪುರಸಭೆಯ ಮುಖ್ಯಾಧಿಕಾರಿ ವಿಯಲಕ್ಷ್ಮೀ ಸೇರಿದಂತೆ ಇದ್ದರು.