ನಗರದ ಜನತೆಗೆ ಸರ್ಕಾರದಿಂದ ೫ ಸಾವಿರ ಮನೆ ಮಂಜೂರು-ಶಾಸಕ

ಜಿಲ್ಲಾ ಬಿಜೆಪಿ ಪಕ್ಷ :ಪೌರಕರ್ಮಿಕರಿಗೆ ೨೮೦ ಆಹಾರ ಕಿಟ್ ವಿತರಣೆ
ರಾಯಚೂರು. ಜು.೦೯.ನಗರದ ಜನರಿಗೆ ಸರ್ಕಾರದಿಂದ ೩೮೦ಕೋಟಿ ವೆಚ್ಚದ ೫ ಸಾವಿರ ಮನೆಗಳು ಮಂಜೂರಾಗಿದ್ದು ಸ್ಥಳ ಇಲ್ಲದವರು ೬ ಲಕ್ಷ ಮೊತ್ತದ ಮನೆ ಪಡೆಯಬಹುದು ಎಂದು ನಗರ ಶಾಸಕ ಡಾ.ಎಸ್.ಶಿವರಾಜ ಪಾಟೀಲ್ ಅವರು ಹೇಳಿದರು.
ಅವರಿಂದು ನಗರದ ಆಕಾಶವಾಣಿ ಹಿಂಭಾಗದ ಬಿಜೆಪಿ ಕಚೇರಿಯಲ್ಲಿ ಏರ್ಪಡಿಸಿದ ಪೌರಕರ್ಮಿಕರಿಗೆ ಆಹಾರ ಕಿಟ್ ವಿತರಿಸಿ ಮಾತನಾಡಿದ ಅವರು ದೇಶದಲ್ಲಿ ಕೊರೊನ ಮಹಾಮಾರಿಯಿಂದ ಮಾನವ ಸಂಕುಲ ಸಂಕಷ್ಟಕ್ಕೆ ಸಿಲುಕಿದ್ದು ಆದರೆ ನಮ್ಮ ನಗರದಲ್ಲಿ ಪೌರಕರ್ಮಿಕ ಅಗಲು ರಾತ್ರಿ ಎನ್ನದೆ ಕೊರೊನ ವಿರುದ್ಧ ವಾರಿಯರ್ಸ್ ಆಗಿ ಸ್ವಚ್ಚತೆ,ಸ್ಯಾನಿಟೈಸರ್ ಸೇರಿದಂತೆ ಇನ್ನಿತರ ಕಾರ್ಯದಲ್ಲಿ ಸೇವೆ ಸಲ್ಲಿಸುತ್ತಿದ್ದರೆ.
ಕೊರೊನ ಸೋಂಕು ತಗುಲಿದ ಜನರನ್ನು ಪಕ್ಕದಲಿರುವರು ಮಾತಾಡಿಸದ ಸಮಯದಲ್ಲಿ ಪೌರ ಕಾರ್ಮಿಕರು ಮನೆ ಮನೆಗೆ ತೆರಳಿ ಕೆಲಸ ಮಾಡಿದ್ದಾರೆ.
ಪೌರಕರ್ಮಿಕರು ಕಾರ್ಯ ನಿವಾಹಿಸುತ್ತಿರುವುದರಿಂದ ನಗರದಲ್ಲಿ ಯಾವುದೇ ಯಾವುದೇ ಸಮಸ್ಯೆ ಉಂಟಾಗಿಲ್ಲ.
ಪ್ರತಿ ದಿನ ನಗರದ ಬದವಣೆಗಳಿಗೆ ತೆರಳಿ ಸ್ವಚ್ಛತೆ ಮಾಡುತಿದ್ದು ನೀವು ಮಾಡಿದ ಸೇವೆ ಪಕ್ಷದ ಮುಖಂಡರು ಇಂದು ಕಾಣಿಕೆ ರೂಪದಲ್ಲಿ ಆಹಾರ ಕಿಟ್ ವಿತರಿಸಲಾಗುತ್ತದೆ ಇಂದು ಸುಮಾರು ೨೮೦ ಜನ ಪೌರ ಕಾರ್ಮಿಕರಿಗೆ ಕಿಟ್ ವಿತರಿಸಲಾಗುವುದು ನೀವು ಸರ್ಕಾರ ಸೌಲಭ್ಯವನ್ನು ಪಡೆದುಕೊಳ್ಳಿ ನಗರದಲ್ಲಿ ೩೮೦ಕೋಟಿ ವೆಚ್ಚದ ೫ ಸಾವಿರ ಮನೆಗಳು ಮಂಜೂರಾಗಿದ್ದು ಸ್ಥಳ ಇಲ್ಲದವರು ೬ ಲಕ್ಷ ಮೊತ್ತದ ಮನೆ ಪಡೆಯಬಹುದು.
ಸ್ಲಮ್ ನಿವಾಸಿಗಳು ನಗರ ಸಭೆ ಸದಸ್ಯರಿಗೆ ಮನವಿ ಸಲ್ಲಿಸಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ರಾಮಾನಂದ ಯಾದವ್, ಬಿ.ಗೋವಿಂದ್,ವೈ.ಗೋಪಾಲ್ ರೆಡ್ಡಿ, ಕಡಗೋಲ ಆಂಜನೇಯ,ರವೀಂದ್ರ ಜಲ್ದಾರ್,
ಮುಕ್ತಿಯರ,ಸುದರ್ಶನ್ ರೆಡ್ಡಿ,ಈ ಶಶಿರಾಜ್ ಬಿ. ನಾಗರಾಜ್,ಎ.ಚಂದ್ರಶೇಖರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.