ನಗರದ ಕುಡಿಯುವ ನೀರಿನ ಸಮಸ್ಯೆ ನನ್ನ ಮೊದಲ ಆದ್ಯತೆ

ರಾಯಚೂರು,ಏ.೨೩- ಜೆಡಿಎಸ್ ಪಕ್ಷದಿಂದ ಇಂದು ನಗರದ ವಾರ್ಡ್‌ನ ೧೬ ರ ತಿಮ್ಮಾಪುರ ಪೇಟೆ ಬಡಾವಣೆಯಲ್ಲಿ ಚುನಾವಣೆ ಪ್ರಚಾರವನ್ನು ಕೈಗೊಳ್ಳಲಾಯಿತು.
ಇದೇ ಸಂದರ್ಭದಲ್ಲಿ ಮನೆ ಮನೆಗೆ ತೆರಳಿ ಜೆಡಿಎಸ್‌ಗೆ ಮತ ನೀಡುವಂತೆ ಪಕ್ಷದ ಅಭ್ಯರ್ಥಿ ವಿನಯ ಕುಮಾರ್ ಅವರು ಮತಯಾಚಿಸಿದರು.
ನಂತರ ಮಾತನಾಡಿದ ಅವರು,ರಾಯಚೂರು ನಗರದಲ್ಲಿ ಈಗಾಗಲೇ ಕುಡಿಯುವ ನೀರು ಸಮಸ್ಯೆ ಸಾಕಷ್ಟು ಇದ್ದು ಶಾಸಕ ಡಾ. ಶಿವರಾಜ ಪಾಟೀಲ್ ಅವರು ಯೋಜನೆಯನ್ನು ಹಳ್ಳ ಇಡಿಸಿದ್ದಾರೆ ೨೪೭ ಕುಡಿಯುವ ನೀರಿನ ನೀರಿನ ಅನುದಾನವನ್ನು ಲೂಟಿ ಮಾಡಿದ್ದಾರೆ ಆದ ಕಾರಣ ಮುಂದಿನ ದಿನಗಳಲ್ಲಿ ನಾನು ಚುನಾಯಿತನಾದರೆ ನಾನು ಕುಡಿಯುವ ನೀರಿನ ಸಮಸ್ಯೆಯನ್ನು ನಿವಾರಿಸುವ ಪ್ರಥಮ ಆದ್ಯತೆಯನ್ನು ನೀಡುತ್ತೇನೆ ಎಂದು ಹೇಳಿದರು. ಜಿಲ್ಲಾಧ್ಯಕ್ಷ ಎಂ ವಿರುಪಾಕ್ಷ ಅವರು ಮಾತನಾಡಿ,ಶಾಸಕರು ೬೦೦೦ ಕೋಟಿ ಅನುದಾನವನ್ನು ರಾಯಚೂರು ನಗರಕ್ಕೆ ತಂದಿದ್ದಾರೆ ಎಂದು ಹೇಳುತ್ತಾರೆ ಆದರೆ ಇದುವರೆಗೂ ಪ್ರತಿ ಬಡಾವಣೆಯಲ್ಲಿ ನೀರಿನ ಸಮಸ್ಯೆ ಇದೆ, ೨೪೭ ಕುಡಿಯುವ ನೀರಿನ ಮತ್ತು ಬಡಾವಣೆಯ ಒಳಚರಂಡಿಯ ಅನುದಾನವನ್ನು ಲೂಟಿ ಮಾಡಿ ಇವತ್ತು ಸಂಪೂರ್ಣ ರಾಯಚೂರು ನಗರವನ್ನು ಹೊಲಸು ನಗರ ಎಂದು ಮಾಡಿದ್ದಾರೆ ಅದಕಾರಣ ಮುಂದಿನ ದಿನಗಳಲ್ಲಿ ಅವರಿಗೆ ಸೋಲಿಸುವ ಮೂಲಕ ತಕ್ಕ ಪಾಠವನ್ನು ಜನರು ಕಲಿಸಬೇಕು ಹೇಳಿದರು.
ಹಿರಿಯ ಮುಖಂಡ ಈ ಅಂಜಿನಯ್ಯ ರಾಜ್ಯ ಉಪಾಧ್ಯಕ್ಷ ಮಹಾಂತೇಶ ಪಾಟೀಲ ಗೌರವ ಅಧ್ಯಕ್ಷ ಯೂಸುಫ್ ಖಾನ್. ಜಿಲ್ಲಾ ಕಾರ್ಯಾಧ್ಯಕ್ಷ ಎನ್ ಶಿವಶಂಕರ, ದಾನಪ್ಪ ಯಾದವ್, ವಿಶ್ವನಾಥ ಪಟ್ಟ. ರಾಮಕೃಷ್ಣ,ಫಾತಿಮಾ, ನರಸಿಂಹಲು ಮಡ್ಡಿಪೇಟ್, ಅಲಂಬಾಬು ನರಸಪ್ಪ ಆಶಾಪೂರ ಆದಿರಾಜ ಅಮ್ಜದ್ ಶಾಮಸುಂದರ್ ಸೀಮಾ ನಧಾಫ್ ಅಮ್ಜದ್, ರವಿ ಮಡಿವಾಳ,ಆದಿರಾಜಾ,ನರಸಪ್ಪ ಆಶಾಪೂರ,ನರಸಿಂಹಲು ಇಂದಿರಾನಗರ,ಅಂಜಿನಯ್ಯ ವಕೀಲರು,ನರಸಿಂಹಲು ಬಿ.ಕೆ ಬಾಬು ಅವಿಲ್ ಅಮಿತ್ ಸುಂಕಾರಿ,ಕುಮಾರಸ್ವಾಮಿ,ಪ್ರಕಾಶ ಮಹೇಶ ಸೇರಿದಂತೆ ಇತರರು ಉಪಸ್ಥಿತರಿದ್ದರು.