
(ಸಂಜೆವಾಣಿ ವಾರ್ತೆ)ಬಳ್ಳಾರಿ, ಏ.25: ಮಹಾನಗರ ಪಾಲಿಕೆಯ ನೂತನ ಆಯುಕ್ತರಾಗಿ ಆಗಮಿಸಿರುವ ಕಲೀಲ್ ಸಾಬ್ ಅವರನ್ನು ನಗರದ ಎಪಿಎಂಸಿಯ ದಲ್ಲಾಲಿ ವರ್ತಕರ ಸಂಘದ ಪದಾಧಿಕಾರಿಗಳು ಸನ್ಮಾನಿಸಿ ಗೌರವಿಸಿದ್ದಾರೆ.ಈ ಹಿಂದೆ ಬಳ್ಳಾರಿಯ ಎ.ಪಿ.ಎಂ.ಸಿಯಲ್ಲಿ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿ, ಸಧ್ಯ ಕೋಲಾರ ದಿಂದ ಬಳ್ಳಾರಿಗೆ ಬಡ್ತಿಯ ಮೇಲೆ ವರ್ಗಾವಣೆಯಾಗಿ ಕಾರ್ಯಭಾರ ವಹಿಸಿಕೊಂಡ ಕಲೀಲ್ ಸಾಬ್ ಅವರು ಎಪಿಎಂಸಿ ಅಭಿವೃದ್ದಿಗೆ ಸಹಕರಿಸಿದಂತೆ ನಗರದ ಅಭಿವೃದ್ಧಿಗೂ ಸರ್ವ ರೀತಿಯಲ್ಲಿ ಸಹಕರಿಸಬೇಕೆಂದು. ಎಪಿಎಂಸಿ ದಲ್ಲಾಲಿ ವರ್ತಕರ ಸಂಘದ ಅಧ್ಯಕ್ಷ ಬಿ.ಮಹಾರುದ್ರಗೌಡ, ಗೌರವ ಕಾರ್ಯದರ್ಶಿ ವಿ.ರಾಮಚಂದ್ರ, ಹನುಮೇಶ್ ಬಾಬು, ವೆಂಕಟೇಶ, ರಾಮಸ್ವಾಮಿ ಮತ್ತು ಡಿ.ವೀರೇಶ್ ಮತ್ತು ಸಂಘದ ಪದಾಧಿಕಾರಿಗಳು ಮನವಿ ಮಾಡಿದ್ದಾರೆ.