ನಗರದ ಅಭಿವೃದ್ಧಿಗಾಗಿ ನನಗೆ ಮತ ನೀಡಿ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಏ.13: ಕೆಅರ್ ಪಿ ಪಕ್ಷಕ್ಕೆ ಮತ ನೀಡಿ ನಗರದ ಅಭಿವೃದ್ಧಿಗೆ ಸಹಕಾರ ಮಾಡಿ ಎಂದು ಪಕ್ಷದ ನಗರದ  ಅಭ್ಯರ್ಥಿ ಗಾಲಿ ಲಕ್ಷ್ಮೀ ಅರುಣ ಜನಾರ್ಧನರೆಡ್ಡಿ ಅವರು ಮತದಾರರಲ್ಲಿ ಮನವಿ ಮಾಡಿದರು.
ಅವರು ಇಂದು ನಗರದ 10 ನೇ ವಾರ್ಡಿನ ರಾಣಿತೋಟದ ಪ್ರದೇಶದಲ್ಲಿ ತಮ್ಮ ಬೆಂಬಲಿಗರೊಂದಿಗೆ  ಮನೆ ಮನೆಗೆ ತೆರಳಿ ಮತಯಾಚನೆ ಮಾಡಿ ಮತದಾರರೊಂದಿಗೆ ಮಾತನಾಡುತ್ತಿದ್ದರು‌.
ಈ ಹಿಂದೆ ಪತಿ ಜನಾರ್ಧನರೆಡ್ಡಿ ಅವರು ಜಿಲ್ಲೆಯ ಉಸ್ತುವಾರಿ ಸಚಿವರಾದಾಗ ನಗರದ ರಸ್ತೆಗಳ ಅಗಲೀಕರಣ, ಕುಡಿಯುವ ನೀರಿನ‌ಕೆರೆ ಅಭಿವೃದ್ಧಿ, ಆಶ್ರಯ ಮನೆಗಳ ನಿರ್ಮಾಣಕ್ಕೆ ನಿವೇಶನ ಖರೀದಿ, ವಿಮಾನ ನಿಲ್ದಾಣ ನಿರ್ಮಾಣಕ್ಕೆ ಪ್ರಯತ್ನ, ಜಿಲ್ಲಾ ಕ್ರೀಡಾಂಗಣದ ಅಭಿವೃದ್ದಿ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿ ಮಾಡಿದ್ದನ್ನು ತಿಳಿಸಿ. ಮತ್ತಷ್ಟು ಅಭಿವೃದ್ಧಿಗಾಗಿ ತಮಗೆ ಮತ ನೀಡುವಂತೆ ಕೋರಿದರು.