ನಗರದ ಅಭಿವೃದ್ದಿಗೆ ಬದ್ಧ: ಅವಿನಾಶ ಕುಲಕರ್ಣಿ

ಕಲಬುರಗಿ ನ14: ಮಹಾನಗರದ ಸವಾರ್ಂಗೀಣ ಅಭಿವೃದ್ಧಿಗೆ ಬದ್ಧ ಎಂದು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅವಿನಾಶ ಕುಲಕರ್ಣಿ ಹೇಳಿದರು.
ಕರುಣೇಶ್ವರ ನಗರದ ಜೈ ವೀರಹನುಮಾನ ಮಂದಿರದಲ್ಲಿ ನಗರದ ವಿವಿಧ ಪಾರಾಯಣ ಸಂಘಗಳು ಆಯೋಜಿಸಿದ್ದ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ನಗರದಲ್ಲಿ ಸಂಚಾರ ಸಮಸ್ಯೆಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ರಾಮ ಮಂದಿರದಿಂದ ಹುಮನಾಬಾದ್ ರಿಂಗ್ ರಸ್ತೆ ವರೆಗೆ ಹಾಗೂ ಅನ್ನಪೂರ್ಣ ಕ್ರಾಸ್‍ದಿಂದ ಗುಲ್ಬರ್ಗ ವಿಶ್ವವಿದ್ಯಾಲಯದ ವರೆಗೆ ಮೇಲು ಸೇತುವೆ ನಿರ್ಮಿಸುವ ಕುರಿತು ಕೆಕೆಆರ್‍ಡಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ್ ರೇವೂರ ಜತೆ ಚರ್ಚಿಸಲಾಗಿದ್ದು,ಅವರು ಕೂಡ ಅಭಿವೃದ್ಧಿಕಾರ್ಯಕ್ಕೆ ಕೈ ಜೋಡಿಸುವ ಭರವಸೆ ನೀಡಿದ್ದಾರೆ.ನಗರದ ಉದ್ಯಾನವನಗಳನ್ನು ಅಭಿವೃದ್ಧಿ ಪಡಿಸುವುದು ನನ್ನ ಪ್ರಥಮ ಆದ್ಯತೆ ಆಗಿದೆ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಕೆಕೆಆರ್‍ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ್ ರೇವೂರ ನಗರಾಭಿವೃದ್ಧಿ ಪ್ರಾಧಿಕಾರ ಕೈಗೊಳ್ಳುವ ಅಭಿವೃದ್ಧಿ ಕಾರ್ಯಕ್ಕೆ ಅಗತ್ಯ ಅನುದಾನ ನೀಡುವ ಮೂಲಕ ಮಾದರಿ ನಗರವನ್ನಾಗಿ ಮಾಡುವ ಉದ್ದೇಶ ಹೊಂದಲಾಗಿದೆ.ಈಗಾಗಲೇ ಎಂ.ಎಸ್.ಕೆ ಮಿಲ್ ಹತ್ತಿರ ತರಕಾರಿ ಮಾರುಕಟ್ಟೆ ನಿರ್ಮಣ ಕಾರ್ಯ ಕೈಗೊಳ್ಳಲಾಗಿದೆ .ಹಂತ ಹಂತವಾಗಿ ನಗರದ ಅಭಿವೃದ್ಧಿಗೆ ಒತ್ತು ನೀಡುವುದಾಗಿ ಹೇಳಿದರು. ಪಾರಾಯಣದ ಸಂಘದ ಸಂಚಾಲಕರಾದ ರವಿ ಲಾತೂರಕರ್ ಮಾತನಾಡಿ ಕೂಡಾ ದಿಂದ ಮನೆಗಳನ್ನು ನಿರ್ಮಿಸಿ ಕಡಿಮೆ ದರದಲ್ಲಿ ನೀಡಬೇಕು.ನ್ಯೂ ರಾಘವೇಂದ್ರ ಕಾಲೋನಿ ರುದ್ರಭೂಮಿ ಕಾರ್ಯ ಇನ್ನೂ ಪೂರ್ಣ ಆಗಿಲ್ಲ .ಸುಂದರೀಕರಣ ಮಾಡಬೇಕು.ಬಡಾವಣೆಗಳ
ಉದ್ಯಾನ ಗಳಲ್ಲಿ ಮಕ್ಕಳಿಗಾಗಿ ಆಟದ ಸಾಮಗ್ರಿಗಳು ಆಗಬೇಕು ಎಂದು ಹೇಳಿದರು.ನಗರದ ವಿವಿಧ ಪಾರಾಯಣಗಳ ಸದಸ್ಯರಿಂದ ಸಾಮೂಹಿಕ ಪಾರಾಯಣ ನಡೆಯಿತು.ಪ್ರಮುಖರಾದ ರವಿ ಲಾತೂರಕರ್, ವಿಜಯಕುಮಾರ ಕುಲಕರ್ಣಿ, ಗುಂಡಚಾರ್ಯ ನರಬೊಳ, ರಾಮಾಚಾರ್ಯ ನಗನೂರ,ಗುರುರಾಜ್ ದೇಶಪಾಂಡೆ,ಜಗನ್ನಾಥ ಮೋಗರೆ,ಸಂತೋಷ್ ಕುಲ್ಕರ್ಣಿ,ಜನಕರಜ್,ರಾಘವೇಂದ್ರ ಆಶ್ರಿತ,ಪಾಂಡುರಂಗರಾವ್ ,ಗುರುರಾಜ ದೇಸಾಯಿ,ರಾಮಚಂದ್ರ ,ವಿನಾಯಕ,ಹೃಷಿಕೇಶ್, ನಾರಾಯಣಾಚಾರ್ಯ ಓಂಕಾರ, ಅನೀಲ ಕುಲಕರ್ಣಿ, ಶೇಷಮೂರ್ತಿ ಅವಧಾನಿ, ಶೇಷಗಿರಿ ಹುಣಸಗಿ ಶಾಮಸುಂದರ ಕುಲಕರ್ಣಿ, ಶ್ರೀನಿವಾಸ ದೇಸಾಯಿ,ಶೇಷ ಗಿರಿ ಭಟ್ಟರಕಿ,ಅಪ್ಪಾರಾವ್ ಟಕ್ಕಲಕಿ,ರಂಗರಾವ್, ಶ್ರೀನಿವಾಸ್‍ನೆಲೋಗಿ,ದೇವರಾಜ್ ಕಟ್ಟಿ,ಸಂತೋಷ್ ಕುಲ್ಕರ್ಣಿ,ಆರ್.ಕೆ ಕುಲ್ಕರ್ಣಿ,ವಿಷ್ಣು, ಸಂಕರ್ಷಣ ಸೇರಿದಂತೆ ಕರುಣೇಶ್ವರ ನಗರದ ನಿವಾಸಿಗಳು ಪಾಲ್ಗೊಂಡರು.