ಕಲಬುರಗಿ,ಸೆ.22-ನಗರದ ಅಂದ ಹೆಚ್ಚಿಸಲು ರಸ್ತೆ ಪಕ್ಕದಲ್ಲಿ ಮನೆಗಳ ಮುಂದೆ ಗಿಡ-ಮರ ಬೆಳೆಸುವಂತೆ ಮಹಾನಗರ ಪಾಲಿಕೆ ಆಯುಕ್ತ ಪಾಟೀಲ ಭುವನೇಶ ದೇವಿದಾಸ ಸಲಹೆ ನೀಡಿದರು.
ಪ್ರಭುದೇವ ನಗರದಲ್ಲಿ ಆಯೋಜಿಸಿದ್ದ ಗಣೇಶ ಉತ್ಸವ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಗಿಡ-ಮರ ಬೆಳೆಸುವುದರಿಂದ ಉತ್ತಮವಾದ ಗಾಳಿ ದೊರೆಯಲಿದೆ ಎಂದರು. ನಗರದ ಸ್ವಚ್ಛತೆಗೆ ಪ್ರತಿಯೊಬ್ಬರು ಆದ್ಯತೆ ನೀಡಬೇಕು ಎಂದು ತಿಳಿಸಿದರು.
ಪ್ರಭುದೇವ ನಗರ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಕಾರ್ಯಾಧ್ಯಕ್ಷ ಡಾ.ರಾಜಶೇಖರ ಪಾಟೀಲ ಅವರು ಪ್ರಭುದೇವ ನಗರಕ್ಕೆ ಸಿಸಿ ರಸ್ತೆ, ವಿದ್ಯುತ್ ದೀಪ ಮತ್ತು ಕುಡಿಯುವ ನೀರಿನ ಸೌಲಭ್ಯ ಕಲ್ಪಿಸುವಂತೆ ಆಯುಕ್ತರಿಗೆ ಮನವಿ ಮಾಡಿದರು.
ಬಡಾವಣೆಯ ಮುಖಂಡರಾದ ಪಂಡಿತರಾವ ಪಾಟೀಲ, ಮಹೇಶ ನಾಗೂರೆ, ಗುರುಲಿಂಗಪ್ಪ ಯಳಸಂಗಿ, ದತ್ತು ರೇವೂರ, ಮಂಜು ಕೋರಳ್ಳಿ ಸೇರಿದಂತೆ ಬಡಾವಣೆಯ ನಾಗರಿಕರು, ಮಹಾನಗರ ಪಾಲಿಕೆ ಅಧಿಕಾರಿಗಳು ಉಪಸ್ಥಿತರಿದ್ದರು.