ನಗರದೆಲ್ಲೆಡೆ ನಾಲ್ವಡಿ ಕಾರ್ಯಗಳ ಸ್ಮರಣೆ

ಮೈಸೂರು: ಜೂ.05:- ಕನ್ನಂಬಾಡಿ ಹಣೆಕಟ್ಟು ಸ್ಥಾಪನೆಯ ಪ್ರಮುಖ ಶ್ರೇಯಸ್ಸು ವಿಶ್ವೇಶ್ವರಯ್ಯಕ್ಕಿಂತಲೂ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಗೆ ಸಲ್ಲಬೇಕು ಎಂದು ಅಕ್ಕ ಐಎಎಸ್ ಅಕಾಡೆಮಿಯ ನಿರ್ದೇಶಕ ಡಾ.ಶಿವಕುಮಾರ್ ಅಭಿಪ್ರಾಯಪಟ್ಟರು.
ಮೈಸೂರಿನ ಕಲಾಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ, ನಗರಾಭಿವೃದ್ಧಿ ಪ್ರಾ„ಕಾರ, ಅರಮನೆ ಮಂಡಳಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಅರಸು ಮಂಡಳಿ ಸಂಘ ಹಾಗೂ ಅರಸು ಬಳಗಗಳ ಒಕ್ಕೂಟದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ರಾಜಶ್ರೀ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ 139ನೇ ಜಯಂತೋತ್ಸವದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದರು.
ಇತಿಹಾದ ಪುಟಗಳಲ್ಲಿ ಕೆಆರ್‍ಎಸ್ ನಿರ್ಮಾಣದ ಪ್ರಮುಖ ಶ್ರೇಯಸ್ಸನ್ನು ತಪ್ಪಾಗಿ ಅರ್ಥೈಸಲಾಗಿದೆ. ವಿಶ್ವೇಶ್ವರಯ್ಯ ಅವರು ಮೈಸೂರು ಸಂಸ್ಥಾನದ ದಿವಾನರಾಗಿ ಆಯ್ಕೆಯಾವಗುವ ಮೊದಲೇ ಕನ್ನಂಬಾಡಿ ಹಣೆಕಟ್ಟು ನಿರ್ಮಾಣಕ್ಕೆ ನೀಲಿ ನಕಾಶೆ ರೂಪಿಸಲಾಗಿತ್ತು. ಕಟ್ಟಡದ ಕಾರ್ಯ ಆರಂಭವಾಗುವಾಗ ಅವರು ದಿವಾನರಾಗಿ ಅಧಿಕಾರ ಸ್ವೀಕರಿಸಿದರು. ಅಲ್ಲದೇ ನಟ ಡಾ.ರಾಜ್‍ಕುಮಾರ್ ಅಭಿನಯದ ಬಂಗಾರದ ಮನುಷ್ಯ ಚಿತ್ರದ ಹಾಡೊಂದರಲ್ಲಿಗೆ ಇದನ್ನೇ ಹೇಳಾಗಿದೆ.ಹಾಗಾಗಿ ಸಂಬಂದಪಟ್ಟವರು ಈ ಸಾಲನ್ನು ಸರಿಪಡಿಸಬೇಕಿದೆ.ಇದರ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೂ ತರಲಾಗುವದು ಎಂದು ಹೇಳಿದರು.
ಮೈಸೂರೂ ಸಂಸ್ಥಾನ ವಿಶ್ವಮಾನ್ಯವಾಗಿ ಸರ್ವಾಂಗೀಣ ಪ್ರಗತಿ ಹೊಂದಲು ಕಾರಣರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಸಾಮಾಜಿಕ ಕಾನೂನುಗಳ ಹರಿಕಾರರಾಗಿದ್ದರು. ರಾಜಪ್ರಭುತ್ವದಲ್ಲಿ ಪ್ರಜೆಗಳು ರಾಜರ ಸೇವೆ ಮಾಡಬೇಕಾಗಿತ್ತು. ಆದರೆ, ರಾಜ ಪ್ರಭುತ್ವದ ನೈಜ ಅರ್ಥವನ್ನು ಅರ್ಥೈಸಿದವರು ನಾಲ್ವಡಿ ಕೃಷ್ಣರಾಜ ಒಡೆಯರು. ಪ್ರಜೆಗಳನ್ನು ಸಲಹಲಿಕ್ಕಾಗಿಯೇ ರಾಜನಿರುವುದು ಎಂಬುದನ್ನು ಮನಗಂಡಿದ್ದರು. ಪ್ರಜಾಪ್ರತಿನಿಧಿ ಸಭೆಯೊಂದರಲ್ಲಿ ರಾಜರು ತನ್ನ ಪ್ರಜೆಗಳಿಗೆ ಅಖಂಡವಾದ ಸುಖ ಸಂಪತ್ತನ್ನು ಒದಗಿಸುವುದೇ ನನ್ನ ಪರಮೋದ್ದೇಶವೆಂದಿದ್ದರು. ಆದ್ದರಿಂದಲೇ ಇಂದಿಗೂ ಎಲ್ಲರ ಮನೆ ಮನೆಗಳಲ್ಲಿ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರು ಶಾಶ್ವತವಾಗಿ ಉಳಿದುಕೊಂಡಿರುವುದು ಎಂದು ಶ್ಲಾಘಿಸಿದರು.
ಮೆಯರ್ ಶಿವಕುಮಾರ್ ಅವರು ಮಾತನಾಡಿ, ಇಡೀ ಏಷ್ಯಾದಲ್ಲಿ ಮೈಸೂರು ಯೋಜಿತ ನಗರ. ಇದಕ್ಕೆ ಕಾರಣೀಭೂತರು ನಾಲ್ವಡಿ ಕೃಷ್ಣರಾಜ ಒಡೆಯರು. ಇತಿಹಾಸದಲ್ಲಿಯೇ ಜನರಿಗಾಗಿ ಸಾಲ ಮಾಡಿ ಅಣೆಕಟ್ಟು ನಿರ್ಮಿಸಿದ ಏಕೈಕ ರಾಜ. ಮೈಸೂರಿಗೆ ಹಲವು ಪ್ರಥಮಗಳ ಕೊಡುಗೆ ನೀಡಿದ ದಕ್ಷ ಆಡಳಿತ ನಡೆಸಿದ ಹೆಮ್ಮೆಯ ಅರಸು ಕೃಷ್ಣರಾಜ ಒಡೆಯರ್ ಎಂದು ಸಂತೋಷ ವ್ಯಕ್ತಪಡಿಸಿದರು.
ಜಿಲ್ಲಾಧಿಕಾರಿ ಡಾ.ಕೆ ವಿ ರಾಜೇಂದ್ರ, ಶಾಸಕ ಟಿ.ಎಸ್ ಶ್ರೀವತ್ಸ, ಉಪ ಮೇಯರ್ ಡಾ.ಜಿ.ರೂಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ. ಎಂ ಡಿ ಸುದರ್ಶನ್, ಕರ್ನಾಟಕ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಜೆ ಗೋವಿಂದರಾಜು, ಅರಸು ಮಂಡಳಿ ಅಧ್ಯಕ್ಷ ಲಿಂಗರಾಜು ಅರಸ್, ಇತಿಹಾಸ ತಜ್ಞ ನಂಜರಾಜ ಅರಸು ಹಾಗೂ ಇತರರು ಉಪಸ್ಥಿತರಿದ್ದರು.
ಅರಮನೆಯಲ್ಲಿ ಸಂಭ್ರಮ: ಮೈಸೂರು ಅರಮನೆಯಲ್ಲಿ ಈ ಬಾರಿ ವಿಶೇಷವಾಗಿ ನಾಲ್ವಡಿಯವರ ಜಯಂತಿಯನ್ನ ಆಚರಿಸಲಾಯಿತು. ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ರಾಜವಂಶಸ್ಥೆ ಪ್ರಮೋದದೇವಿ ಒಡೆಯರ್ ಸೇರಿ ಅನೇಕ ಗಣ್ಯರು ನಾಲ್ವಡಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಇದೇ ವೇಳೆ ಪ್ರಥಮ ಬಾರಿಗೆ ಜಿಲ್ಲಾ ಸಚಿವರಾದ ಬಳಿಕ ಎಚ್.ಸಿ.ಮಹದೇವಪ್ಪ ರಾಜವಂಶಸ್ಥರನ್ನು ಭೇಟಿ ಮಾಡಿ ಅಭಿನಂದಿಸಿದರು.