ನಗರದೆಲ್ಲಡೆ ರಾಮನಾಮ‌ ಜಪಪೂಜೆ ಭಜನೆ ಪ್ರಸಾದ ವಿತರಣೆ

(ಸಂಜೆವಾಣಿ ಪತ್ರಿನಿಧಿಯಿಂದ)ಬಳ್ಳಾರಿ, ಜ.22: ಅಯೋದ್ಯಯಲ್ಲಿ ಬಾಲ ರಾಮನ ವಿಗ್ರಹದ ಪ್ರತಿಷ್ಠಾಪನೆ ಅಂಗವಾಗಿ ನಗರದೆಲ್ಲಡೆ ಇಂದು ಎಲ್ಲಿ‌ನೋಡಿದರಲ್ಲಿ ರಾಮನಾಮ‌ದ ಜಪದ ಧ್ವನಿ‌ ಮೊಳಗಿತು. ಆಂಜನೇಯ, ರಾಮ ಸೇರಿದಂತೆ ಇನ್ನಿತರ ದೇವಸ್ಥಾನಗಳಲ್ಲೂ ರಾಮನಿಗೆ ವಿಶೇಷ ಪೂಜಾ ಕೈಂಕರ್ಯ ಜನ ಸಮೂಹದಿಂದ ನಡೆಯಿತು.ಇಲ್ಲಿನ ಕುರಿಹಟ್ಟಿಯ ಅಸಂಜನೇಯ ದೇವಸ್ಥಾನದ ಬಳಿ ಮುಖ್ಯ ರಸ್ತೆಯನ್ನು ಬಂದ್ ಮಾಡಿ, ವಿಗ್ರಹ ಪ್ರತಿಷ್ಟಾಪನೆಯ ದೃಶ್ಯಗಳನ್ನು ನೇರವಾಗಿ ವೀಕ್ಷಣೆ ಮಾಡುವ ವ್ಯವಸ್ಥೆ ಮತ್ತು ಅನ್ನ ಸಂತರ್ಪಣೆ ನಡೆದರೆ.ಬಸ್ ಡಿಪೋ ಮುಂದಿನ ಅಸಂಜನೇಯನ ದೇವಸ್ಥಾನದಲ್ಲೂ ವಿಶೇಷ ಅಲಂಕಾರ ಮತ್ತು ಪ್ರಸಾದ್ ವಿತರಣೆ ಮಾಡಲಾಯ್ತು.ಇತ್ತ  ದೇವಿನಗರದ ಮೇದರವಾಡಿ ಬಳಿ ಶ್ರೀರಾಮನ ಮೂರ್ತಿ ಪ್ರತಿಷ್ಟಾಪನೆ ಮಾಡಿ ವಿಶೇಷ ಪೂಜೆ, ಅಲಂಕಾರದೊಂದಿಗೆ ಬಂದ ಭಕ್ತ ಸಮೂಹಕ್ಕೆ ಪ್ರಸಾದ ವಿತರಣೆ, ಅನ್ನದಾನ ನಡೆಯಿತು.ನಗರದ ಗವಿಯಪ್ಪ ಸರ್ಕಲ್  ನ  ರಾಮ ಮಂದಿರದ ಬಳಿ ಬೃಹತ್ ರಾಮನ ಕಟೌಟ್ ನಿಲ್ಲಿಸಿ ವಿಶೇಷ ಆಕರ್ಷಣೆ ಮಾಡಿ ಪೂಜೆ ಕೈಂಕರ್ಯದೊಂದಿಗೆ ಪ್ರಸಾದದ ವಿತರಣೆ ಸಹ ನಡೆಯಿತು. ಅಲ್ಲದೆ ತೇರು ಬೀದಿಯ ಜೈನ ಂಮದಿರದ ಬಳಿಯೂ ಲಾಡು ಪ್ರಸಾದ್ ವಿತರಣೆ ನಡೆಯಿತು.ಹೀಗೆ ನಗರದ ಬಹುತೇಕ ಕಡೆಗಳಲ್ಲಿ ರಾಮನ ಭಕ್ತ ಸಮೂಹ  ಭಜನೆ, ವಿಶೇಷ ಪೂಜೆ, ಅಭಿಷೇಕ, ಪ್ರಸಾದ ವಿತರಣೆ ಹಮ್ಮಿಕೊಂಡಿದ್ದು ಕಂಡು ಬಂತು.