ನಗರದಲ್ಲಿ 6,476 ಕೋವಿಡ್ ಪ್ರಕರಣ

ಬೆಂಗಳೂರು, ಮೇ ೬- ರಾಜ್ಯ ರಾಜಧಾನಿ ಅ ಬೆಂಗಳೂರಿನಲ್ಲಿ ಲಾಕ್ ಡೌನ್ ಬಳಿಕ ದಿನೇ ದಿನೇ ಕೊರೋನಾ ಸೋಂಕಿನ ಪ್ರಕರಣಗಳು ತಗ್ಗುತ್ತಿದ್ದು, ಬುಧವಾರ ಮಧ್ಯಾಹ್ನ ಸುಮಾರಿಗೆ
೬,೪೭೬ ಜನರಲ್ಲಿ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ.
ನಗರದ ಮಹಾದೇವಪುರದಲ್ಲಿ ೧,೦೮೧ ಪ್ರಕರಣ ಬೆಳಕಿಗೆ ಬಂದಿದ್ದರೆ, ಬೊಮ್ಮನಹಳ್ಳಿಯಲ್ಲಿ ೬೫೯, ದಾಸರಹಳ್ಳಿ ೨೨೭, ಬೆಂಗಳೂರು ಪೂರ್ವ ೮೭೮, ಆರ್.ಆರ್ ನಗರ ೪೦೫, ಬೆಂಗಳೂರು ದಕ್ಷಿಣ ೬೪೭, ಬೆಂಗಳೂರು ಪಶ್ಚಿಮ ೪೮೮, ಯಲಹಂಕ ೪೨೨ ಜನರಲ್ಲಿ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ.
ಕಳೆದ ೨೪ ಗಂಟೆಗಳಲ್ಲಿ ನಗರದಲ್ಲಿ ೬,೨೪೩ ಪ್ರಕರಣಗಳು ಪತ್ತೆಯಾಗಿತ್ತು. ೩೫೦ ಮಂದಿ ಮೃತಪಟ್ಟಿದ್ದರು. ನಗರದಲ್ಲಿ ಈವರೆಗೆ ೨,೧೯,೫೫೧ ಸಕ್ರಿಯ ಪ್ರಕರಣಗಳಿವೆ.
ನಿನ್ನೆ ೫೬,೧೬೪ ಜನರ ಕೋವಿಡ್ ಸೋಂಕು ಪರೀಕ್ಷೆ ನಡೆಸಿದ್ದು, ಪಾಸಿಟಿವಿಟಿ ಪ್ರಮಾಣ ಶೇ. ೩೦.೭೫ರಷ್ಟು ಇದ್ದು, ಮರಣ ಪ್ರಮಾಣ ಶೇ. ೧.೫೦ರಷ್ಟು ಇದೆ ಎಂದು ಬಿಬಿಎಂಪಿ ತಿಳಿಸಿದೆ.
೭೭೭ ಸೋಂಕಿತರು ನಾಪತ್ತೆ..!
ಕೋವಿಡ್ ಸೋಂಕು ದೃಢಪಟ್ಟ ಮಾಹಿತಿ ತಿಳಿದು ೭೭೭ ಸೋಂಕಿತರು ನಾಪತ್ತೆ ಆಗಿದ್ದಾರೆ. ಅಧಿಕಾರಿಗಳ ಕೈಗೆ ಸಿಗದೆ ಮೊಬೈಲ್ ಸಂಪರ್ಕ ಕಡಿತಗೊಳಿಸಿದ್ದಾರೆ.