ನಗರದಲ್ಲಿ 50 ಇಂದಿರಾ ಕ್ಯಾಂಟಿನ್ ಆರಂಭ

ಬೆಂಗಳೂರು, ಜೂ.೪- ರಾಜಧಾನಿ ಬೆಂಗಳೂರಿನಲ್ಲಿ ಶೀಘ್ರದಲ್ಲಿ ೫೦ ಇಂದಿರಾ ಕ್ಯಾಂಟೀನ್ ಹೊಸದಾಗಿ ಆರಂಭಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ .
ಇಂದಿರಾ ಕ್ಯಾಂಟೀನ್ ಸಂಖ್ಯೆಯನ್ನು ೧೯೮ ರಿಂದ ೨೫೦ ಕ್ಕೆ ಹೆಚ್ಚಿಸಲು ರಾಜ್ಯ ಸರ್ಕಾರ ಮುಂದಾಗಿದ್ದು, ಈ ಮೂಲಕ ಬಡವರ ಇಂದಿರಾ ಕ್ಯಾಂಟೀನ್ ಜನರ ಹೊಟ್ಟೆ ತುಂಬಿಸಲಿದೆ. ಗುಣಮಟ್ಟದ ಆಹಾರ ನೀಡಲು ಸರ್ಕಾರಕ್ಕೆ ಬಿಬಿಎಂಪಿ ಪ್ರಸ್ತಾವನೆ ಸಲ್ಲಿಸಿದೆ ಎಂದು ಉನ್ನತ ಮೂಲ ಗಳು ತಿಳಿಸಿವೆ.
ಬೆಂಗಳೂರಿನಲ್ಲಿ ೨೫೦ ಇಂದಿರಾ ಕ್ಯಾಂಟೀನ್ ತಲೆ ಎತ್ತಲಿದ್ದು, ವಿವಿಧ ಬಗೆಯ ತಿಂಡಿ ಊಟ ಸಿಗಲಿದೆ. ಜೂನ್ ೨೯ ರಿಂದ ಕ್ಯಾಂಟೀನ್ ಆರಂಭವಾಗಲಿದ್ದು, ತಿಂಡಿಗೆ ೧೦ ರೂ, ಊಟಕ್ಕೆ ೨೦ ರೂ ಬೆಲೆ ನಿಗದಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಬೆಲೆ ಏರಿಸಿ ಶುಚಿಕರ ತಿಂಡಿ ಊಟ ನೀಡಲು ಸಿದ್ದತೆ ನಡೆಸಲಾಗಿದೆ ಎನ್ನಲಾಗಿದೆ.
ಇಂದಿರಾ ಕ್ಯಾಂಟೀನ್‌ನಲ್ಲಿ ಬೆಳಗ್ಗೆ ತಿಂಡಿಗೆ ೨ ಇಡ್ಲಿ ೧ ವಡೆ, ಉಪ್ಪಿಟ್ಟು, ಕೇಸರಿಬಾತ್, ಬಿಸಿಬೇಳೆ ಬಾತ್, ಪೂಳಿಯೋಗೆರೆ, ಚಿತ್ರಾನ್ನ , ವಾಂಗಿಬಾತ್, , ರೈಸ್ ಬಾತ್ ಟೋಮ್ಯಾಟೋ ಬಾತ್ ಸಿಗಲಿದೆ.
ಮಧ್ಯಾಹ್ನ ಊಟಕ್ಕೆ ಒಂದು ಚಪಾತಿ, ಮುದ್ದೆ, ಒಂದು ವೆಜ್ ಪಲ್ಯಾ, ಕಪ್ ವೈಟ್ ರೈಸ್, ಸಾಂಬಾರ್ ಹಾಗೂ ರಸಂ, ವೆಜ್ ಪಲ್ಯಾ ಸಿಗಲಿದೆ. . ಇನ್ನು ವಾರದಲ್ಲಿ ಮೂರು ದಿನ ಮಧ್ಯಾಹ್ನ ಸಿಹಿ ತಿಂಡಿ , ಹೋಳಿಗೆ, ಅಕ್ಕಿಪಾಯಸ, ಕೇಸರಿ ಬಾತ್ ಹಾಗೂ ರಾತ್ರಿ ಊಟಕ್ಕೆ ರೈಸ್ ಬಾತ್, ಅನ್ನ ಸಾಂಬಾರ್ ಇರಲಿದೆ ಎಂದು ಸರ್ಕಾರದ ಉನ್ನತ ಮೂಲಗಳು ಮಾಹಿತಿ ನೀಡಿವೆ.