ನಗರದಲ್ಲಿ 5 ಹೊಸ ಓವರ್ ಹೆಡ್ ಟ್ಯಾಂಕ್:ಸೋಮಶೇಖರರೆಡ್ಡಿ

ಬಳ್ಳಾರಿ, ಜೂ.03: ನಗರದಲ್ಲಿ ಕುಡಿಯುವ ನೀರು ಮತ್ತು ಒಳಚರಂಡಿ ಕಾಮಗಾರಿಗಳಿಗೆ ಹೆಚ್ಚಿನ ಒತ್ತು ನೀಡಲು ನಗರ ಶಾಸಕ ಗಾಲಿ ಸೋಮಶೇಖರರೆಡ್ಡಿ ಪಾಲಿಕೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಇಂದು ಪಾಲಿಕೆಯಲ್ಲಿ ಆಯುಕ್ತರೊಂದಿಗೆ ಮಹಾತ್ಮಗಾಂಧಿ ನಗರ ವಿಕಾಸ ಯೋಜನೆ ಬಗ್ಗೆ ಪರಿಶೀಲನೆ ನಡೆಸಿದ ಶಾಸಕರು ಜನತೆಗೆ ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಹವಂಬಾವಿ, ಇಂದಿರಾನಗರದ, ಹೌಸಿಂಗ್ ಬೋರ್ಡ್ ಕಾಲೋನಿ, ಗುಗ್ಗರಹಟ್ಟಿ, ಡಿ.ಸಿ.ನಗರ, ಸೇರಿದಂತೆ ನಗರದ 5 ಕಡೆಗಳಲ್ಲಿ ಓವರ್ ಹೆಡ್ ಟ್ಯಾಂಕ್ ಗಳನ್ನು ನಿರ್ಮಿಸಬೇಕು, ಅಲ್ಲದೆ ಒಳ ಚರಂಡಿ ಕಾಮಗಾರಿಗಳಿಗೆ ಒತ್ತು ನೀಡಬೇಕೆಂದು ತಿಳಿಸಿದರು.
ನಿಗಧಿತ ಸಮಯದಲ್ಲಿ ಕಾಮಗಾರಿಗಳನ್ನು ಗುಣಮಟ್ಟದಿಂದ ಮುಗಿಸುವಂತೆ ಸೂಚಿಸಿದರು.