ನಗರದಲ್ಲಿ 24*7 ಕುಡಿಯುವ ನೀರಿನ ವ್ಯವಸ್ಥೆ, ಡ್ರೈನೇಜ್, ಸಿ.ಸಿ ರಸ್ತೆ ಕಾಮಗಾರಿಗಳು ಪ್ರಾರಂಭದಲ್ಲಿವೆಃ ಶಾಸಕ ಬಸನಗೌಡ ಪಾಟೀಲ್

ವಿಜಯಪುರ, ನ.9-ನಗರದಲ್ಲಿ 24*7 ಕುಡಿಯುವ ನೀರಿನ ವ್ಯವಸ್ಥೆ, ಡ್ರೈನೇಜ್, ಸಿ.ಸಿ ರಸ್ತೆ ಕಾಮಗಾರಿಗಳು ಪ್ರಾರಂಭದಲ್ಲಿವೆ, 265 ಕೋಟಿ ರೂ ಮೊತ್ತದಲ್ಲಿ ನಗರಕ್ಕೆ ಅಂಡರ್‍ಗ್ರೌಂಡ್ ಕೇಬಲ್ ಅಳವಡಿಸುವ ಮೂಲಕ ವಿದ್ಯುತ್ ನೀಡಲಾಗುತ್ತದೆ ಇದು ಕರ್ನಾಟಕದಲ್ಲಿ ನಾಲ್ಕನೇ ನಗರವಾಗಲಿದೆ ಇದರಿಂದಾಗಿ ವಿದ್ಯುತ್ ಕಂಭಗಳಿಂದಾಗುವ ಸಾಕಷ್ಟು ಅನಾಹುತಗಳು ತಪ್ಪುತ್ತವೆ ಒಟ್ಟಿನಲ್ಲಿ ವಿಜಯಪುರ ನಗರ ಸಂಪೂರ್ಣ ಅಭಿವೃದ್ಧಿ ಕಾಣುತ್ತದೆ ಎಂದು ವಿಜಯಪುರ ನಗರ ಶಾಸಕ ಬಸನಗೌಡ ರಾ ಪಾಟೀಲ್ ಯತ್ನಾಳ ಹೇಳಿದರು.
ನಗರದ ಡಾ.ಬಿ.ಆರ್.ಅಂಬೇಡ್ಕರ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗಿನ ರಸ್ತೆಗೆ ಅಭಿನವ ಪಂಪ ಶ್ರೀ ನಾಗಚಂದ್ರ ಕವಿ ಮಾರ್ಗ ಎಂದು ನಾಮಕರಣ ಮಾಡಿ ಫಲಕ ಉದ್ಘಾಟಿಸಿ ನಂತರ ನಗರದ ಘೇವರಚಂದ ಕಾಲನಿಯಲ್ಲಿ ನವಗ್ರಹ ಹನುಮಾನ ದೇವರಿಗೆ 6.5 ಕೆ.ಜಿ ಬೆಳ್ಳಿಯ ಕವಚ ಹಾಗೂ ನವಗ್ರಹ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಪ್ರಧಾನಮಂತ್ರಿ ಆವಾಸ ಯೋಜನೆಯಲ್ಲಿ ಮನೆಗಳನ್ನು ಕಟ್ಟಲಾಗುತ್ತಿದೆ ಪ.ಜಾ.ಪ.ಪಂ ಫಲಾನುಭವಿಗಳಿಗೆ ವಂತಿಗೆ ಹಣ ತುಂಬುವುದರಲ್ಲಿ ಕಡಿಮೆ ಮಾಡಿರುವಂತೆ ಸಾಮಾನ್ಯ ವರ್ಗದ ಫಲಾನುಭವಿಗಳಿಗೂ ವಂತಿಗೆ ಹಣ ಕಡಿಮೆ ಮಾಡಿಸಲು ಪ್ರಯತ್ನಿಸು ತ್ತಿದ್ದೇನೆ ಎಂದರು. ನಗರದ ಅಲ್ಲಲ್ಲಿ ತರಕಾರಿ ಮಾರುಕಟ್ಟೆಗಳಿದ್ದು ಅಲ್ಲಿ ರೈತರು ತಾವು ಬೆಳೆದ ತರಕಾರಿಗಳನ್ನು ಮಾರಲು ಬರುತ್ತಾರೆ ಅವರೊಂದಿಗೆ ಚೌಕಾಸಿ ಮಾಡದೇ ಹೂವು, ಹಣ್ಣು, ತರಕಾರಿ ಕರೀದಿಸಿ, ಇದರಿಂದಾಗಿ ಬಡ ವ್ಯಾಪಾರಸ್ಥ ಮಹಿಳೆರು, ಹೊಲದಲ್ಲಿ ತಾವು ಬೆಳೆದ ತರಕಾರಿ ಮಾರಲು ಬರುವಂತಹ ರೈತರಿಗೆ ಅನುಕೂಲವಾಗಲಿದೆ ಮತ್ತು ತಮ್ಮ ತಮ್ಮ ಕಾಲೋನಿಗಳಲ್ಲಿ ತರಕಾರಿ ಮಾರುಕಟ್ಟೆಗಳಿರುವುದರಿಂದ ನಿಮಗೂ ಸಹ ಅನಕೂಲವಾಗಲಿದೆ ಎಂದರು.
ಈ ಸಂದರ್ಭದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀಹರಿ ಗೊಳಸಂಗಿ, ಸಂತೋಷ ಪಾಟೀಲ್, ಸಂಜಯ್ ಪಾಲ್ಲ್ ಕನಮಡಿ, ರಾಜಶೇಕರ ಮಗೀಮಠ, ಪ್ರಕಾಶ ಚವ್ಹಾಣ, ಶೀತಲಕುಮಾರ ಓಗಿ, ಬಸವರಾಜ ಗೊಳಸಂಗಿ, ರಾಜಶೇಖರ ಭಜಂತ್ರಿ, ನಾಗರಾಜ ಮುಳವಾಡ, ಶರಣು ಕಾಖಂಡಕಿ ಇತರರು ಉಪಸ್ಥಿತರಿದ್ದರು.