ನಗರದಲ್ಲಿ ಸ್ವಚ್ಛ ಭಾರತ್ ಅಭಿಯಾನ

ಬೆಂಗಳೂರು, ಮೇ. ೨೬-ಪರಿಸರ ಸಂರಕ್ಷಣೆ ಪ್ರಮುಖ ಗುರಿಯೊಂದಿಗೆ ಕೇಂದ್ರ ಸರ್ಕಾರವು ಸ್ವಚ್ಛ ಭಾರತ್ ಮಿಷನ್ ೨.೦ ಅಡಿಯಲ್ಲಿ ನನ್ನ ಜೀವನ, ನನ್ನ ಸ್ವಚ್ಛ ನಗರ ಎಂಬ ಅಭಿಯಾನವನ್ನು ರಾಜಧಾನಿ ಬೆಂಗಳೂರಿನಲ್ಲಿ ಹಮ್ಮಿಕೊಂಡಿದೆ.
ಜೂ.೫ ವರೆಗೂ ಬೆಂಗಳೂರಿನ ಎಲ್ಲೆಡೆ ಪರಿಣಾಮಕಾರಿಯಾಗಿ ಈ ಅಭಿಯಾನ ನಡೆಯಲಿದ್ದು, ಸಾರ್ವಜನಿಕರಲ್ಲಿ ಒಣ ತ್ಯಾಜ್ಯವನ್ನು ಕಡಿಮೆಗೊಳಿಸುವುದು, ಮರು ಬಳಕೆ ಹಾಗೂ ಪುನರ್ ಬಳಕೆ ಮಾಡುವುದನ್ನು ಪ್ರೋತ್ಸಾಹಿಸುವ ಉದ್ದೇಶ ಇದಾಗಿದೆ.
ಬಿಬಿಎಂಪಿ ವ್ಯಾಪ್ತಿಯ ಎಂಟು ವಲಯ ಸೇರಿದಂತೆ ೪೮ ಕಡೆಗಳಲ್ಲಿ ಮರು ಬಳಕೆ, ಪುನರ್ ಕೇಂದ್ರಗಳನ್ನು ತೆರೆದು ಸಾರ್ವಜನಿಕರಲ್ಲಿ ತ್ಯಾಜ್ಯದ ಬಗ್ಗೆ ಅರಿವು ಮೂಡಿಸಲಾಗುತ್ತಿದೆ ಎಂದು ಬಿಬಿಎಂಪಿ ಮಾಹಿತಿ ನೀಡಿದೆ.
ಇನ್ನೂ, ನವೀಕರಿಸಿ ಮರು ಬಳಸ ಬಹುದಾ ದತಂಹ ವಸ್ತುಗಳ ಉತ್ಪಾದನೆಯನ್ನು ಕಡಿಮೆಗೊಳಿಸಲು ಹಾಗೂ ಸುಸ್ಥಿರ ಜೀವನ ಪದ್ಧತಿಗಳನ್ನು ಅಳವಡಿಸಿ ಕೊಳ್ಳುವ ಮೂಲಕ ಪರಿಸರ ಸಂರಕ್ಷಿವುದು ಲೈಪ್ ಮಿಷನ್ ಪ್ರಮುಖ ಉದ್ದೇಶ.
ಈ ನಿಟ್ಟಿನಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ ೪೮ ಕೇಂದ್ರವನ್ನು ತೆರೆಯಲು ಕೇಂದ್ರ ಸರ್ಕಾರ ಸೂಚನೆ ನೀಡಿದೆ. ಕೇಂದ್ರಗಳ ಮೂಲಕ ಸಂಗ್ರಹವಾಗುವ ತಾಜ್ಯ ವಸ್ತುಗಳನ್ನು ಸಂಬಂಧಿಸಿದ ಇಲಾಖೆಗಳಿಗೆ ವಿಶೇಷವಾಗಿ ಹಳೆ ಪುಸ್ತಕ, ದಿನಪತ್ರಗಳನ್ನು ಗ್ರಂಥಾಲಯಕ್ಕೆ ಇ ತ್ಯಾಜ್ಯವನ್ನು ಎಲೆಕ್ಟ್ರಾನಿಕ್ ಏಜೆನ್ಸಿಗೆ, ಮಕ್ಕಳ ಆಟಿಕೆಗಳನ್ನು ಶಿಶು ಪಾಲನಾ ಮಂದಿರಗಳಿಗೆ ನೀಡುವಂತೆ ಸೂಚಿಸಲಾಗಿದೆ.