ನಗರದಲ್ಲಿ ಸ್ಯಾನಿಟೈಸಿಂಗ್

ಮೈಸೂರು,ಮೇ.4:- ಮೈಸೂರು ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೋನಾ ಸೋಂಕು ಹೆಚ್ಚುತ್ತಿದ್ದು, ಈ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲಾಡಳಿತ ಪ್ರಮುಖ ಬೀದಿಗಳಿಗೆ ಸ್ಯಾನಿಟೈಸ್ ಮಾಡುವ ಕಾರ್ಯಕ್ರಮ ಹಮ್ಮಿಕೊಂಡಿದೆ.
ಮೈಸೂರು ನಗರದಲ್ಲಿಯೂ ಹೆಚ್ಚಿನ ಸೋಂಕು ಪಗ್ರಕರಣಗಳು ಕಂಡು ಬರುತ್ತಿರುವ ಹಿನ್ನೆಲಯಲ್ಲಿಂದು ಮೈಸೂರು ಅರಸು ರೋಡ್, ಸಯ್ಯಾಜಿರಾವ್ ರೋಡ್ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಸ್ಯಾನಿಟೈಸ್ ನಡೆಸಿದೆ. ಕೆಟ್ಟ ವೈರಾಣುಗಳ ನಾಶಕ್ಕೋಸ್ಕರ ಸ್ಯಾನಿಟೈಸ್ ಸಿಂಪಡಣೆ ಕಾರ್ಯ ನಡೆದಿದೆ. ಸಾರ್ವಜನಿಕರು ಸಾಮಾಜಿಕ ಅಂತರವನ್ನು ಮರೆತು ಅಗತ್ಯ ವಸ್ತುಗಳ ಖರೀದಿಗೆ ಮುಗಿಬೀಳುವ ಕಾರಣ ಎಂ.ಜಿ.ರಸ್ತೆಯಲ್ಲಿನ ಅಂಗಡಿಗಳನ್ನು ಬಂದ್ ಮಾಡಿಸಲಾಗಿದೆ. ಎಂ.ಜಿ.ರಸ್ತೆಯಲ್ಲಿಯೂ ಸ್ಯಾನಿಟೈಸ್ ಕಾರ್ಯ ನಡೆದಿದೆ. ಹೆಚ್ಚಿನ ಪ್ರಮಾಣದಲ್ಲಿ ಜನರು ಸಂಚಾರ ನಡೆಸಿದ್ದ ರಸ್ತೆಗಳಲ್ಲಿ ಪ್ರಮುಖವಾಗಿ ಸ್ಯಾನಿಟೈಸ್ ಕಾರ್ಯ ನಡೆದಿದೆ.