ನಗರದಲ್ಲಿ ವಿದ್ವಾನ್ ನಂಜುಂಡಾರಾಧ್ಯರ ಜನ್ಮ‌ದಿನಾಚರಣೆ

(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಸೆ.25:  ನಗರದ ಶ್ರೀ ಜಂಬುನಾಥೇಶ್ವರ ಜೋತಿಷ್ಯಾಲಯದಲ್ಲಿ ವಿದ್ವಾನ ನಂಜುಂಡಾರಾಧ್ಯರ ಜನ್ಮ ದಿನಾಚರಣೆಯನ್ನು ನಿನ್ಮೆ  ಆಚರಿಸಲಾಯಿತು.
ಮುಖ್ಯ ಅತಿಥಿಗಳಾಗಿ ಜಿಲ್ಲಾ ಪುರೋಹಿತರ ಸಂಘದ ಜಿಲ್ಲಾಧ್ಯಕ್ಷ ಬಿ.ಎಂ ಈಶ್ವರಯ್ಯ ಶಾಸ್ತ್ರಿಗಳು ಆಗಮಿಸಿದ್ದರು. ದೊಡ್ಡಬಸವ ಗವಾಯಿಗಳು ದಂಪತಿಗಳ ಸಮೇತ ಆಗಮಿಸಿ ಭಕ್ತಿ ಗೀತೆಗಳನ್ನು ಹಾಡುವುದರ ಮೂಲಕ ಕಲಾ ಸೇವೆಯನ್ನು ಸಮರ್ಪಿಸಿದರು.
ದಮ್ಮೂರು ಮಲ್ಲಿಕಾರ್ಜುನ ಶಾಸ್ತ್ರಿಗಳು ಪ್ರಸ್ತಾವಿಕವಾಗಿ ಮಾತನಾಡಿ ಶ್ರೀ ಜಂಬುನಾಥೇಶ್ವರ ಜೋತಿಷ್ಯಾಲಯದ ಪ್ರಕಾಶ ಶಾಸ್ತ್ರಿಗಳು  ವಿದ್ವಾನ ಎಂ. ಜಿ.ನಂಜುಂಡಾರಾಧ್ಯರ ಜನ್ಮ ದಿನವನ್ನು ತಮ್ಮ ಕಛೇರಿಯಲ್ಲಿ ಆಚರಿಸಿರುವುದು.ಉತ್ತಮವಾದ ಕಾರ್ಯ, ಮುಂದಿನ ಯುವ ಪೀಳಿಗೆಗೆ ಇಂತಹ ಮಹನೀಯರ ಜನ್ಮ ದಿನಾಚರಣೆ ಆಚರಿಸುವುದರ ಮೂಲಕ ಅವರ ಜೀವನ ಮತ್ತು ಇತಿಹಾಸವನ್ನು ಪರಿಚಯಿಸುವುದು.ಅತ್ಯವಶ್ಯಕ ಎಂದು ತಿಳಿಸಿದರು.
ರುದ್ರ ಗುರುಕುಲ ಟ್ರಸ್ಟ್ ನ ಮಹಾಂತೇಶ ಶಾಸ್ತ್ರಿಗಳ ಶಿಷ್ಯ ವೃಂದದಿಂದ ವೇದ ಪಠಣ ನೆರವೇರಿಸಿದರು.ನಂತರ ಮಕ್ಕಳಿಗೆ ಶ್ರೀ ರುದ್ರ ಪುಸ್ತಕಗಳನ್ನು ಪ್ರಕಾಶ ಶಾಸ್ತ್ರಿ ಮತ್ತು ಅತಿಥಿಗಳಿಂದ ವಿತರಿಸಲಾಯಿತು.
ಈ ಸಂದರ್ಭದಲ್ಲಿ  ವೀರಭದ್ರಯ್ಯ ಶಾಸ್ತ್ರಿ, ಕಪ್ಪಗಲ್ ಶಾಂತೇಶ ಶಾಸ್ತ್ರಿ, ವರಗಾಯತ್ರಿ ಟ್ರಸ್ಟ್ ನ ಶಿವಲಿಂಗಯ್ಯ ಶಾಸ್ತ್ರಿ, ಕೆ.ಎಂ ಶಿವಾನಂದ ಶಾಸ್ತ್ರಿ,ವೈ ಎಂ.ರುದ್ರ ಮುನಿ ಶಾಸ್ತ್ರಿ ಎನ್.ಎಂ ಮಲ್ಲಿಕಾರ್ಜುನ ಶಾಸ್ತ್ರಿಗಳು ಉಪಸ್ಥಿತರಿದ್ದರು.
ರವೀಂದ್ರ ಹಿರೇಮಠ ಕಾರ್ಯಕ್ರಮ ನಿರೂಪಿಸಿದರು.ವೆಂಕಟಗಿರಿ ವಂದಿಸಿದರು.