ನಗರದಲ್ಲಿ ವಿಜಯ ಸಂಕಲ್ಪ ಅಭಿಯಾನ

ಕಲಬುರಗಿ, ಜ 22: ಕೇಂದ್ರ ಮತ್ತು ರಾಜ್ಯ ಸರ್ಕಾರದ ಜನಪರ ಯೋಜನೆ, ಸಾಧನೆಗಳನ್ನು ರಾಜ್ಯದ ಮನೆ ಮನೆಗೆ ತಲುಪಿಸಲು ರಾಜ್ಯದಾದ್ಯಂತ ವಿಜಯ ಸಂಕಲ್ಪ ಅಭಿಯಾನ ಆರಂಭವಾಗಿದೆ.
ನಗರದಲ್ಲಿ ಕ್ರೇಡಲ ಅಧ್ಯಕ್ಷ ಚಂದು ಪಾಟೀಲ,ಬಿಜೆಪಿ ವಿಭಾಗ ಸಂಘಟನಾ ಕಾರ್ಯದರ್ಶಿ ಅರುಣ ಬಿನ್ನಾಡಿ,ಮುಖಂಡರಾದ ಅಮರನಾಥ ಪಾಟೀಲ, ಬಿಜೆಪಿ ನಗರ ಜಿಲ್ಲಾ ಅಧ್ಯಕ್ಷ ಸಿದ್ದಾಜಿ ಪಾಟೀಲ,ಮಂಡಲದ ಅಧ್ಯಕ್ಷ ಅಶೋಕ ಮಾನಕರ,ಮಹಾನಗರ ಪಾಲಿಕೆಯ ಸದಸ್ಯರು,
ಪ್ರಧಾನ ಕಾರ್ಯದರ್ಶಿ ಉಮೇಶ ಪಾಟೀಲ,ಪದಾಧಿüಕಾರಿಗಳು,ಕಾರ್ಯಕರ್ತರು ಹಾಗೂ ಪಕ್ಷದ ಪ್ರಮುಖರೊಂದಿಗೆ ವಿಜಯ ಸಂಕಲ್ಪ ಅಭಿಯಾನಕ್ಕೆ ಚಾಲನೆ ನೀಡಿದರು.ಮನೆ ಮನೆಗೆ ತೆರಳಿ ಸ್ಟಿಕ್ಕರ್, ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಾಧನೆಗಳ ಕರಪತ್ರ ನೀಡಿ,ಗೋಡೆ ಬರಹ ಅಭಿಯಾನದಲ್ಲಿ ಪಾಲ್ಗೊಂಡರು.