ನಗರದಲ್ಲಿ ರಾರಾಜಿಸಿದ ಕೈ ನಾಯಕರ ಫ್ಲೆಕ್ಸ್‌ಗಳು

ನಗರದಲ್ಲಿ ರಾರಾಜಿಸಿದ ಕೈ ನಾಯಕರ ಫ್ಲೆಕ್ಸ್

ಬೆಂಗಳೂರು,ಮೇ.೨೦- ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಪ್ರಮಾಣವಚನ ಸ್ವೀಕಾರ ಸಮಾರಂಭದ ಹಿನ್ನೆಲೆಯಲ್ಲಿ ನಗರದ ದಶ ದಿಕ್ಕುಗಳಲ್ಲಿ ಶುಭಾಶಯ ಕೋರುವ ಬ್ಯಾನರ್ ಬಂಟಿಂಗ್ಸ್ ಗಳು ಭರಾಟೆ ಕಂಡು ಬಂದವು.
ನಗರದ ಮೂಲೆ ಮೂಲೆಗಳಲ್ಲಿ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಅವರಿಗೆ ಶುಭಾಶಯ ಕೋರುವ ಹಾಗೂ ನೂತನ ಸಚಿವರಾಗುವ ಶಾಸಕರಿಗೂ ಅಭಿನಂದನೆಗಳ ಮಹಾಪೂರ ಹರಿದು ಬಂದಿದೆ.ಪ್ರಮಾಣವಚನ ಸ್ವೀಕಾರ ಸಮಾರಂಭ ಆಯೋಜನೆಯಾಗಿದ್ದ ಕಂಠೀರವ ಹೊರಾಂಗಣ ಕ್ರೀಡಾಂಗಣದ ಸುತ್ತಮುತ್ತಲ ರಸ್ತೆಗಳೆಲ್ಲ ತುಂಬೆಲ್ಲ ಬ್ಯಾನರ್ ಬಂಟಿಂಗ್ಸ್‌ಗಳು ರಾರಾಜಿಸಿದವು.ಕಾಂಗ್ರೆಸ್ ಪಕ್ಷದ ಅಭಿಮಾನಿಗಳು ಕಾರ್ಯಕರ್ತರು ತಮ್ಮ ತಮ್ಮ ನೆಚ್ಚಿನ ನಾಯಕರಿಗೆ ಶುಭಕೋರುವ ಬಂಟಿಂಗ್ಸ್ ಗಳು ಬ್ಯಾನರ್ ಗಳು ಎಲ್ಲಡೆ ರಾರಾಜಿಸುವ ಮೂಲಕ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಉತ್ಸಾಹ ಮುಗಿಲುಮಟ್ಟಿತು.ಕಂಠೀರವ ಕ್ರೀಡಾಂಗಣ ಸಂಪರ್ಕ ಮಾಡುವ ಸುತ್ತಮುತ್ತಲ ರಸ್ತೆಗಳು ಕಾರ್ಪೊರೇಷನ್ ವೃತ್ತ ಕೆ ಅರ್ ವೃತ್ತ ವಿಧಾನಸೌಧದ ರಸ್ತೆ, ಸಿದ್ದರಾಮಯ್ಯ ಅವರ ನಿವಾಸ ಡಿಕೆ ಶಿವಕುಮಾರ್ ಅವರ ನಿವಾಸ ಸೇರಿದಂತೆ ನಗರದ ಪ್ರಮುಖ ಭಾಗಗಳಲ್ಲಿ ಶುಭಾಶಯ ಕೋರುವ ಬಂಟಿಂಗ್ಸ್, ಬ್ಯಾನರ್ಸ್‌ಗಳು ಕಂಡುಬಂದವು.ರಾಜ್ಯದ ಮುಖ್ಯಮಂತ್ರಿ ಆಗಿ ಸಿದ್ದರಾಮಯ್ಯನವರು ಎರಡನೇ ಬಾರಿ ಹಾಗೂ ಇದೇ ಮೊದಲ ಬಾರಿ ಉಪಮುಖ್ಯಮಂತ್ರಿಯಾಗಿ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಅವರು ಪ್ರಮಾಣವಚನ ಸ್ವೀಕಾರ ಮಾಡಿದ ಈ ಸಂಭ್ರಮವನ್ನು ಅಭಿಮಾನಿಗಳು, ಕಾರ್ಯಕರ್ತರು ಖುಷಿ ಪಟ್ಟ ರೀತಿ ಸಂಭ್ರಮ ಮೇರೆ ಮೇರಿತ್ತು.ನಗರದ ದಶ ದಿಕ್ಕುಗಳಲ್ಲೂ ಕಾಂಗ್ರೆಸ್ ಪಕ್ಷದ ಸರ್ಕಾರದ ಸಂಭ್ರಮವನ್ನು ಅದ್ದೂರಿಯಾಗಿ ಬರಮಾಡಿಕೊಳ್ಳುವ ಮತ್ತು ನೂತನ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಯವರಿಗೆ ಶುಭಾಶಯ ಕೋರುವ ಬ್ಯಾನರ್‌ಹಳು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಮತ್ತು ನಾಯಕರಲ್ಲಿ ಮತ್ತಷ್ಟು ಉತ್ಸಾಹ ಹೆಚ್ಚುವಂತೆ ಮಾಡಿತ್ತು.ಕಾಂಗ್ರೆಸ್ ಪಕ್ಷದ ಸರ್ಕಾರದಲ್ಲಿ ಮುಖ್ಯಮಂತ್ರಿ ಉಪಮುಖ್ಯಮಂತ್ರಿಯ ಮತ್ತು ಸಚಿವರ ಪ್ರಮಾಣವಚನ ಸ್ವೀಕಾರ ಸಮಾರಂಭ ಅಭಿಮಾನಿಗಳು ಕಾರ್ಯಕರ್ತರ ದಂಡಿನಿಂದ ತುಂಬಿ ತುಳುಕಾಡುವಂತಾಗಿತ್ತು