ನಗರದಲ್ಲಿ ರಂಜಾನ್ ಪ್ರಾರ್ಥನೆ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಏ.11: ನಗರದ ಕೌಲಬಜಾರ್  ಬಳಿಯ ಈದ್ಗಾ ಮೈದಾನದಲ್ಲಿ ಇಂದು ರಂಜಾನ್ ಹಬ್ಬದ ಪ್ರಯುಕ್ತ ಹೊಸ ಬಟ್ಟೆ ತೊಟ್ಟ ಮುಸ್ಲಿಂ ಸಮುದಾಯದ ಜನತೆ  ರಂಜಾನ್ ಪ್ರಾರ್ಥನೆ ಸಲ್ಲಿಸಿದರು.
ಮುಸ್ಲಿಂ ಧರ್ಮಗುರು ಎಲ್ಲರಿಗೂ ಪ್ರರ್ಥನೆ ಮತ್ತು ಧರ್ಮ ಸಂದೇಶ ನೀಡಿದರು.
ಸಚಿವ ನಾಗೇಂದ್ರ, ಬಿಜೆಪಿ ಅಭ್ಯರ್ಥಿ ಮಾಜಿ ಸಚಿವ  ಶ್ರೀರಾಮುಲು ಶಾಸಕ ಭರತ್ ರೆಡ್ಡಿ  ಕಾಂಗ್ರೆಸ್ ಅಭ್ಯರ್ಥಿ, ಮಾಜಿ ಸಚಿವ ತುಕಾರಾಂ, ನಗರ ಪಾಲಿಕೆ ಸದಸ್ಯರು ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗಿಯಾಗಿದ್ದರು.
ಪ್ರಾರ್ಥನೆ ಬಳಿಕ ಸಮುದಾಯದ ಜನತೆಗೆ ಪರಸ್ಪರ ಆಲಿಂಗನ ಮಾಡಿಕೊಂಡು ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.