
ಖಾಕಿ ಕಣ್ಗಾವಲು
ಪ್ರಧಾನಿ ನರೇಂದ್ರ ಮೋದಿ ಸಂಜೆ ರೋಡ್ ಶೋ ನಡೆಸಲಿರುವ ಹಿನ್ನೆಲೆಯಲ್ಲಿ ಸಿಸಿ ಟಿವಿ ಅಳವಡಿಸುತ್ತಿರುವುದು.
ಬೆಂಗಳೂರು,ಏ.೨೯-ರಾಜ್ಯ ವಿಧಾನಸಭಾ ಚುನಾವಣೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ ಇಂದು ರಾಜ್ಯಕ್ಕೆ ಆಗಮಿಸಲಿರುವ
ಪ್ರಧಾನಿ ನರೇಂದ್ರ ಮೋದಿ ಅವರು ಸಂಜೆ ನೈಸ್? ರಸ್ತೆಯಿಂದ ಸುಮ್ಮನಹಳ್ಳಿ ಜಂಕ್ಷನ್‌ವರೆಗೆ ರೋಡ್ ಶೋ ನಡೆಸಲಿದ್ದು, ಹೆಜ್ಜೆ ಹೆಜ್ಜೆಗೂ ಖಾಕಿ ಕಾವಲು ಹಾಕಲಾಗಿದೆ.
ಎರಡು ದಿನ ರಾಜ್ಯ ಪ್ರವಾಸ ಮಾಡಲಿರುವ ಮೋದಿ, ೬ ಸಮಾವೇಶ ೨ ರೋಡ್?ಶೋ ನಡೆಸಲಿದ್ದಾರೆ. ಹೀಗಾಗಿ ಎಲ್ಲಾ ರೀತಿಯ ತಯಾರಿಗಳನ್ನು ಮಾಡಿಕೊಳ್ಳಲಾಗಿದೆ. ಮೋದಿ ಸಂಚರಿಸುವ ರಸ್ತೆಯುದ್ದಕ್ಕೂ ೧ ಸಾವಿರ ಮನೆ ಮತ್ತು ಅಂಗಡಿಗಳಿಗೆ ನೋಟಿಸ್ ನೀಡಲಾಗಿದೆ.
ಮೋದಿ ರೋಡ್ ಶೋ ಭದ್ರತೆಗೆ ೨,೬೦೦ ಪೊಲೀಸರ ನಿಯೋಜನೆ ಮಾಡಲಾಗಿದೆ. ಇಬ್ಬರು ಹೆಚ್ಚುವರಿ ಪೊಲೀಸ್ ಆಯುಕ್ತರು, ೬ ಡಿಸಿಪಿ, ೧೮ ಎಸಿಪಿ, ೧೨೦ಕ್ಕೂ ಹೆಚ್ಚು ಪಿಐ, ೨೫೦ ಪಿಎಸ್‌ಐ, ೨,೬೦೦ಕ್ಕೂ ಹೆಚ್ಚು ಪಿಸಿಗಳು, ಕೆಎಸ್‌ಆರ್‌ಪಿ ಸಿಬ್ಬಂದಿ ಮೋದಿ ರೋಡ್ ಶೋ ಭದ್ರತೆಗೆ ನಿಯೋಜಿಸಲಾಗಿದೆ. ಮೋದಿ ರೋಡ್ ಶೋ ವೇಳೆ ರಸ್ತೆ ಬಳಿಯ ಅಂಗಡಿ ಮುಂಗಟ್ಟು ಬಂದ್ ಮಾಡಿಸಲಾಗುತ್ತದೆ. ರಸ್ತೆಯ ಒಂದು ಭಾಗಕ್ಕೆ ಬ್ಯಾರಿಕೇಡ್ ಅಳವಡಿಸಲಾಗಿದೆ. ಒಟ್ಟು ೬ ಕಿ.ಮೀ. ರೋಡ್ ಶೋ ನಡೆಯಲಿದ್ದು ಮೋದಿ ರೋಡ್ ಶೋಗೆ ೨ ಲಕ್ಷ ಜನರನ್ನು ಸೇರಿಸಲು ಬಿಜೆಪಿ ಸಿದ್ಧತೆ ನಡೆದಿದೆ.
ರೋಡ್ ಶೋ ಹಿನ್ನೆಲೆ ಕೆಲ ರಸ್ತೆಗಳಲ್ಲಿ ವಾಹನ ಸಂಚಾರ ನಿರ್ಬಂಧ
ಮಾಗಡಿ ರಸ್ತೆಯ ನೈಸ್ ಜಂಕ್ಷನ್‌ನಿಂದ ಸುಮನಹಳ್ಳಿ ಸರ್ಕಲ್‌ವರೆಗೂ ನರೇಂದ್ರ ಮೋದಿ ರೋಡ್ ಶೋ ನಡೆಸಲಿದ್ದಾರೆ. ರೋಡ್ ಶೋ ನಡೆಯುವ ಸುತ್ತಮುತ್ತಲ ರಸ್ತೆಯಲ್ಲಿ ಸಂಚಾರ ನಿರ್ಬಂಧ ಹೇರಲಾಗಿದೆ. ಇಂದು ಮಧ್ಯಾಹ್ನ ೨ರಿಂದ ಸಂಜೆ ೭.೩೦ರವರೆಗೆ ಸಂಚಾರ ನಿರ್ಬಂಧಿಸಲಾಗಿದೆ.
ಎಲ್ಲೆಲ್ಲಿ ಸಂಚಾರ ನಿರ್ಬಂಧ:
ಓಲ್ಡ್ ಏರ್‌ಪೋರ್ಟ್ ರಸ್ತೆ, ಕಬ್ಬನ್ ರಸ್ತೆ, ಅಂಬೇಡ್ಕರ್ ರಸ್ತೆ, ಕೃಂಬಿಗಲ್ ರಸ್ತೆ, ದೇವಾಂಗ ರಸ್ತೆ, ಕೇಂಬ್ರಿಡ್ಜ್ ಲೇಔಟ್ ರಸ್ತೆ, ಡಿಕನ್‌ಸನ್ ರಸ್ತೆ, ಲಾಲ್‌ಬಾಗ್ ವೆಸ್ಟ್ ಗೇಟ್ ರಸ್ತೆ, ಕೆ.ಆರ್.ಸರ್ಕಲ್, ಆರ್.ವಿ.ಕಾಲೇಜ್ ರಸ್ತೆ, ಲಾಲ್‌ಬಾಗ್ ಮುಖ್ಯ ರಸ್ತೆ, ಬಸನವಗುಡಿ ೫೦ ಅಡಿ ರಸ್ತೆ, ಕೆನರಾ ಬ್ಯಾಂಕ್ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ.
ಪರ್ಯಾಯ ಮಾರ್ಗ:
ಮಾಗಡಿಯಿಂದ ಬೆಂಗಳೂರು ಸಂಚರಿಸುವವರು ತಾವರೆಕೆರೆ ಜಂಕ್ಷನ್‌ನಲ್ಲಿ ಬಲತಿರುವು ಪಡೆದು ಹೆಮ್ಮಿಗೆಪುರ ಕೊಮ್ಮಘಟ್ಟ ಕೆಂಗೇರಿ ಮೂಲಕ ಮೈಸೂರು ರಸ್ತೆಗೆ ಸಂಚರಿಸಬಹುದಾಗಿದೆ.
ಮಾಗಡಿಯಿಂದ ತುಮಕೂರು ರಸ್ತೆಯತ್ತ ಸಾಗುವವರು ತಾವರೆಕೆರೆ ಜಂಕ್ಷನ್‌ನಲ್ಲಿ ಎಡತಿರುವು ಪಡೆದು ಸೊಂಡೇಕೊಪ್ಪ ನೆಲಮಂಗಲ ಮೂಲಕ ಸಂಚರಿಸಬಹುದು. ತುಮಕೂರಿಂದ ನೈಸ್ ರಸ್ತೆ ಕಡೆ ಹೋಗುವವರು ನೆಲಮಂಗಲ ಸೊಂಡೇಕೊಪ್ಪ ಬೈಪಾಸ್‌ನಲ್ಲಿ ಬಲತಿರುವು ಪಡೆದು ಸೊಂಡೇಕೊಪ್ಪ-ತಾವರೆಕೆರೆ ? ಹೆಮ್ಮಿಗೆಪುರ-ಕೊಮ್ಮಘಟ್ಟ-ಕೆಂಗೇರಿ ಮೂಲಕ ಮೈಸೂರು ರಸ್ತೆಗೆ ಸಂಚರಿಸಬಹುದು.
ಬುಲೆಟ್ ಪ್ರೂಫ್ ವಾಹನ:
ಮಾಗಡಿ ರಸ್ತೆ ಕಡೆ ಓಡಾಡುವವರು ಎಂ.ಸಿ. ಸರ್ಕಲ್‌ನಲ್ಲಿ ಎಡತಿರುವು ಪಡೆದು ಮೈಸೂರು ರಸ್ತೆ-ಕೆಂಗೇರಿ – ಕೊಮ್ಮಘಟ್ಟ, ಹೆಮ್ಮಿಗೆಪುರ – ತಾವರೆಕೆರೆ ಮೂಲಕ ಸಂಚರಿಸಬಹುದು. ಇನ್ನು ನಾಯಂಡಹಳ್ಳಿಯಿಂದ ತುಮಕೂರು ರಸ್ತೆಗೆ ಹೋಗಲು ನಾಯಂಡಹಳ್ಳಿ ಜಂಕ್ಷನ್ ಮೂಲಕ ಮೈಸೂರು ರಸ್ತೆಗೆ ಚಲಿಸಿ ಕೆಂಗೇರಿ ಆರ್ ಆರ್ ಕಾಲೇಜು ರಸ್ತೆ ಮೂಲಕ ತೆರಳಬೇಕು. ಬಳಿಕ ರಾಮೋಹಳ್ಳಿ, ಚಂದ್ರಪ್ಪ ಸರ್ಕಲ್, ತಾವರೆಕೆರೆ ಮೂಲಕ ಮಾಗಡಿ ರಸ್ತೆ ಮತ್ತು ತುಮಕೂರು ರಸ್ತೆಗೆ ಸಂಚರಿಸಬಹುದು.
ಸಿ.ಎಂ.ಟಿ.ಐ ಜಂಕ್ಷನ್‌ನಿಂದ ನಾಯಂಡಹಳ್ಳಿ ಮೈಸೂರು ರಸ್ತೆ ಕಡೆಗೆ ಹೋಗಲು ಗೊರಗುಂಟೆಪಾಳ್ಯ – ವೆಸ್ಟ್ ಆಫ್ ಕಾರ್ಡ್ ರಸ್ತೆ, ಎಂ.ಸಿ ಸರ್ಕಲ್ – ವಿಜಯನಗರ ಮೂಲಕ ಮೈಸೂರು ರಸ್ತೆಗೆ ಸಂಚರಿಸಬಹುದು.
ಮೋದಿ ರೋಡ್ ಶೋ ವೇಳೆ ಬುಲೆಟ್ ಪ್ರೂಫ್ ವಾಹನದಲ್ಲಿ ಕ್ಯಾಂಪೇನ್ ಮಾಡಲಿದ್ದಾರೆ. ದೆಹಲಿಯಿಂದ ಬಂದಿರುವ ಪ್ರತ್ಯೇಕ ಬುಲೆಟ್ ಪ್ರೂಫ್ ವಾಹನದಲ್ಲೇ ಮೋದಿ ರೋಡ್ ಶೋ ಮಾಡಲಿದ್ದಾರೆ.