ನಗರದಲ್ಲಿ ಮೊಳಗಿದ ಬೃಹತ್ ಭೀಮಘರ್ಜನೆ ಮೆರವಣಿಗೆ

ರಾಯಚೂರು,ಏ.೧೫- ಅಂಬೇಡ್ಕರ್ ನವಯುವ ಸಂಘ ಹಾಗೂ ಛಲವಾದಿ ಮಹಾಸಭಾದಿಂದ ಭಾರತರತ್ನ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ೧೩೨ನೇ ಜನ್ಮ ದಿನಾಚರಣೆ ಅಂಗವಾಗಿ ನಗರದಲ್ಲಿ ಬೃಹತ್ ಭಾವಚಿತ್ರ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಯಿತು.
ಮೆರವಣಿಗೆಯಲ್ಲಿ ಯುವಕರು,ಮಹಿಳೆಯರು,ಮಕ್ಕಳು ಉತ್ಸಾಹದಿಂದ ಭಾಗವಹಿಸಿದ್ದರು.
ಅಂಬೇಡ್ಕರ್ ಅವರ ಭಾವಚಿತ್ರದೊಂದಿಗೆ ಸಹಸ್ರಾರು ಜನರುಳ್ಳ ಮೆರವಣಿಗೆ ಉತ್ಸಾಹದಿಂದ ಸಾಗಿತು.ನಗರದಾದ್ಯಂತ ಇಡೀ ದಿನ ಹಬ್ಬದ ವಾತವರಣ ನಿರ್ಮಾಣವಾಗಿತ್ತು.
ಮೆರವಣಿಗೆಯು ವಾರ್ಡ್ ನಂಬರ್ ೧೪ ಮಂಗಳವಾರ ಪೇಟೆಯ ಡಾ. ಬಿ.ಆರ್.ಅಂಬೇಡ್ಕರ್ ಸಮುದಾಯ ಭವನದಿಂದ ಪ್ರಾರಂಭವಾಗಿ ತೀನ್ ಖಂದಿಲ್,ಏಕ್ ಮಿನಾರ್, ಮಹಿಳಾ ಸಮಾಜ,ಪೋಸ್ಟ್ ಆಫೀಸ್,ನಗರಸಭೆ ರಸ್ತೆ ಮೂಲಕ ಡಾ. ಬಿ.ಆರ್.ಅಂಬೇಡ್ಕರ್ ವೃತ್ತದವರೆಗೆ ನಡೆಸಿ ನಂತರ ಡಾ. ಬಿ.ಆರ್.ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮೂಲಕ ಮೆರವಣಿಗೆಯನ್ನು ಮುಕ್ತಾಯಗೊಳಿಸಿದರು.