ನಗರದಲ್ಲಿ ಮಾದರಿ ವಾರ್ಡು ನನ್ನ ಗುರಿ ಮತಹಾಕಿ ಬೆಂಬಲಿಸಿ:ತಿಲಕ್

ಬಳ್ಳಾರಿ, ಏ.26: ಕಳೆದ ಎರುಡ ಬಾರಿ ಆಯ್ಕೆಯಾದ ಕಾಂಗ್ರೆಸ್ ಅಭ್ಯರ್ಥಿಯಿಂದ 10ನೇ ವಾರ್ಡು ಅಭಿವೃದ್ಧಿಯಾಗಿಲ್ಲ. ಮಾದರಿ ವಾರ್ಡನ್ನಾಗಿ ಮಾಡುವ ಧ್ಯೇಯದೊಂದಿಗೆ ನಾನು ಕಣಕ್ಕಿಳಿದಿದ್ದು. ಜನತೆ ನನ್ನನ್ನು ಬೆಂಬಲಿಸಲಿದ್ದಾರೆಂದು ಬಿಜೆಪಿ ಅಭ್ಯರ್ಥಿ ತಿಲಕ್ ಕುಮಾರ್ ಕೆ. ಹೇಳಿದ್ದಾರೆ.
ಅವರಿಂದು ಸಂಜೆವಾಣಿಯೊಂದಿಗೆ ಮಾತನಾಡಿದ , ಈಗಾಗಲೇ ನಗರದಲ್ಲಿ ವಿದ್ಯಾಸಂಸ್ಥೆಯನ್ನು ನಡೆಸುತ್ತಿರುವ ನಾನು ಮಕ್ಕಳಿಗೆ ಶಿಕ್ಷಣ ನೀಡಲು ಪೋಷಕರ ಆಶಯವನ್ನು ಬಲ್ಲವನಾಗಿದ್ದೇನೆ. ಶಿಕ್ಷಣ ಸೇವೆ ಮಾಡುತ್ತಿರುವ ನಾನು ಜನ ಸೇವೆಯನ್ನು ಮಾಡಬೇಕೆಂಬ ಮಹದುದ್ದೇಶದಿಂದ 10ನೇ ವಾರ್ಡಿನಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದೇನೆ.
ವಾರ್ಡಿನಲ್ಲಿ ಪ್ರತಿ ಮನೆ, ಮನೆಗೆ ತೆರಳಿ ಮತದಾರರನ್ನು ಮಾತನಾಡಿಸಿ ಅವರು ವಾರ್ಡಿನಲ್ಲಿ ಎದುರಿಸುತ್ತಿರುವ ಅಸ್ವಚ್ಛತೆ, ಒಳಚರಂಡಿ ಮೊದಲಾದ ಸಮಸ್ಯೆಗಳ ಕುರಿತು ತಿಳಿದಿರುವೆ. ನನ್ನನ್ನು ಆಯ್ಕೆ ಮಾಡಿ ರಾಜ್ಯ ಮತ್ತು ರಾಷ್ಟ್ರದಲ್ಲಿ ಬಿಜೆಪಿ ಸರ್ಕಾರವಿದ್ದು ನಗರ ಪಾಲಿಕೆಯಲ್ಲೂ ಬಿಜೆಪಿ ಅಧಿಕಾರಕ್ಕೆ ಬರಲಿದ್ದು ಈ ವಾರ್ಡಿನ ಸರ್ವತೋಮುಖ ಅಭಿವೃದ್ಧಿ ಮಾಡಿ ಮಾದರಿ ವಾರ್ಡನ್ನಾಗಿ ಮಾಡಲಿದೆ ಎಂಬ ಭರವಸೆ ಮೇರೆಗೆ ಮತದಾರರ ಒಲವೆಲ್ಲ ನನ್ನ ಕಡೆ ಹೆಚ್ಚಿ ಅಲ್ಪಸಂಖ್ಯಾತ ಮುಖಂಡರು ನನಗೆ ಬೆಂಬಲ ವ್ಯಕ್ತಪಡಿಸಿದ್ದಾರೆ ಎಂದರು.
ಅಷ್ಟೇ ಅಲ್ಲದೆ ಪಕ್ಷದ ಹಿರಿಯ ಮುಖಂಡರ, ಕಾರ್ಯಕರ್ತರ, ಬೆಂಬಲಿಗರ ಸಹಕಾರ ನನ್ನ ಗೆಲುವಿಗೆ ಕಾರಣವಾಗಲಿದೆ ಎಂದರು.

ಕಾಂಗ್ರೆಸ್ ನ ಹಿರಿಯ ಮುಖಂಡ ಕೆ.ಸಿ.ಕೊಂಡಯ್ಯ ಅವರು ಮಾಹಿತಿ ಕೊರತೆಯಿಂದ ನಮ್ಮ ವಾರ್ಡಿನ ಕಾಂಗ್ರೆಸ್ ಅಭ್ಯರ್ಥಿ ಮರಿದೇವಯ್ಯ, ಸ್ಥಳೀಯರೆಂದು ನಾನು ಹೊರಗಿನವನೆಂದು ಹೇಳಿದ್ದಾರೆ. ಅದರೆ ಮರಿದೇವಯ್ಯ ಅವರು ಸಹ ಕಳೆದ 8-10 ವರ್ಷಗಳಿಂದ ವಾರ್ಡಿನಿಂದ ದೂರವಿರುವ ರಾಘವೇಂದ್ರ ಕಾಲೋನಿಯಲ್ಲಿ ವಾಸವಾಗಿದ್ದಾರೆ. ಅವರು, ವಾರ್ಡಿನ ಅಭಿವೃದ್ಧಿ ಮಾಡದ ಕಾರಣ ಇಂದು ಜನ ನನ್ನ ಬೆಂಬಲಕ್ಕೆ ನಿಂತಿದ್ದಾರೆ. ಎಂಬುದನ್ನು ಅವರ ಸುಳ್ಳು ಮಾತನ್ನು ನಂಬಬೇಡಿ ತಿಳಿಯಬೇಕಾಗಿದೆ. ಅಲ್ಲದೆ ನಮ್ಮ ಮನೆ, ಸಂಬಂಧಿಕರೂ ಸಹ ಇದೇ ವಾರ್ಡಿನಲ್ಲಿರುವುದು ತಿಳಿಯಬೇಕು. ಚುನಾವಣೆ ನಂತರ ವಾರ್ಡಿನಲ್ಲಿಯೇ ನಾನು ಕಛೇರಿ ಆರಂಭಿಸಿ ಸದಾ ಜನರ ಸಮಸ್ಯೆ ಆಲಿಸಿ ಅದಕ್ಕೆ ಸ್ಪಂದಿಸುವುದಾಗಿ ತಿಲಕ್ ಕುಮಾರ್ ಹೇಳಿದ್ದಾರೆ.