ನಗರದಲ್ಲಿ ಮಳೆಜನಜೀವನ ಅಸ್ತವ್ಯಸ್ತ

ಬಳ್ಳಾರಿ ಜ 05 : ರಾಜ್ಯದ ಬಹುತೇಕ‌ ಕಡೆಗಳಂತೆ ಗಣಿನಾಡಿನಲ್ಲಿ ಸಹ ಬೆಳಗಿನ‌ ಜಾವದಿಂದ ಮೋಡ ಕವಿದ ವಾತಾವರಣದ ಜೊತೆಗೆ ಆಗಾಗ್ಗೆ ಜಿನಿ‌ಜಿನಿ‌ಯ ತುಂತುರು‌ ಮಳೆಯಾಗುತ್ತಿದೆ.
ರಾತ್ರಿ ಮಲಗಿದ್ದವರು ಬೆಳಿಗ್ಗೆ ಎದ್ದೇಳುವುದರೊಳಗೆ ಮಬೆಯ ಮುಂದಿನ‌ ರಸ್ತೆಗಳು ಮಳೆಗೆ ನೆನೆದಿದ್ದನ್ನು ಕಂಡು ಅಚ್ಚರಿ ಪಟ್ಟರು. ನಂತರ ಬಿಸಿಲು‌ಬಂದಿತಾದರೂ ಮತ್ತೆ
ಬೆಳಗ್ಗೆ 11.30 ರ ವೇಳೆಗೆ ಮತ್ತೆ ತುಂತುರು ಮಳೆ ಸುರಿಯಿತು.
ಇದರಿಂದಾಗಿ‌ನಗರದಲ್ಲಿ ಓಡಾಡುವ ಜನರಿಗೆ ಒಂದಿಷ್ಟು ಸಮಸ್ಯೆಯಾಯಿತು.
ಸರ್ಕಾರಿ ಕಚೇರಿಗಳ ಮುಂದೆ ನಾನಾ ಅರ್ಜಿಗಳನ್ನು ಕೈಯಲ್ಲಿ ಹಿಡಿದುಕೊಂಡು ನಿಂತವರು ಸೇರಿದಂತೆ ಹಲವರು ಸಮಸ್ಯೆ ಅನುಭವಿಸಿದ ದೃಶ್ಯಗಳು ಕಂಡುಬಂತು. ಇನ್ನು ಹಳ್ಳಿಗಳಲ್ಲಿ ಮೆಣಸಿನಕಾಯಿ ಹರಿದು‌ ಒಣಗಿಸುತ್ತಿದ್ದವರಿಗೆ ಈ ಮಳೆ ಸಂಕಷ್ಟ ತಂದೊಡ್ಡಿತು.