ನಗರದಲ್ಲಿ ಮತ್ತಿಬ್ಬರು ಶಂಕಿತ ಉಗ್ರರ ಸೆರೆ

ಬೆಂಗಳೂರು,ಅ.೨೮-ಉಗ್ರರರ ಬಂಧನದ ಬೇಟೆಯನ್ನು ತೀವ್ರ ಗೊಳಿಸಿರುವ ರಾಷ್ಟ್ರೀಯ ತನಿಖಾದಳ (ಎನ್‌ಐಎ)ದ ಅಧಿಕಾರಿಗಳು ನಗರದಲ್ಲಿ ಮತ್ತಿಬ್ಬರು ಶಂಕಿತರ ಉಗ್ರರರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಖಚಿತ ಮಾಹಿತಿ ಮೇರೆಗೆ ಥಣಿಸಂದ್ರದ ಮನೆಯೊಂದರ ಮೇಲೆ ದಿಢೀರ್ ದಾಳಿ ನಡೆಸಿದ ಎನ್‌ಐಎ ಅಧಿಕಾರಿಗಳು, ಇಬ್ಬರು ಶಂಕಿತ ಐಸಿಸ್ ಉಗ್ರರನ್ನು ಬಂಧಿಸಿ ತೀವ್ರ ವಿಚಾರಣೆ ಕೈಗೊಂಡಿದ್ದಾರೆ.
ಕಳೆದ ಆಗಸ್ಟ್ ನಲ್ಲಿ ಡಾ.ಬ್ರೇವ್ ಅಲಿಯಾಸ್ ಅಬ್ದುಲ್ ರೆಹಮಾನ್ ನನ್ನು ಬಂಧಿಸಲಾಗಿತ್ತು. ಆತನ ಮಾಹಿತಿ ಮೇರೆಗೆ ಇನ್ನಿಬ್ಬರು ಶಂಕಿತ ಉಗ್ರರಾದ ಅಬ್ದುಲ್ ಖಾದರ್, ಇರ್ಫಾನ್ ಎಂಬುವವರನ್ನು ಬಂಧಿಸಿ ವಿಚಾರಣೆ ನಡೆಸಲಾಗಿತ್ತು. ಬಂಧಿತರಿಂದ ಸಾಕಷ್ಟು ಮಾಹಿತಿ ಕಲೆ ಹಾಕಿರುವ ಎನ್‌ಐಎ ತಂಡ ಇದೀಗ ಇನ್ನಿಬ್ಬರು ಶಂಕಿತ ಉಗ್ರರನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.