ನಗರದಲ್ಲಿ ಭರ್ಜರಿ ಮತ ಯಾಚನೆ

ರಾಯಚೂರು.ಏ.೧೭-ಕನ್ನಡ ಸಾಹಿತ್ಯ ಪರಿಷತ್ತಿಗೆ ಚುನಾವಣೆ ಸಮೀಪಿಸುತ್ತಿದ್ದಂತೆ ಚುನಾವಣೆ ಪ್ರಚಾರ ಭರ್ಜರಿಯಾಗಿ ನಡೆಯುತ್ತಿದೆ. ರಾಯಚೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಭೀಮನಗೌಡ ಇಟಗಿ ರವರು ಇಂದು ನಗರದಲ್ಲಿ ಕಸಾಪ ಸದಸ್ಯರ ಮನೆ ಮನೆಗೆ ತೆರಳಿ ಮತಯಾಚನೆ ಮಾಡುತ್ತಿದ್ದಾರೆ. ಬೆಳಿಗ್ಗೆ ಕಲ್ಲೂರು ಕಾಲೋನಿ, ಉದಯ ನಗರ, ಸ್ಟೇಷನ್ ರಸ್ತೆ, ಸರಾಫ್ ಬಜಾರ್, ಪಟೇಲ್ ರೋಡ್, ಬ್ರೇಸ್ತವಾರ ಪೇಟೆ, ಮಕ್ತಲಪೇಟೆಯ ಮನೆ ಮನೆಗಳಿಗೆ ತೆರಳಿ ಸದಸ್ಯರೊಂದಿಗೆ ಮಾತನಾಡಿ ಮೇ೯ ರಂದು ನಡೆಯುವ ಚುನಾವಣೆಯಲ್ಲಿ ಮತ ನೀಡುವಂತೆ ಭೀಮನಗೌಡ ಇಟಗಿ ರವರು ಮನವಿ ಮಾಡಿ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ದಶಕಗಳ ಕಾಲ ಸೇವೆ ಸಲ್ಲಿಸಿರುತ್ತೇನೆ ಈ ಸಾರಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವೆ ನಿಮ್ಮ ಬೆಂಬಲ ಆಶೀರ್ವಾದ ಇರಲಿ ಎಂದು ಮತಯಾಚಿಸಿದರು ಮತದಾರರೂ ಸಹ ಉತ್ತಮ ರೀತಿಯಲ್ಲಿ ಸ್ಪಂದನೆ ನೀಡಿದರು. ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಜೆ.ಎಲ್.ಈರಣ್ಣ, ಸಾಹಿತಿ ಪಲುಗುಲ ನಾಗರಾಜ, ಕಸಾಪ ಸದಸ್ಯ ಜಿ.ವಿರುಪಾಕ್ಷಪ್ಪ ಮತ್ತು ರಾಜ ಗೋಪಾಲ ರವರು ಪ್ರಚಾರದಲ್ಲಿ ತೊಡಗಿದ್ದರು.