ನಗರದಲ್ಲಿ ಬಿರುಸಿನ ಮಳೆ:ಮಳೆ ಹಾನಿ ಪ್ರದೇಶಕ್ಕೆ ಡಿ.ಸಿ. ಹಠಾತ್ ಭೇಟಿ

ಕಲಬುರಗಿ,ಆ.4: ಕಲಬುರಗಿ ನಗರದಲ್ಲಿ ಗುರುವಾರ ಮಧ್ಯಾಹ್ನ ಬಿರುಸಿನ ಮಳೆಯಾದ ಕಾರಣ ತಗ್ಗು ಪ್ರದೇಶದಲ್ಲಿನ ಮನೆಗಳಿಗೆ ನೀರು ನುಗ್ಗಿದ್ದರಿಂದ ಡಿ.ಸಿ. ಯಶವಂತ ವಿ. ಗುರುಕರ್ ಅವರು ನಗರದ ತಾರಪೈಲ್ ಪ್ರದೇಶಕ್ಕೆ ಹಠಾತ್ ಭೇಟಿ ನೀಡಿ ಹಾನಿ ಪ್ರದೇಶವನ್ನು ಪರಿಶೀಲಿಸಿದರು.
ಮಹಾನಗರ ಪಾಲಿಕೆಯ ಆಯುಕ್ತ ಭುವನೇಶ ಪಾಟೀಲ ದೇವಿದಾಸ್ ಸೇರಿದಂತೆ ಪಾಲಿಕೆ ವಲಯದ ಅಧಿಕಾರಿಗಳೊಂದಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು ಮಳೆ ನೀರು ನುಗ್ಗಿರುವ ಮನೆಗಳನ್ನು ವೀಕ್ಷಿಸಿದರು.
ಪರಿಷ್ಕøತ ಪರಿಹಾರ ಮಾರ್ಗಸೂಚಿಯಂತೆ ಮಳೆ ನೀರಿನಿಂದ ಬಟ್ಟೆ-ಪಾತ್ರೆ ಹಾನಿಯಾಗಿದ್ದನ್ನು ಸ್ಥಳ ಪರಿಶೀಲಿಸಿ, ಜಿಯೋ ಫೋಟೊ ಪಡೆದು ಎರಡು ದಿನದನಲ್ಲಿಯೇ ಸೂಕ್ತ ಪರಿಹಾರ ನೀಡಬೇಕೆಂದು ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಡಿ.ಸಿ. ಯಶವಂತ ವಿ. ಗುರುಕರ್ ಸೂಚಿಸಿದರು.
ಪಾಲಿಕೆಯ ಕಾರ್ಯನಿರ್ವಾಹಕ ಅಭಿಯಂತ ಆರ್.ಪಿ.ಜಾಧವ ಸೇರಿದಂತೆ ವಲಯದ ಆಯುಕ್ತರು, ಸಿಬ್ಬಂದಿಗಳು ಈ ಸಂದರ್ಭದಲ್ಲಿದ್ದರು.