ನಗರದಲ್ಲಿ ಬಲಿದಾನದ ನೆನಪಾರ್ಥ ರಕ್ತದಾನ ಶಿಬಿರ

ಮೈಸೂರು:ಮಾ:23: ರಕ್ತದಾನ ಮಹಾದಾನ ಗೋಭಕ್ತ ಸಂಘಟನೆ ಟ್ರಸ್ಟ್,ಮತ್ತು ಜೆಸಿಐ ಮೈಸೂರು ರಾಯಲ್ ಸಿಟಿ ಹಾಗೂ ನ್ಯಾಷನಲ್ ಇಂಟಿಗ್ರೇಟೆಡ್ ಫೆÇೀರಂ ಆಫ್ ಆರ್ಟಿಸ್ಟ್ ಮತ್ತು ಆ್ಯಕ್ಟಿವಿಸ್ಟ್ (ನೀಫಾ)ಸಂಸ್ಥೆ ಹಾಗೂ ಲಯನ್ಸ್ ಜೀವಧಾರ ರಕ್ತನಿಧಿ ಕೇಂದ್ರ ಸಂಯುಕ್ತಾಶ್ರಯದಲ್ಲಿ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.
ನಗರದ ಲಯನ್ಸ್ ಜೀವಧಾರ ರಕ್ತನಿಧಿ ಕೇಂದ್ರದಲ್ಲಿ ಸ್ವತಂತ್ರ ಸಂಗ್ರಾಮದಲ್ಲಿ ದೇಶಪ್ರೇಮ ಮೆರೆದ ಭಗತ್ ಸಿಂಗ್ ,ರಾಜ್ ಗುರು ,ಸುಖದೇವ್, ಇವರುಗಳ ಬಲಿದಾನದ ನೆನಪಿನಲ್ಲಿ ಬೃಹತ್ ರಕ್ತದಾನ ಶಿಬಿರದಲ್ಲಿ ಸ್ವಯಂ ಪ್ರೇರಿತವಾಗಿ 135ಜನ ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡುವ ಮೂಲಕ ವಿಶೇಷವಾಗಿ ವೀರ ಯೋಧರನ್ನು ಸ್ಮರಿಸಿ ನಂತರ ಮಾತನಾಡಿದ ಗಿರೀಶ್ ಎಸ್.ಇ, ದೇಶಪ್ರೇಮ ಮನೋಭಾವನೆ ಬೆಳಸಿಕೊಳ್ಳಲು ಯುವಪೀಳಿಗೆ ಮುಂದಾದರೆ ಭಾರತವೂ ಎಲ್ಲಾ ಕ್ಷೇತ್ರದಲ್ಲೂ ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಬಹುದು, ಇಂದಿನ ಭವ್ಯಭಾರತದ ಸ್ವತಂತ್ರಕ್ಕಾಗಿ ಹೋರಾಟಗಳು ಮತ್ತು ಯುದ್ಧನಡೆದಾಗ ಸ್ವಾತಂತ್ರ್ಯ ಹೋರಾಟಗಾರರ ಯೋಧರ ರಕ್ತಪಾತವಾಗಿರುತ್ತದೆ ಮಹಾತ್ಮರ ಬಲಿದಾನದ ನೆನಪಿಗಾಗಿ ರಕ್ತದಾನ ಮಾಡಿ ಇನ್ನೊಬ್ಬರ ಜೀವ ಉಳಿಸುವುದು ಒಳ್ಳೆಯ ಅರ್ಥಪೂರ್ಣ ಕಾರ್ಯಕ್ರಮವಾಗಿದೆ ಎಂದರು.
ಪರಿಸರ ಜಾಗೃತಿ ವೇದಿಕೆ ಅಧ್ಯಕ್ಷ ಬನ್ನೂರು ಮಹೇಂದ್ರಸಿಂಗ್ ಕಾಳಪ್ಪ ಮಾತನಾಡಿ, ಭಗತ್ ಸಿಂಗ್, ರಾಜಗುರು ಮತ್ತು ಸುಖದೇವ್ ಅವರ ಬಲಿದಾನ ನಮ್ಮ ಇತಿಹಾಸದಲ್ಲೇ ಕಣ್ಣೀರು ಭರಿಸುವಂಥ ದಿನ. ಈ ಮೂರು ಮಹಾನ್ ವ್ಯಕ್ತಿಗಳು ನಮ್ಮ ನೆಲದವರು ಎನ್ನಲು ಹೆಮ್ಮೆಯಾಗುತ್ತದೆ. ಅವರ ಯೌವ್ವನಾವಸ್ಥೆಯಲ್ಲೇ ತಮ್ಮ ಬದುಕನ್ನು ದೇಶದ ಸ್ವಾತಂತ್ರ್ಯಕ್ಕಾಗಿ ಮುಡಿಪಾಗಿಟ್ಟು, ಅವರ ವ್ಯಕ್ತಿತ್ವದ ಘನತೆಯನ್ನು ಹಂಚಿಕೊಂಡರು. ಜಲಿಯನ್ ವಾಲಾ ಬಾಗ್ ಹತ್ಯಾಕಾಂಡ ನಡೆದಾಗ ಬ್ರೀಟಿಷರ ವಿರುದ್ಧ ಹೋರಾಟ ಮಾಡುತ್ತೇನೆ ಎಂದು 12ವರ್ಷದ ಯುವಕನೊಬ್ಬ ಬಾಟಲಿನಲ್ಲಿ ರಕ್ತವನ್ನು ತಂದು ಸ್ವತಂತ್ರ ಕೊಡಿಸುತ್ತೇನೆ ಎಂದು ಶಪಥಮಾಡಿದ ಅವರೇ ವೀರ ಯೋಧ ಭಗತ್ ಸಿಂಗ್. ಭಗತ್ ಸಿಂಗ್ 23ನೇ ವಯಸ್ಸಿನಲ್ಲಿಯೇ ಭಾರತದ ಸ್ವಾತಂತ್ರ್ಯ ಸಂಗ್ರಾಮಕ್ಕಾಗಿ ತಮ್ಮ ಜೀವವನ್ನೇ ತ್ಯಾಗ ಮಾಡಿದವರು. ಭಗತ್ ಸಿಂಗ್ ಮೂಲತಃ ಒಬ್ಬ ನಾಟಕಗಾರ ಎಂಬುದು ಬಹುತೇಕರಿಗೆ ಗೊತ್ತಿಲ್ಲ. ಸ್ವಾತಂತ್ರ್ಯದ ಕಿಚ್ಚು ಹಬ್ಬಿಸುವ ನಾಟಕ ಪ್ರಸಂಗಗಳು ಕಾಲೇಜು ದಿನಗಳಲ್ಲಿ ವೇದಿಕೆ ಪ್ರದರ್ಶನಗಳ ಮೂಲಕ ಹೆಸರುವಾಸಿಯಾಗಿದ್ದರು. ಅವರು ಅಭಿನಯಿಸುತ್ತಿದ್ದ ರಾಣಾ ಪ್ರತಾಪ ಮತ್ತು ಚಂದ್ರಗುಪ್ತ ಮೌರ್ಯ ಬಹುಮುಖ್ಯ ಪಾತ್ರಗಳು ಇವತ್ತಿಗೂ ಯುವಕರಿಗೆ ಸ್ಫೂರ್ಥಿಯಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಜೀವಧಾರ ರಕ್ತನಿಧಿ ಕೇಂದ್ರದ ನಿರ್ದೇಶಕರಾದ ಗಿರೀಶ್, ಮುತ್ತಣ್ಣ, ಗೋಭಕ್ತ ಸಂಘಟನೆ ಟ್ರಸ್ಟ್ ಅಧ್ಯಕ್ಷರಾದ ದೇವೇಂದ್ರ ಪರಿಹಾರಿಯ, ಯೋಜನಾ ನಿರ್ದೇಶಕರಾದ ಆನಂದ್ ಮಾಂಡೂತ್, ಡಾ|| ರಾಧಾ, ಡಾ|| ಮಮತಾ ಜೀವಧಾರ ರಕ್ತನಿಧಿ ಕೇಂದ್ರದ ನಿರ್ದೇಶಕರಾದ ಮುತ್ತಣ್ಣ, ಸುಮಾ, ತಮ್ಮನ್ನಾ, ಪ್ರೇರಣಾ, ಮುಸ್ಕಾನ್, ಕಾರ್ಯದರ್ಶಿ ವಿಕಾಸ್ ರಾಥೋರ್, ಮಹೇಂದ್ರ್ ಚೋಯಲ್, ಶ್ರೀ ರಾಜಸ್ಥಾನ್ ವಿಷ್ಣು ಸೇವಾ ಟ್ರಸ್ಟ್ ನವ್ ಯುವಕ್ ಮಂಡಲ್ ಮೈಸೂರು ಹಾಗೂ ಶ್ರೀ ಮಹಾರಾಣ ಪ್ರತಾಪ್ ರಾಜ್‍ಪುತ್ ಮಂಲ್ ಮೈಸೂರು ಅಧ್ಯಕ್ಷ ಪೃಥ್ವಿಸಿಂಗ್ ಚಂದಾವತ್, ಜೆಸಿಐ ಮೈಸೂರು ರಾಯಲ್ ಸಿಟಿ ಅಧ್ಯಕ್ಷ: ಸ್ಮಿತಾ ಪಗಾರಿಯ, ಯೋಜನೆ ನಿರ್ದೇಶಕರಾದ ಮುಕೇಶ್ ವೇದಮೂತಾ, ಕಾರ್ಯದರ್ಶಿ ಭಾವಿಕ್ ಶಾಹ್, ಅನಂತ್ ಜೈನ್,ಚೇತನ್ ಕಾಂತರಾಜು, ಹಾಗೂ ಇನ್ನಿತರರು ಹಾಜರಿದ್ದರು.