ನಗರದಲ್ಲಿ ಬಂಧಿತ ಶಂಕಿತ ಉಗ್ರನ ವಿರುದ್ಧ ಚಾರ್ಜ್ ಶೀಟ್

ಬೆಂಗಳೂರು,ಜ.12-ಐಸಿಸ್ ಸೇರಿ ಭಯೋತ್ಪಾದಕ ಸಂಘಟನೆಗಳೊಂದಿಗೆ ಗುರುತಿಸಿಕೊಂಡು ಬಂಧಿತನಾಗಿದ್ದ ಶಂಕಿತನ ವೈದ್ಯನ ವಿರುದ್ಧ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ದೆಹಲಿ ತಂಡ ವಿಶೇಷ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದೆ.
ಬಸವನಗುಡಿಯಲ್ಲಿ ವಾಸವಿದ್ದ ವೈದ್ಯ ಶಂಕಿತ ಉಗ್ರ ಅಬ್ದುಲ್ ರೆಹಮಾನ್ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿದೆ‌. ಕಳೆದ ವರ್ಷ ಆಗಸ್ಟ್​ 17ರಂದು ಅಬ್ದುಲ್ ರೆಹಮಾನ್ ಅನ್ನು ಬಂಧಿಸಲಾಗಿತ್ತು. ಈತ ನಗರದ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ನೇತ್ರ ತಜ್ಞನಾಗಿ ಕೆಲಸ ಮಾಡುತ್ತಿದ್ದ.
ಬಾಂಗ್ಲಾ‌ ಮೂಲದ ನಿಷೇಧಿತ ಇಸ್ಲಾಮಿಕ್‌ ಸ್ಟೇಟ್ ಕೊರೋಸನ್ ಪ್ರಾವಿನ್ಸ್ ಎಂಬ ಸಂಘಟನೆಗೆ ಅಬ್ದುಲ್‌ ರೆಹಮಾನ್‌ ಸದಸ್ಯನಾಗಿದ್ದ. ಐಸಿಸ್ ಉಗ್ರ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದ ಎನ್ನಲಾಗ್ತಿದೆ. 2013ರಲ್ಲಿ ಸಿರಿಯಾದ ಐಸಿಸ್ ಉಗ್ರ ಕ್ಯಾಂಪ್​​​ಗಳಿಗೆ ಭೇಟಿ ಕೊಟ್ಟಿದ್ದರೆನ್ನಲಾದ ಅಬ್ದುಲ್​ ರೆಹಮಾನ್ ಆ ಬಳಿಕ ಐಸಿಸ್ ಬಗ್ಗೆ ಸಾಫ್ಟ್ ಕಾರ್ನರ್ ಹೊಂದಿದ್ದ. ಐಸಿಸ್​​​​ಗೆ ಮೆಡಿಕಲ್ ಅಪ್ಲಿಕೇಷನ್ ಸಿದ್ಧಪಡಿಸಿಕೊಳ್ಳಲು ಮುಂದಾಗಿದ್ದ ಎನ್ನಲಾಗಿದೆ.