ನಗರದಲ್ಲಿ ಪೊಲೀಸ್ ಧ್ವಜ ದಿನಾಚರಣೆ

ಮೈಸೂರು,ಏ.2:- ಮೈಸೂರು ನಗರದ ಪೆÇಲೀಸ್ ಇಲಾಖೆ ವತಿಯಿಂದ ಪೆÇಲೀಸ್ ಧ್ವಜ ದಿನಾಚರಣೆಯನ್ನು ಇಂದು ನಗರದ ಸಶಸ್ತ್ರ ಮೀಸಲು ಪಡೆ ಕವಾಯತು ಮೈದಾನದಲ್ಲಿ ಆಚರಿಸಲಾಯಿತು.
ಮೈಸೂರು ನಗರ ಪೆÇಲೀಸ್, ಅಶ್ವಾರೋಹಿ ದಳ, ಕರ್ನಾಟಕ ಪೆÇಲೀಸ್ ಅಕಾಡೆಮಿ, ಮೈಸೂರು ಜಿಲ್ಲಾ ಪೆÇಲೀಸ್, ಕೆ.ಎಸ್.ಆರ್.ಪಿ 5ನೇ ಪಡೆ, ಪೆÇಲೀಸ್ ತರಬೇತಿ ಶಾಲೆ, ರಾಜ್ಯ ಗುಪ್ತ ವಾರ್ತೆ, ಡಿ.ಸಿ.ಆರ್.ಇ ಲೋಕಾಯುಕ್ತ, ಎಸಿಬಿ, ಚೆಸ್ಕಾಂ, ಐಎಸ್‍ಡಿಯ ಸಂಯುಕ್ತಾಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮಕ್ಕೆ ಆಗಮಿಸಿದ ನಿವೃತ್ತ ಡಿ.ಐ.ಜಿ.ಪಿ ರಾಜೇಂದ್ರ ಪ್ರಸಾದ್ ವಂದನೆ ಸ್ವೀಕರಿಸಿದರು.
ಕರ್ನಾಟಕ ಪೆÇಲೀಸ್ ಅಕಾಡೆಮಿಯ ನಿರ್ದೇಶಕರಾದ ವಿಫುಲ್ ಕುಮಾರ್ ಅವರು ಡಿ.ಐ.ಜಿ.ಪಿ ರಾಜೇಂದ್ರ ಪ್ರಸಾದ್ ಅವರಿಗೆ ಪೆÇಲೀಸ್ ಧ್ವಜ ನೀಡಿದರು. ಪೆÇಲೀಸ್ ಧ್ವಜ ದಿನ ಪ್ರಯುಕ್ತ ನಿವೃತ್ತ ಪೆÇಲೀಸ್ ಅಧಿಕಾರಿಗಳಿಗೆ ಸನ್ಮಾನ ಮಾಡಿದರು. ಕಾರ್ಯಕ್ರಮದಲ್ಲಿ ಅಶ್ವಾರೋಹಿ ದಳ ಮತ್ತು ಪೆÇಲೀಸರ ಪಥಸಂಚಲನ ಗಮನ ಸೆಳೆಯಿತು.
ಕಾರ್ಯಕ್ರಮದಲ್ಲಿ ನಗರ ಪೆÇಲೀಸ್ ಆಯುಕ್ತ ಡಾ. ಚಂದ್ರಗುಪ್ತ, ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ, ಡಿಸಿಪಿಗಳಾದ ಡಾ.ಎ.ಎನ್.ಪ್ರಕಾಶ್ ಗೌಡ , ಗೀತಾ ಪ್ರಸನ್ನ ಮತ್ತು ಇನ್ನಿತರ ಗಣ್ಯರು ಉಪಸ್ಥಿತರಿದ್ದರು.