ನಗರದಲ್ಲಿ ನೂತನ ಮಳಿಗೆ ಉದ್ಘಾಟನೆ

ಹೊಸಪೇಟೆ, ನ.8: ನಗರದ ಕಾಲೇಜು ರಸ್ತೆಯಲ್ಲಿ ರಾಮರಾಜ್ ಉಡುಪುಗಳ ಬಳಗದ ನೂತನ ಶಾಖೆ ಮಹಾನವಮಿ ಟೆಕ್ಸ್ ಟೈಲ್ಸ್ ಮಳಿಗೆಯನ್ನು ಅರಣ್ಯ ಸಚಿವರ ತಂದೆ ಪೃಥ್ವಿರಾಜ್ ಸಿಂಗ್ ಅವರು ಉದ್ಗಾಟಿಸಿ ಶುಭ ಹಾರೈಸಿದರು.
ಶುಕ್ರವಾರದಂದು ನೂತನ ಮಳಿಗೆ ಉದ್ಘಾಟಿಸಿ ಮಾತನಾಡಿದ ಅವರು ನಗರದಲ್ಲಿ ಸಾಂಸ್ಕೃತಿಕ ಹಾಗೂ ಭಾರತೀಯ ಪರಂಪರೆಯ ಉಡುಪುಗಳ ಮಳಿಗೆಯ ಕೊರತೆಯಿತ್ತು. ರಾಮ್ ರಾಜ್ ಸಂಸ್ಥೆಯ ಮಳಿಗೆ ತೆರೆದಿರುವುದು ಸಂತೋಷವಾಗಿದೆ ಎಂದು ಮೊದಲ ವಹಿವಾಟನ್ನು ತಾವೇ ನಡೆಸಿ ಹಾರೈಸಿದರು.
15ರೂ. ನಿಂದ 28 ಸಾವಿರ ರೂ. ವರೆಗಿನ ಎಲ್ಲಾ ವಯೋಮಾನದವರ ಉಡುಪುಗಳು ಹಾಗೂ ಶುಭಸಮಾರಂಭಗಳಿಗೆ ಹೊಂದುವ ಭಾರತೀಯ ಶೈಲಿಯ ಉಡುಪುಗಳು ಮಳಿಗೆಯಲ್ಲಿ ಲಭ್ಯವಿದೆ.
ಮಳಿಗೆ ಉದ್ಘಾಟನಾ ಸಮಾರಂಭದಲ್ಲಿ ಧರ್ಮೇಂದ್ರ ಸಿಂಗ್, ಹೊಸಪೇಟೆ ಬ್ಲಾಕ್ ಕಾಂಗ್ರೆಸ್ ಸಮಿತಿಯ ಇಮಾಂ ನಿಯಾಜಿ ಸೇರಿದಂತೆ ಮಳಿಗೆಯ ಅರವಿ ಜ್ಯೋತಿ ಹಾಗೂ ಅರವಿ ಸೋಮಶೇಖರ್ ಇದ್ದರು.