ನಗರದಲ್ಲಿ ನಾಳೆ ಗಾರ್ಮೆಂಟ್ ವೆಲ್ಫೇರ್ ಅಸೋಸಿಯೇಷನ್ ಉದ್ಘಾಟನೆ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ನ.23: ನಗರದ ಗ್ರಾಂಡ್ ಪಂಕ್ಷನ್ ಹಾಲ್ ನಲ್ಲಿ ನಾಳೆ ಬೆಳಿಗ್ಗೆ 10 ಕ್ಕೆ ಬಳ್ಳಾರಿ ತಾಲೂಕು ಗಾರ್ಮೆಂಟ್ ವೆಲ್ಫೇರ್ ಅಸೋಸಿಯೇಷನ್ ನ ಉದ್ಘಾಟನೆ ಮತ್ತು ಪ್ರಥಮ ಸಮಾವೇಶ ಹಮ್ಮಿಕೊಂಡಿದೆ.
ನಗರದ ಪತ್ರಿಕಾ ಭವನದಲ್ಲಿ ಇಂದು ಸುದ್ದಿಗೋಷ್ಟಿ ನಡೆಸಿದ ಅಸೋಸಿಯೇಷನ್ ಅಧ್ಯಕ್ಷ ಸಿ.ಇಬ್ರಾಹಿಂ ಬಾಬು ಅವರು. ಕಾರ್ಯಕ್ರಮವನ್ನು ಸಚಿವ ಶ್ರೀರಾಮುಲು ಅವರು ಉದ್ಘಾಟನೆ ಮಾಡಲಿದ್ದು. ಮುಖ್ಯ ಅತಿಥಿಗಳಾಗಿ ನಗರ ಶಾಸಕ ಜಿ.ಸೋಮಶೇಖರ ರೆಡ್ಡಿ,  ಬುಡಾ ಅಧ್ಯಕ್ಷ ಎಸ್.ಮಾರುತಿ ಪ್ರಸಾದ್ ಆಗಮಿಸಲಿದ್ದು. ರಾಜ್ಯ ಕಾರ್ಮಿಕ ಆಯುಕ್ತ ವಿಕ್ರಂ ಪಾಶಾ ವಿಶೇಷ ಆಹ್ವಾನಿತರಾಗಿ ಆಗಮಿಸಲಿದ್ದಾರೆ.
ತಾವು ಅಧ್ಯಕ್ಷತೆವಹಿಸಲಿದ್ದು ಉಳಿದಂತೆ ಡಿಸಿ ಪವನ್ ಕುಮಾರ್ ಮಾಲಪಾಟಿ, ಜಿಲ್ಲಾ ಕಾರ್ಮಿಕ ಅಧಿಕಾರಿ ಅಲ್ತಾಫ್ ಅಹಮ್ಮದ್ ಕಮಲಶಾ, ಜಿಲ್ಲಾ ಕೈಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ಸೋಮಶೇಖರ ಬಂಕಾಡ್, ಜವಳಿ ಇಲಾಖೆ ಜಂಟಿ ನಿರ್ದೇಶಕ ವೀರೇಶ್ ದವಳಿ, ಉಪ ನಿರ್ದೇಶಕ ವಿಠ್ಠಲ್ ರಾಜು, ಹಿರಿಯ ಸಹಾಯಕ ಕಾರ್ಖಾನೆಗಳ ನಿರ್ದೇಶಕ ವರುಣ್, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಸಿ.ಶ್ರೀನಿವಾಸರಾವ್, ಬಳ್ಳಾರಿ ಗಾರ್ಮೆಂಟ್ ಉತ್ಪಾದನೆಗಳ ಸಂಘದ ಅಧ್ಯಕ್ಷ ವಿನಾಯಕ್ ರಾವ್ ಭಾಗವಹಿಸಲಿದ್ದಾರೆ.
ಬಳ್ಳಾರಿ ತಾಲೂಕಿನಾದ್ಯಂತ ಜೀನ್ಸ್  ಘಟಕ, ಗಾರ್ಮೆಂಟ್ಸ್ ಗಳಲ್ಲಿ,  ಜೀನ್ಸ್ ಉತ್ಪಾದನಾ ಘಟಕಗಳಲ್ಲಿ ಬಟ್ಟೆ ಹೊಲಿಯುವ ಟೈಲರ್ ಗಳು, ಮಾಸ್ಟರ್ ಗಳು, ಜೀನ್ಸ್ ವಾಶಿಂಗ್ ಘಟಕದ ಮಾಲೀಕರು ಮತ್ತು ಗಾರ್ಮೆಂಟ್ಸ್ ಕ್ಷೇತ್ರಕ್ಕೆ ಸೇರಿದ ಇನ್ನಿತರ ಮಹಿಳಾ ಮತ್ತು  ಪುರುಷ ಕಾರ್ಮಿಕರಿಂದ  ಈ ಅಸೋಸಿಯೇಶನ್ ರಚಿಸಿದೆ. 
ನಮ್ಮ ನಗರದಲ್ಲಿ 1960 ರಿಂದ ಜೀನ್ಸ್ ಉದ್ಯಮ ಆರಂಭಗೊಂಡಿತು. ಮೈನ್ಸ್ ಭೂಮ್ ನಂತರ ಕಡಿಮೆ ಆಯ್ತು, ಈಗ ಹೊಲಿಗೆ ಮಾಡುವವರ ಸಂಖ್ಯೆ ಕಡಿಮೆ ಆಯ್ತು.
ಬಳ್ಳಾರಿ ನಗರದಲ್ಲಿ ಮೂರು ಸಾವಿರ ಘಟಕ ಇವೆ. ಮೂವತ್ತು ಸಾವಿರ ಹೊಲಿಗೆಗಾರರು ಇದ್ದಾರೆ. ಉಳಿದಂತೆ ಗುಂಡಿ, ಜಿಪ್ ಹಾಕುವವರು, ಇಸ್ತ್ರಿ ಮಾಡುವವರು, ವಾಸಿಂಗ್ ಸೇರಿದಂತೆ ಇತರೇ ಕಾರ್ಯಗಳಲ್ಲಿ 60 ರಿಂದ 70 ಸಾವಿರ ಕಾರ್ಮಿಕರು ಇದ್ದಾರೆ. ಆದರೆ ಅವರೆಲ್ಲ ಅಸಂಘಟಿತರಾಗಿದ್ದಾರೆ. ಕೋವಿಡ್ ಸಂಕಷ್ಟದಲ್ಲಿ ಸರ್ಕಾರ ನೀಡಿದ ಸೌಲಭ್ಯಗಳು
ಎಲ್ಕರಿಗೆ ದೊರೆಯಲಿಲ್ಲ. ಕಾರಣ ಕಾರ್ಮಿಕರಾಗಿ ನೊಂದಾಯಿಸಿಕೊಂಡಿರಲಿಲ್ಲ.
ಅದಕ್ಕಾಗಿ ಸರ್ಕಾರಿ ಸೌಲಭ್ಯಗಳನ್ನು ಒದಗಿಸಲು ಸಂಘ ಶ್ರಮಿಸುವ ಉದ್ದೇಶ ಹೊಂದಿದೆ ಎಂದರು.
ನಮ್ಮಲ್ಲಿ ಸದಸ್ಯರಾದವರಿಗೆ ಕಾರ್ಮಿಕರ ಕಲ್ಯಾಣಕ್ಕಾಗಿ ಸರ್ಕಾರ ನೀಡುವ ಯೋಜನೆಗಳನ್ನು ದೊರಕಿಸಿಕೊಡುವುದು. ಕಾರ್ಮಿಕರ ಸಾಮಾಜಿಕ, ಶೈಕ್ಷಣಿಕ, ಆರೋಗ್ಯ,ಮನರಂಜನೆ ಮುತ್ತು ಕೌಶಲ್ಯ ವೃದ್ಧಿ, ತರಬೇತಿಗಾಗಿ ರಚನಾತ್ಮಕ ಕಾರ್ಯಕ್ರಮಗಳನ್ನು ಹಮಿಕೊಳ್ಳಲಿದೆ.
ಗಾರ್ಮೆಂಟ್ಸ್ ಕಾಮಗಾರಿಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರದ ವತಿಯಿಂದ ಕಾರ್ಮಿಕರಿಗೆ ಗುರುತಿನ ಚೀಟಿ ದೊರಕಿಸಿ ಕೊಡುವರು. ಆರೋಗ್ಯ ವಿಮೆ ಸೌಲಭ್ಯ ಮಾಡಿಸುವುದು. ಗಾರ್ಮೆಂಟ್ಸ್ ಕಾರ್ಮಿಕರ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡುವುದು. ಗಾರ್ಮೆಂಟ್ಸ್‌ ಕಾರ್ಮಿಕರ ಮಕ್ಕಳಿಗೆ ಶಿಕ್ಷಣ ಪಡೆಯಲು ಶಾಲಾ, ಕಾಲೇಜುಗಳಿಗೆ ಪ್ರವೇಶಾತಿ ಪಡೆಯಲು ಧನಸಹಾಯ ಮಾಡುವುದು. ಕಾರ್ಮಿಕರ ಹೆಣ್ಣುಮಕ್ಕಳ ವಿವಾಹ ಧನಸಹಾಯ ಮಾಡುವುದು,  ಕಾರ್ಮಿಕರ ಕುಟುಂಬದ ಸದಸ್ಯರು ಅಪಘಾತಕ್ಕೊಳಗಾದ ಚಿಕಿತ್ಸೆಗೆ ಧನಸಹಾಯಮಾಡುವುದು.
 ಯಾವುದೇ ರೀತಿಯ ಸಮಸ್ಯೆಗಳಾದ ಅವರ ನೆರವಿಗೆ ಧಾವಿಸುವುದು ಸೇರಿದಂತೆ ಅನೇಕ ಸೌಲಭ್ಯಗಳನ್ನು ದೊರಕಿಸಿಕೊಡುವ ಉದ್ದೇಶಹೊಂದಿದೆ ಎಂದು ತಿಳಿಸಿದರು. ಅಸೋಸಿಯೇಷನ್  ನಲ್ಲಿ  ಸಧ್ಯ 400 ಸದಸ್ಯರಿದ್ದಾರೆ. ನಾಳೆಯಿಂದ ಸದಸ್ಯರ ಸಂಖ್ಯೆ ಹೆಚ್ಚಿನದಾಗಿ ಪಡೆಯಲಿದೆಂದರು.
ಸುದ್ದಿಗೋಷ್ಟಿಯಲ್ಲಿ ಅಸೋಸಿಯೇಷನ್ ನ ಮುಖಂಡರುಗಳಾದ, ಮಹಮ್ಮದ್ ರಫೀಕ್ ಕೆ.ಎ, ಕೋಳೂರು ಮಹಮ್ಮದ್ ಶಫೀ, ಎಂ.ಸೈಯದ್ ಅನ್ವರ್ ಬಾಷ, ಮುನೀರ್ ಬಾಷಾ, ಮುರುಳಿ ಕಾಂಬ್ಳೆ, ಕಿರಣ್ ಅನ್ನಂ ಎಸ್.ಶಬ್ಬೀರ್ ಎಂ.ರಫೀಕ್, ಸೋಮೇಶಿ, ಮಸ್ತಾನ್ ವಲಿ.ಎಸ್. ಸತ್ತರ್ ಸಾಬ್, ಟಿ.ತಿಪ್ಪೇಸ್ವಾಮಿ, ಎಂ.ಶಿವರುದ್ರಸ್ವಾಮಿ, ಖಲಂದರ್ ಮೊದಲಾದವರು ಇದ್ದರು