ನಗರದಲ್ಲಿ ನಾಳೆಯಿಂದ ರಾಜ್ಯಮಟ್ಟದಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ಪಂದ್ಯಾವಳಿ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಜು.20: ಜಿಲ್ಲಾ ಬ್ಯಾಡ್ಮಿಂಟನ್ ಅಸೋಸಿಯೇಷನ್ ನಿಂದ  ರಾಜ್ಯಮಟ್ಟದ 15 ಮತ್ತು 17  ವರ್ಷದ ಒಳಗಿನ ಬಾಲಕ, ಬಾಲಕಿಯರ ರಾಜ್ಯ ಮಟ್ಟದ  ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ಪಂದ್ಯಾವಳಿಯನ್ನು ಜಿಲ್ಲಾ ಕ್ರೀಡಾಂಗಣದಲ್ಲಿ ನಾಳೆ  ಜೂಲೈ 21 ರಿಂದ ಆರು ದಿನಗಳ ಕಾಲ  ಆಯೋಜಿಸಲಾಗಿದೆ.
ರಾಜ್ಯದ  ವಿವಿಧ  ಭಾಗಗಳಿಂದ  ೪೦೦ ಆಟಗಾರರು ಇದರಲ್ಲಿ  ಭಾಗವಹಿಸಲಿದ್ದಾರೆ. ಪಂದ್ಯಾವಳಿಯನ್ನು  ಜಿಲ್ಲಾಧಿಕಾರಿಗಳು ಉದ್ಘಾಟ್ಟಿಸಲಿದ್ದು.  ಬಳ್ಳಾರಿ  ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ರಂಜಿತ್ ಕುಮಾರ್ ಬಂಡಾರು, ಸಹಾಯಕ ಆಯುಕ್ತ ಹೇಮಂತ ಕುಮಾರ್, ಮಾಜಿ ಶಾಸಕ ನಾರಾ  ಸೂರ್ಯನಾರಾಯಣ ರೆಡ್ಡಿ ಅವರು ಮುಖ್ಯ ಅಥಿತಿಗಳಾಗಿ  ಭಾಗವಹಿಸುವರು.
ಜಿಲ್ಲಾ ಬ್ಯಾಡ್ಮಿಂಟನ್ ಅಸೋಸಿಯೇಷನ್ ಅಧ್ಯಕ್ಷ ಎಂ. ಅಹಿರಾಜ, ಅಧ್ಯಕ್ಷತೆ ವಹಿಸುವರು. ಎಸ್. ಕೆ. ಸಿಂಗ್ ವ್ಯವಸ್ಥಾಪಕ ನಿರ್ದೇಶಕರು ಸುಪ್ರ  ಸ್ಟೀಲ್ಸ್ , ಗ್ರೇಸಿ, ಸಹಾಯಕ ನಿರ್ದೇಶಕರು ಯುವಜನ ಸಬಲೀಕರಣ ಹಾಗೂ  ಕ್ರೀಡಾ ಇಲಾಖೆ  ಇವರು ಉಪಸ್ಥಿತರಿರುತ್ತಾರೆ. 
ಜುಲೈ 26 ರಂದು ಸಂಜೆ 6 ಕ್ಕೆ ಸಮಾರೋಪ ನಡೆಯಲಿದ್ದು. ಕ್ರೀಡಾ ಸಚಿವ ಬಿ.ನಾಗೇಂದ್ರ, ವಿಜೇತ ತಂಡಗಳಿಗೆ ಟ್ರೋಪಿ ವಿತರಿಸಲಿದ್ದಾರೆ. ಶಾಸಕ ಭರತ ರೆಡ್ಡಿ ಮೊದಲಾದವರು ಪಾಲ್ಗೊಳ್ಳಲಿದ್ದಾರೆ.
ಬಾಯ್ಸ್ ಅಂಡ್ ಗರ್ಲ್ಸ್ ಸಿಂಗಲ್ಸ್ , ಡಬಲ್ಸ್ ಮತ್ತು ಮಿಕ್ಸ್ ಡಬಲ್ಸ್ ನಲ್ಲಿ ನಾಕೌಟ್ ಪದ್ದತಿಯಲ್ಲಿ ಪಂದ್ಯಗಳು ನಡೆಯಲಿವೆ.