ನಗರದಲ್ಲಿ ನಾಳೆಯಿಂದ ಆಟೋ ದರ ದುಬಾರಿ

ಬೆಂಗಳೂರು, ನ.30- ನಾಳೆಯಿಂದ ಬೆಂಗಳೂರಿನಲ್ಲಿ ಆಟೋ ದರ ದುಬಾರಿಯಾಗಲಿದೆ. ಕೊರೋನಾ ಹೊಡೆತ, ಗ್ಯಾಸ್ ದರ ಏರಿಕೆಯಿಂದ ನಲುಗಿದ್ದ ಆಟೋ ಚಾಲಕರಿಗೆ ಕೊನೆಗೂ ಸರ್ಕಾರ ಕೊಂಚ ರಿಲೀಫ್​ ನೀಡಿದೆ. ಡಿ.1ರಿಂದ ಆಟೋ ಮೀಟರ್ ದರ ಹೆಚ್ಚಳ ಆದೇಶ ನಾಳೆ ಅಧಿಕೃತ ಜಾರಿಗೆ ಬರಲಿದೆ.
ಇನ್ಮುಂದೆ ಮೊದಲ 2 ಕಿ.ಮೀ ಗೆ 30 ರೂಪಾಯಿ ನಿಗದಿಯಾಗಲಿದೆ. ಒಮ್ಮೆ ಆಟೋ ಏರಿದರೆ 30 ರೂಪಾಯಿ ಕೊಡಲೇಬೇಕು. ಇಲ್ಲಿಯವರೆಗೆ 25 ರೂಪಾಯಿ ಕನಿಷ್ಟ ದರವಾಗಿತ್ತು. 2 ಕಿಲೋ ಮೀಟರ್​ ಬಳಿಕ ಪ್ರತಿ 1 km ಗೆ 15 ರೂಪಾಯಿಯಂತೆ ಚಾರ್ಜ್​​ ಬೀಳಲಿದೆ.
ಮೊದಲ ಐದು ನಿಮಿಷ ಕಾಯುವಿಕೆ ಉಚಿತ ಇರಲಿದೆ. ಐದು ನಿಮಿಷದ ಬಳಿಕ ಪ್ರತಿ ನಿಮಿಷಕ್ಕೆ 5 ರೂ. ತೆರಬೇಕಾಗುತ್ತದೆ. ಆಟೋದಲ್ಲಿ 20 kg ವರೆಗೆ ಲಗೇಜ್ ಸಾಗಣೆ ಉಚಿತ ಇರಲಿದೆ. 21 kgಯಿಂದ 50 kg ವರೆಗೆ 5 ರೂ. ದರ ನಿಗದಿಯಾಗಿದೆ. ರಾತ್ರಿ ವೇಳೆ ಸಾಮಾನ್ಯ ಮೀಟರ್ ದರ ಮತ್ತು ಅರ್ಧದಷ್ಟು ಹೆಚ್ಚು (30+15 ರೂ.) ಇರಲಿದೆ.

ಪರಿಷ್ಕೃತ ಆಟೋ ದರ ಇಂತಿದೆ

*ಮೊದಲ 2 kmಗೆ 30 ರೂಪಾಯಿ ನಿಗದಿ

*ನಂತರದ ಪ್ರತಿ 1 km ಗೆ 15 ರೂಪಾಯಿ

  • ಮೊದಲ ಐದು ನಿಮಿಷ ಕಾಯುವಿಕೆ ಉಚಿತ

*ಐದು ನಿಮಿಷದ ಬಳಿಕ ಪ್ರತಿ ನಿಮಿಷಕ್ಕೆ 5 ರೂ.

  • 20 kg ವರೆಗೆ ಲಗೇಜ್ ಸಾಗಣೆ ಉಚಿತ

*21 kg ಇಂದ 50 kg ವರೆಗೆ 5 ರೂ. ದರ ನಿಗದಿ

  • ರಾತ್ರಿ ವೇಳೆ ಸಾಮಾನ್ಯ ಮೀಟರ್ ದರ ಮತ್ತು ಅರ್ಧದಷ್ಟು ಹೆಚ್ಚು (30+15)