ನಗರದಲ್ಲಿ ನವ ಜೀವನ ಸಂಸ್ಥೆಯಿಂದ
 ಡಿ.10 ವಿಕಲಚೇತನರ “ಸ್ವಯಂವರ”


ಸಂಜೆವಾಣಿ ವಾರ್ತೆ
ಬಳ್ಳಾರಿ, ನ.22: ವಿಕಲಚೇತನರ ಅಭಿವೃದ್ಧಿಗಾಗಿ ಕಳೆದ ಮೂರು ದಶಕಗಳಿಂದ ನಗರದಲ್ಲಿ ಕಾರ್ಯನಿರ್ವಹಿಸುತ್ತಿರುವ ನವಜೀವನ ವಿಕಲಚೇತನರ ಸಂಸ್ಥೆ ಮತ್ತು ಸಂಸ್ಥೆಯ ಹಳೆಯ ವಿದ್ಯಾರ್ಥಿಗಳ ಸಂಘದಿಂದ ಡಿ.10 ರಂದು  ಸಂಜೆ 4 ಕ್ಕೆ ವಿಕಲಚೇತನರ ವದು ವರರ ಭೇಟಿಯ ಸ್ವಯಂವರ ಹಮ್ಮಿಕೊಂಡಿದೆ.
ಸಂಸ್ಥೆಯ ಮುಖ್ಯಸ್ಥೆ ಏಸ್ಥರ್, ಹಳೇ ವಿದ್ಯಾರ್ಥಿಗಳ ಸಂಘದ ಜಿ.ಪರುಶುರಾಮ್, ವಸಂತಕುಮಾರ್, ಸುನಿತಾ, ಜಾಫರ್ ಸಾಧಿಕ್ ಅವರು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿ. ಡಿ.10 ಮತ್ತು 11 ರಂದು ಸಂಸ್ಥೆಯಿಂದ ವಿಕಲಚೇತನರ ದಿನಾಚರಣೆ ಹಮ್ಮಿಕೊಂಡಿದೆ.
ಡಿ.10 ರಂದು ಬೆಳಿಗ್ಗೆ ವಿವಿಧ ಕ್ರೀಡೆಗಳು ಮತ್ತು ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು  ನಡೆಯಲಿವೆ.
ಈ ಬಾರಿ ವಿಶೇಷವಾಗಿ ಸಯಂವರ ಹಮ್ಮಿಕೊಂಡಿದೆ. ಇದರಲ್ಲಿ ಪಾಲ್ಗೊಳ್ಳಲು ಬಯಸುವ ವಿಕಲಚೇತನರು. ತಮ್ಮ ಸಯಂ ದಾಖಲೆಗಳೊಂದಿಗೆ. ಡಿ.5 ರೊಳಗೆ 100 ರೂ ಶುಲ್ಕದೊಂದಿಗೆ ಖುದ್ದಾಗಿ ಸಂಸ್ಥೆಗೆ ಪೋಷಕರೊಂದಿಗೆ ಬಂದು ನೊಂದಾಯಿಸಿಕೊಳ್ಳಬೇಕಿದೆ.
ಹೆಚ್ಚಿನ ಮಾಹಿತಿಗಾಗಿ 9008913554 ಇವರನ್ನು ಸಂಪರ್ಕಿಸಬಹುದಾಗಿದೆಂದು ತಿಳಿಸಿದರು.