
ಕೋಲಾರ,ಆ.೧೨:ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ದೇಶಿ ಉತ್ಪನ್ನಗಳ ಟ್ರೈ ಮಳಿಗೆ ಪ್ರಾರಂಭವಾಗಿದ್ದು ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳುವಂತೆ ಅಂಬೇಡ್ಕರ್ ನಿಗಮ ವ್ಯವಸ್ಥಾಪಕರಾದ ಎಮ್.ಆರ್ ಪ್ರತಿಮಾ ತಿಳಿಸಿದರು.
ರಾಜ್ಯ ವಾಲ್ಮೀಕಿ ಅಭಿವೃದ್ಧಿ ನಿಗಮದ ಸಹಯೋಗದೊಂದಿಗೆ ಆದಿವಾಸಿಗಳು ಸಂಗ್ರಹಿಸುವ ಕಾಡು ಉತ್ಪನ್ನಗಳನ್ನು ಮಾರಾಟ ಮಾಡುವ ಸಲುವಾಗಿ ಗುರುವಾರ ನಗರದ ತಹಸಿಲ್ದಾರ್ ಕಚೇರಿ ಆವರಣದಲ್ಲಿ ಟ್ರೈ ಮಳಿಗೆ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು,
ಇಂದು ಪ್ರತಿಯೊಂದು ವಸ್ತುಗಳು ವಿದೇಶಿ ಮೂಲದವದಾಗಿದ್ದು, ಎಲ್ಲರೂ ಗುಣಮಟ್ಟವಿಲ್ಲದ ಉತ್ಪನ್ನಗಳನ್ನೇ ಹೆಚ್ಚಾಗಿ ಬಳಸುತ್ತಿದ್ದಾರೆ. ನಮ್ಮಲ್ಲಿಯೇ ಗುಣಮಟ್ಟದಿಂದ ಕೂಡಿದ ಉತ್ಪನ್ನಗಳನ್ನು ಯಾರು ಬಳಸುವುದಿಲ್ಲ. ಇದರಿಂದ ಸಾಕಷ್ಟು ಪ್ರಮಾಣದಲ್ಲಿ ದೇಶದ ಬಂಡವಾಳ ವಿದೇಶಕ್ಕೆ ಹರಿದು ಹೋಗುತ್ತಿದೆ. ನಮ್ಮಲ್ಲಿ ಉತ್ಪನ್ನವಾಗುವ ಸ್ವದೇಶಿ ಉತ್ಪನ್ನಗಳನ್ನು ಬಳಸುವ ಮೂಲಕ ಬಳಸಿದರೆ ದೇಶದ ರೈತರು ಆರ್ಥಿಕವಾಗಿ ಸದೃಢರಾಗಲು ಸಹಕಾರಿಯಾಗುತ್ತದೆ ಎಂದರು.
ರಾಸಾಯನಿಕಯುಕ್ತ ಆಹಾರ ಪದಾರ್ಥಗಳ ಬಳಕೆಯನ್ನು ತ್ಯಜಿಸಿ, ಸಾವಯವ ಮತ್ತು ದೇಶಿ ಆಹಾರ ಪದಾರ್ಥಗಳನ್ನು ಬಳಸುವುದರಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದಾಗಿದೆ. ಅಲ್ಲದೆ ಸದೃಢ ಸಮಾಜಕ್ಕೂ ಅನುಕೂಲಕವಾಗಲಿದೆ ಎಂದು ಹೇಳಿದರು.
ಇನ್ನು ಈ ಮಳಿಗೆಯಲ್ಲಿ ದೇಶಿ ಉತ್ಪನ್ನಗಳಾದ ಜೇನುತುಪ್ಪ, ಜಿಗರೇ ಪುಡಿ, ಧೂಪ, ಅಂತವಾಳ ಕಾಯಿ, ಸೀಗೆಕಾಯಿ ಪುಡಿ, ಸಿರಿಧಾನ್ಯ, ಕಾಫಿ ಪೌಡರ್ ಪ್ರಾಡಕ್ಟ್ ಸೇರಿದಂತೆ ಅನೇಕ ದಿನಬಳಕೆ ವಸ್ತುಗಳು ಲಭ್ಯವಾಗುತ್ತದೆ ಎಂದು ತಿಳಿಸಿದರು.
ನಿಗಮದ ಪ್ರಥಮ ದರ್ಜೆ ಸಹಾಯಕರು ಲಕ್ಷ್ಮೀದೇವಮ್ಮ ಮೇದಾರ ಸಮುದಾಯದ ಮುಖಂಡರಾದ ಮಲ್ಲೇಶಪ್ಪ,ವೆಂಕಟರಮಣಪ್ಪ, ರಾಜಶಂಕರ್ (ಗಂಗಾ) ಆನಂದ, ಶಾಂತಕುಮಾರ್, ಸತೀಶ್, ವೆಂಕಟಸ್ವಾಮಿ, ನಾಗು, ಲೋಕೇಶ್, ರಾಜೇಶ್ ಮುಂತಾದವರು ಇದ್ದರು.