ನಗರದಲ್ಲಿ ತೀವ್ರಗೊಂಡ ಏಮ್ಸ್ ಹೋರಾಟ

(ಸಂಜೆವಾಣಿ ಪ್ರತಿನಿಧಿಯಿಂದ)
ರಾಯಚೂರು,ಫೆ.೭- ರಾಯಚೂರಿಗೆ ಏಮ್ಸ್ ಮಂಜೂರಿಗೆ ಸಂಬಂಧಿಸಿದಂತೆ ರಾಷ್ಟ್ರರಾಜಧಾನಿ ದೆಹಲಿಯಲ್ಲಿ ರಾಜ್ಯಸರ್ಕಾರ ಪ್ರತಿಭಟನೆ ನಡೆಯುತ್ತಿರುವ ಬೆನ್ನಲ್ಲೆ ಇತ್ತ ರಾಯಚೂರು ನಗರದಲ್ಲೂ ಏಮ್ಸ್ ಹೋರಾಟ ಸಮಿತಿ ಏಮ್ಸ್‌ಗಾಗಿ ಪ್ರತಿಭಟನೆಯನ್ನು ತೀವ್ರಗೊಳಿಸಿದೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಮ್ಮ ತೆರಿಗೆ ನಮ್ಮ ಹಕ್ಕು ಬೇಡಿಕೆಯನ್ನು ಮುಂದಿಟ್ಟುಕೊಂಡು ಪ್ರತಿಭಟನೆ ನಡೆಸುತ್ತಿರುವ ರಾಜ್ಯಸರ್ಕಾರ ರಾಯಚೂರಿಗೆ ಏಮ್ಸ್ ಮಂಜೂರುಮಾಡುವುದನ್ನೂ ಸಹ ತನ್ನ ಬೇಡಿಕೆಗಳಲ್ಲಿ ಒಂದಾಗಿ ಪರಿಗಣಿಸಿದ್ದು, ರಾಯಚೂರಿಗೆ ಏಮ್ಸ್ ಮಂಜೂರು ಮಾಡೇ ತೀರಬೇಕೆಂದು ಕೇಂದ್ರದ ಮೇಲೆ ತೀವ್ರ ಒತ್ತಡ ಹೇರಿದೆ.
ರಾಯಚೂರು ನಗರದಲ್ಲಿ ಹೋರಾಟ ಸಮಿತಿಯ ಮುಖ್ಯಸ್ಥ ಬಸವರಾಜ ಕಳಸ ಅವರ ನೇತೃತ್ವದಲ್ಲಿ ಕಳೆದ ೬೩೪ ದಿನಗಳಿಂದ ನಡೆಯುತ್ತಿರುವ ಪ್ರತಿಭಟನೆ ಇಂದು ತೀವ್ರತೆ ಪಡೆದುಕೊಂಡಿತು. ಪ್ರತಿಭಟನಾ ಸ್ಥಳಕ್ಕೆ ಸಾಕಷ್ಟು ಸ್ಥಳೀಯ ಮುಖಂಡರು, ನಾಗರಿಕರು ಆಗಮಿಸಿ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದ್ದು, ಹೋರಾಟಕ್ಕೆ ಮತ್ತಷ್ಟು ಬಲ ನೀಡಿದಂತಾಯಿತು.
ಡಾ. ಬಸವರಾಜ್ ಕಳಸ, ಅಶೋಕ್ ಕುಮಾರ್ ಜೈನ್, ಕಾಮರಾಜ ಪಾಟೀಲ್, ಡಾ. ಎಸ್.ಎಸ್ ಪಾಟೀಲ್ , ಜಾನ್ ವೆಸ್ಲಿ, ನರಸಪ್ಪ ಬಾಡಿಯಾಲ್, ಜಗದೀಶ್ ಪುರತಿಫ್ಲಿ , ವೆಂಕಯ್ಯ ಶೆಟ್ಟಿ ಹೊಸಪೇಟೆ, ಜ್ಸ್ವಂತ್ ರಾವ್ ಕಲ್ಯಾಣಕಾರಿ, ರಮೇಶ್ ಕಲ್ಲೂರ್ಕರ್, ಪರಶುರಾಮ್, ಮಲ್ಲನಗೌಡ ಹದ್ದಿನಾಳ್, ವೀರಭದ್ರಯ್ಯ ಸ್ವಾಮಿ, ಮಹೀಂದ್ರ ಸಿಂಘ್, ಪ್ರಸನ್ನ ಅಲಂಪಲಿ, ವೀರಭದ್ರಪ್ಪ ಅಂಬರ್ಪೆಟ್, ಚಂದ್ರಕಾಂತ್, ಅಜೀಜ್ ,ನಾಸೀರ್ ಹೊಸೂರ್, ಬೆಟ್ಟಪ್ಪ ವಕ್ರಾಣಿ, ಸಂಗಪ್ಪ ಕಡಿ ಹಾಗೂ ಮುಂತಾದವರೆಲ್ಲ ಭಾಗವಹಿಸಿದ್ದರು.