ನಗರದಲ್ಲಿ  ಜೆ.ಸಿ.ಎಸ್ ಡೆವಲಪರ್ಸ್ ಅಭಯ ಕಪ್ ಕ್ರಿಕೆಟ್ ಟೂರ್ನಮೆಂಟ್ ಆರಂಭ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಜ.12: ನಗರದ ವಿಮ್ಸ್ ಮೈದಾನದಲ್ಲಿ ಮೂರು ದಿನಗಳ  ಜಿ.ಸಿ.ಎಸ್ ಡೆವಲಪರ್ಸ್ ಅಭಯ ಕಪ್ ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಮೆಂಟ್  ಆರಂಭಗೊಂಡಿದೆ.
ಟೂರ್ನಮೆಂಟ್ ಉದ್ಘಾಟನೆ ಮಾಡಿದ ಡಿಸಿ ಪ್ರಶಾಂತ್ ಕುಮಾರ್ ಮಿಶ್ರ ಮಾತನಾಡಿ, ದಿನ‌ ನಿತ್ಯದ ಕೆಲಸಗಳ ಜೊತೆ ಇಂತಹ ಕ್ರೀಡೆಗಳಲ್ಲಿ ಭಾಗವಹಿಸುವುದು
ದೈಹಿಕ‌ ಮಾನಸಿಕ ಕ್ಷಮತೆ, ಸ್ಪೂರ್ತಿಗೆ ಸಹಕಾರಿಯಾಗಲಿದೆಂದರು.
ಎಸ್ಪಿ ರಂಜಿತ್ ಕುಮಾರ್ ಮಾತನಾಡಿ, ಇಲ್ಲಿ ಐಪಿಎಲ್ ರೀತಿಯ ವಾತಾವರಣ ಇದೆ. ಕ್ರೀಡಾ ಸಂಸ್ಕೃತಿ ಬೆಳವಣಿಗೆಗೆ ಇಂತಹ ಟೂರ್ನಮೆಂಟ್ ಸಹಕಾರಿಯಾಗಲಿದೆ. ಕ್ರೀಡೆಯಲ್ಲಿ ಶಿಸ್ತು ಮುಖ್ಯ ಆದರೆ ಬಳ್ಳಾರಿಯಲ್ಲಿ
ಟ್ರಾಫಿಕ್ ಸೇರಿದಂತೆ ಹಲವು ವಿಷಯಗಳಲ್ಲಿ ಜನತೆಯಲ್ಲಿ  ಶಿಸ್ತು ಕಡಿಮೆ, ಈ ರೀತಿಯ ಕ್ರೀಡೆಗಳಿಂದ ಶಿಸ್ತು ಬರಲಿ. ಆಡಳಿತದ ನಿಯಮಗಳನ್ನು ಪಾಲಿಸಲು ಜನತೆ ಮುಂದಾಗಲಿ ಎಂದರು.
ರಾಜ್ಯದ 15 ವರ್ಷದೊಳಗಿನ ತಂಡದ ಕ್ರೀಡಾ ಪಟು ಬಳ್ಳಾರಿಯವರೇ ಆದ ಪ್ರಜ್ಞ ಕಿಶೋರ್ ಅವರನ್ನು ಸನ್ಮಾನಿಸಿ ಗೌರವಿಸಲಾಯ್ತು.   
ಕಾರ್ಯಕ್ರಮದಲ್ಲಿ  ಟೂರ್ನಮೆಂಟ್ ನ ಪ್ರಮುಖ ಪ್ರಾಯೋಜಿಕರಾಗಿರುವ ಜಿ.ಸಿ.ಎಸ್. ಡೆವಲಪರ್ಸ್ ಮಾಲೀಕ‌ ಕೆ.ಗೋಪಾಲರೆಡ್ಡಿ, ಅಭಯ ತಂಡದ ರಾಮಕೃಷ್ಣ, ಕಿಶೋರ್ ದಂಡಿನ, ನಾಮ‌ಕಾರ್ತಿಕ್,ಬಾಲನಾಗರಾಜ್, ಅಜಯ್,  ಬಿ.ಡಿ.ನಾಗರ್ಜುನ ಮೊದಲಾದವರು ಇದ್ದರು.
ಲಕ್ಷ್ಮಿ ಕಾರ್ಯಕ್ರಮ ನಿರ್ವಹಣೆ, ಕುಮಾರಿ ನಯನ್, ಆದ್ರತ ದಂಡಿನ ಮತ್ತವರ ತಂಡದಿಂದ ಪ್ರಾರ್ಥನೆ. ನಾಮ‌ಕಾರ್ತಿಕ್ ಅವರಿಂದ ಸ್ವಾಗತ ನಡೆಯಿತು.
ಈ ಟೂರ್ನಮೆಂಟ್ ನಲ್ಲಿ ನಗರದ 30 ತಂಡಗಳು ಪಾಲ್ಗೊಂಡಿದ್ದ ಇದರಲ್ಲಿ ಎರೆಡು ಗುಂಪು ಇವೆ.  ಒಂದು ಸರ್ಕಾರದ ಇಲಾಖೆಗಳ 15 ತಂಡಗಳದ್ದು.  ಮತ್ತೊಂದು ಗುಂಪು  ಇತರೇ ತಂಡಗಳದ್ದು.
8 ಓವರ್ ಗಳ ಪಂದ್ಯ. ಲೀಗ್ ಕಮ್ ನಾಕೌಟ ಹಂತದಲ್ಲಿ ನಡೆಯಲಿದ್ದು ಜ 14 ರಂದು ಸೆಮಿಫೈನಲ್ಸ್,  ಫೈನಲ್  ಪಂದ್ಯಗಳು ನಡೆಯಲಿವೆ.