ನಗರದಲ್ಲಿ ಗುರುವಾರ ನಡೆಯಬೇಕಿದ್ದ ವಾರದ ಸಂತೆ ಸ್ಥಗಿತ

ಕೊಟ್ಟೂರು ಏ 24 : ಕೊರೊನಾ ವೈರಾಣು ಹರಡುವುದನ್ನು ತಡೆಯಲು ಸಂತೆಗಳನ್ನು ನಿಷೇಧಿಸಿ ತಾಲೂಕು ಆಡಳಿತ ಆದೇಶ ಹೊರಡಿಸಿದೆ.
ಸಂತೆಯನ್ನು ನಿಷೇಧಿಸಿರುವುದಕ್ಕೆ ಸಂಬಂಧಿಸಿದಂತೆ ಪಟ್ಟಣಪಂಚಾಯಿತಿ ಶನಿವಾರ ನಗರದಲ್ಲಿ ಆಟೊ ಪ್ರಚಾರ ನಡೆಸಿ ಜಾಗೃತಿ ಮೂಡಿಸಿತ್ತು. ಮಾರುಕಟ್ಟೆ ಸ್ಥಳದಲ್ಲಿ ಧ್ವನಿವರ್ಧಕದ ಮೂಲಕ ಮಾಹಿತಿ ನೀಡಲಾಗಿತ್ತು. ಪಟ್ಟಣಪಂಚಾಯಿತಿ ಸಿಬ್ಬಂದಿ ಈ ಬಗ್ಗೆ ವ್ಯಾಪಾರಸ್ಥರಿಗೂ ಸೂಚನೆಗಳನ್ನು ನೀಡಿದ್ದಾರೆ.ಸಾರ್ವಜನಿಕರು ಸಹಕಾರ ನೀಡುವಂತೆ ಮುಖ್ಯಾಧಿಕಾರಿ ಟಿಎಸ್ ಗಿರೀಶ್ ಮನವಿ ಮಾಡಿದರು