ನಗರದಲ್ಲಿ ಕಾಶಿ ಜಗದ್ಗುರು ಅಡ್ಡಪಲ್ಲಕ್ಕಿ ಮಹೋತ್ಸವ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಜ.17: ನಗರದ ಗುಗ್ಗರಹಟ್ಟಿಯ ಶಿವಧೀಕ್ಷಾ ಮಂದಿರದಿಂದ ಶ್ರೀಶೈಲಪೀಠದ ಜಗದ್ಗುರು ಡಾ.ಮಲ್ಲಿಕಾರ್ಜುನ ವಿಶ್ವಾರಾಧ್ಯ ಶ್ರೀಗಳ ಅಡ್ಡ ಪಲ್ಲಕ್ಕಿ ಮಹೋತ್ಸವವನ್ನು ಜ.19ರಂದು ಸಂಜೆ 4 ಗಂಟೆಗೆ ಹಮ್ಮಿಕೊಂಡಿದೆ ಎಂದು ಮಂದಿರದ ಧರ್ಮಾಧಿಕಾರಿ ಕೆ.ರಾಜಶೇಖರ ಗೌಡ ತಿಳಿಸಿದ್ದಾರೆ.
ಅಂದು ಸಂಜೆ ಮಂದಿರದ ಬಳಿ ನಡೆಯುವ ಅಡ್ಡ ಪಲ್ಲಕ್ಕಿ ಉತ್ಸವದ ನಂತರ ಸಂಜೆ 6ಕ್ಕೆ ಧರ್ಮ ಸಭೆಯನ್ನು ಹಮ್ಮಿಕೊಂಡಿದ್ದು ಶ್ರೀಗಳು ಆಶೀರ್ವಚನ ನೀಡಲಿದ್ದಾರೆ.
ಈ ಧರ್ಮಸಭೆಗೆ ಎಮ್ಮಿಗನೂರಿನ ಮಹಾಂತ ಮಠದ ವಾಮದೇವ ಶ್ರೀಗಳು, ಹರಗಿನಡೋಣಿ, ಪಾಲ್ತೂರು, ಶಾನವಾಸಪುರ, ಬುಕ್ಕಸಾಗರ, ಕೂಡ್ಲಿಗಿ, ಕಲ್ಯಾಣಸ್ವಾಮಿಮಠ, ನಂದೀಪುರ ಸೇರಿದಂತೆ ವಿವಿಧ ಮಠಾಧೀಶರು ಪಾಲ್ಗೊಳ್ಳಲಿದ್ದಾರೆ.
ಮರುದಿನ ಜ.20ರಂದು ಬೆಳಿಗ್ಗೆ 8 ಗಂಟೆಗೆ ಕಾಶಿ ಜಗದ್ಗುರುಗಳಿಂದ ಸಂಗೀತ ಯುಕ್ತ ಇಷ್ಟಲಿಂಗ ಮಹಾಪೂಜೆ ಹಮ್ಮಿಕೊಂಡಿದೆ.
ನಗರದ ವೀರಶೈವ ಸಂಘ, ಸಂಸ್ಥೆಗಳನ್ನು ಆಹ್ವಾನಿಸಲಾಗಿದೆ.