ನಗರದಲ್ಲಿ ಏ.14ರಂದು ಮ್ಯಾರಥಾನ್ ಓಟ

ಮೈಸೂರು:ಮಾ:30: ಡಾ. ಬಿ.ಆರ್. ಅಂಬೇಡ್ಕರ್‍ರವರ 103ನೇ ಜನ್ಮ ದಿನದ ಅಂಗವಾಗಿ ಏಪ್ರಿಲ್ 14ರಂದು ವಿಶ್ವಜ್ಞಾನಿ ಚಾರಿಟಬಲ್ ಟ್ರಸ್ಟ್ ಮೈಸೂರು, ಭಾರತೀಯ ಪರಿವರ್ತನಾ ಸಂಘ, ಭಾರತೀಯ ವಿದ್ಯಾರ್ಥಿ ಸಂಘ, ದಲಿತ ಸಂಘಟನೆಗಳ ಒಕ್ಕೂಟ, ಸಂಶೋಧಕರ ಸಂಘ ಸೇರಿದಂತೆ ಇನ್ನಿತರೆ ಸಂಘಟನೆಗಳ ಸಂಯಕ್ತಾಶ್ರಯದಲ್ಲಿ ಮ್ಯಾರಥನ್ ಓಟವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸೋಸಲೆ ಸಿದ್ದರಾಜು ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಏ.14 ಬುಧವಾರ ಬೆಳಿಗ್ಗೆ 6:30ಕ್ಕೆ ನಗರದ ಪುರಭವನದಿಂದ ಹೊರಟು ಹಾರ್ಡಿಂಚ್ ವೃತ್ತ, ಮೈಸೂರು-ಊಟಿ ರಸ್ತೆ, ಅಗ್ರಹಾರ ವೃತ್ತ, ಬ್ರಾಂಡ್ ಫ್ಯಾಕ್ಟರಿ, ಜಿಲ್ಲಾ ನ್ಯಾಯಾಲಯ, ಕ್ರಾಫರ್ಡ್‍ಹಾಲ್, ಮೆಟ್ರೋಪೋಲ್ ವೃತ್ತ, ರೈಲು ನಿಲ್ದಾಣ, ಕೆ.ಆರ್. ಆಸ್ಪತ್ರೆ ರಸ್ತೆ, ಇರ್ವಿನ್ ರಸ್ತೆ, ಅಶೋಕ ರಸ್ತೆ ಮೂಲಕ ಸಾಗಿ ಪುರಭವನಕ್ಕೆ ಹಿಂದಿರುಗುವುದು ಎಂದರು.
ಈ ಮ್ಯಾರಥನ್ ಓಟದಲ್ಲಿ ಪ್ರಥಮ ಸ್ಥಾನ ಗಳಿಸುವವರಿಗೆ 15,000, ದ್ವಿತೀಯ ಸ್ಥಾನಕ್ಕೆ 10,000, ತೃತೀಯ ಸ್ಥಾನ ಗಳಿಸುವವರಿಗೆ 5,000 ರೂ.ಗಳ ನಗದು ಬಹುಮಾನ ನೀಡುವುದರೊಂದಿಗೆ ಓಟದಲ್ಲಿ ಭಾಗವಹಿಸಿದ ಎಲ್ಲ ಸ್ಪರ್ಧಿಗಳಿಗೂ ಟ್ರಸ್ಟ್ ವತಿಯಿಂದ ಟೀಷರ್ಟ್ ಮತ್ತು ಪ್ರಮಾಣ ಪತ್ರಗಳನ್ನು ನೀಡಲಾಗುವುದು. ಹೆಚ್ಚಿನ ಮಾಹಿತಿಗೆ ಮೋ. 9880361209, 9686062014ಗೆ ಸಂಪರ್ಕಿಸಬಹುದೆಂದು ತಿಳಿಸಿದರು.
ಗೋಷ್ಠಿಯಲ್ಲಿ ವಿಶ್ವಜ್ಞಾನ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಮಹೇಶ್, ಮರಿದೇವರು, ಚೆಲುವಯ್ಯ ಉಪಸ್ಥಿತರಿದ್ದರು.