ನಗರದಲ್ಲಿ ಎಸ್.ಡಿ.ಪಿ.ಐ. ಮುಖಂಡನ ಮನೆ ಮೇಲೆ ಎನ್.ಐ.ಎ. ದಾಳಿ

ಹುಬ್ಬಳ್ಳಿ, ನ5: ನಗರದಲ್ಲಿ ಇಂದು ಬೆಳ್ಳಂಬೆಳಿಗ್ಗೆ ಎಸ್.ಡಿ.ಪಿ.ಐ. ಮುಖಂಡರೋರ್ವರ ಮನೆ ಮೇಲೆ ಎನ್.ಐ.ಎ. ದಾಳಿ ನಡೆಸಿದೆ.
ಹಳೇ ಹುಬ್ಬಳ್ಳಿಯ ನೂರಾನಿ ಪ್ಲಾಟ್‍ನಲ್ಲಿರುವ ಎಸ್.ಡಿ.ಪಿ.ಐ. ಮುಖಂಡ ಇಸ್ಮಾಯಿಲ್ ನಾಲಬಂದ್ ಮನೆಯ ಮೇಲೆ ದಾಳಿ ನಡೆದಿದೆ.
ಇಂದು ಬೆಳಗಿನ ಜಾವ ನಾಲ್ಕು ಗಂಟೆಗೆ ದಾಳಿ ನಡೆಸಿದ ಅಧಿಕಾರಿಗಳು ದಾಖಲೆ ಪತ್ರಗಳ ಪರಿಶೀಲನೆ ನಡೆಸಿದರು.
ನಾಲಬಂದ್ ಅವರ ಕಸಬಾಪೇಟ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಕಚೇರಿಯ ಮೇಲೂ ದಾಳಿ ನಡೆದಿದೆ.