ನಗರದಲ್ಲಿ ಇಂದು  ಸಂಜೆ ಎಸ್ ಎಸ್ ಟ್ರೋಪಿ
 ವಾಲಿಬಾಲ್ ಪಂದ್ಯಾವಳಿಗೆ ಚಾಲನೆ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಫೆ.27: ನಗರದ ಕನಕದುರುಗಮ್ಮ ದೇವಿ ಸಿಡಿಬಂಡಿ ರಥೋತ್ಸವದ  ಪ್ರಯುಕ್ತ ಎಸ್.ಎಸ್.ಟ್ರೋಫಿ, ರಾಜ್ಯಮಟ್ಟದ ಪುರುಷರ ಹೊನಲು ಬೆಳಕಿನ ಓಪನ್ ವಾಲಿಬಾಲ್ ಪಂದ್ಯಾವಳಿಗೆ ಚಾಲನೆ ನೀಡಲಾಗುವುದು.
ಇಂದು ಮತ್ತು ನಾಳೆ ನಗರದ ಕಪ್ಪಗಲ್ಲು ರಸ್ತೆಯಲ್ಲಿರುವ ಕಿತ್ತೂರುರಾಣಿ ಚನ್ನಮ್ಮ ಪ್ರೌಢಶಾಲಾ ಆವರಣದಲ್ಲಿ ಸಂಜೆ 4ರಿಂದ ಪಂದ್ಯಾವಳಿ ನಡೆಯಲಿದೆ ಎಂದು ಪಾಲಿಕೆ ಸದಸ್ಯ ಕೆ.ಹನುಮಂತಪ್ಪ ತಿಳಿಸಿದ್ದಾರೆ..
ವಿಜೇತ ತಂಡಗಳಿಗೆ ಮೊದಲನೇ ಬಹುಮಾನ :ರೂ 40,000/- ಎರಡನೇ ಬಹುಮಾನ: ರೂ 30,000/-
ಮೂರನೇ ಬಹುಮಾನ ರೂ 20,000/- ನಾಲ್ಕನೇ ಬಹುಮಾನ. ರೂ 10,000/- ನೀಡಲಾಗುವುದು.
ಸಾರಿಗೆ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಶ್ರೀರಾಮುಲು ರವರು ಮತ್ತು ಬಳ್ಳಾರಿ ನಗರ ಜನಪ್ರಿಯ ಶಾಸಕರು
ಸೋಮಶೇಖರ್ ರೆಡ್ಡಿ ರವರ ನೇತೃತ್ವದಲ್ಲಿ ಪಂದ್ಯಾವಳಿಯನ್ನು ಹಮ್ಮಿಕೊಂಡಿದ್ದು, ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಈ ಕಾರ್ಯಕ್ರಮವನ್ನು ಯಶಸ್ವಿ ಮಾಡಿಕೊಡಬೇಕಾಗಿ ವಿನಂತಿಸಿಕೊಂಡಿದ್ದಾರೆ.