(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಜು.29: ನಗರದ ಟ್ರೆಡಿಷನಲ್ ಶೋಟೋಕಾನ್ ಕರಾಟೆ ಅಕಾಡೆಮಿ ಹಾಗೂ ರಾಜ್ಯ ಕರಾಟೆ ಶಿಕ್ಷಕರ ಸಂಘವು ಎರಡನೇ ರಾಷ್ಟ್ರಮಟ್ಟದ ಕರಾಟೆ ಪಂದ್ಯಾವಳಿಯನ್ನು ಆಗಷ್ಟ್ 26 ಮತ್ತು 27 ಆಗಸ್ಟ್ ಇಲ್ಲಿನ ವಾಲ್ಮೀಕಿ ಭವನದಲ್ಲಿ ಹಮ್ಮಿಕೊಂಡಿದೆ.
ಈ ಕುರಿತು ನಗರದ ಪತ್ರಿಕಾ ಭವನದಲ್ಲಿ ಇಂದು ಸುದ್ದಿಗೋಷ್ಟಿ ನಡೆಸಿ ಮಾಹಿತಿ ನೀಡಿದ ಟ್ರೆಡಿಷನಲ್ ಶೋಟೋಕಾನ್ ಕರಾಟೆ ಅಕಾಡೆಮಿಯ ಮುಖ್ಯಸ್ಥ ಕಟ್ಟೇಸ್ವಾಮಿ. ಈ ಮೊದಲು 2008 ರಲ್ಲಿ ಮೊದಲ ಬಾರಿಗೆ ರಾಷ್ಟ್ರೀಯ ಕರಾಟೆ ಸ್ಪರ್ಧೆ ಹಮ್ಮಿಕೊಂಡಿತ್ತು. ಮತ್ತೆ ಈಗ ಆಯೋಜಿಸಿದೆ. ಈ ಸ್ಪರ್ಧೆಯಲ್ಲಿ ಆರು ವರ್ಷಗಳ ಮೇಲ್ಪಟ್ಟ. ವಿವಿಧ ರಾಜ್ಯಗಳಾದ, ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡು, ಪಶ್ಚಿಮ ಬಂಗಾಳ, ಗೋವಾ, ತೆಲಂಗಾಣ, ಆಂಧ್ರಪ್ರದೇಶ, ಕೇರಳ,ಮತ್ತು ಒಡಿಶಾ ದಿಂದ
800 ಕ್ಕೂ ಹೆಚ್ಚು ಕರಾಟೆ ಪಟುಗಳು ಆಗಮಿಸಲಿದ್ದಾರೆ.
ಬಾಲಕ, ಬಾಲಕಿಯರ ವಿಭಾಗದ ವಯೋಮಿತಿಯಲ್ಲಿ ಕಟಾ ಮತ್ತು ವಯೋಮಿತಿ ಮತ್ತು ತೂಕದ ವಿಭಾಗದಲ್ಲಿ ಕುಮಿತೆ , ಗುಂಪು ಕಟಾ., ಗುಂಪು ಕುಮಿತೆ ಸ್ಪರ್ಧೆಗಳು ನಡೆಯಲಿವೆ.
ಈ ಪಂದ್ಯಾವಳಿಯ ನಿರ್ಣಾಯಕರಾಗಿ ರಾಜ್ಯ ಮತ್ತು ರಾಷ್ಟ್ರ ಮಟ್ಟದ ತೀರ್ಪುಗಾರರು ಆಗಮಿಸಲಿದ್ದಾರೆ.ನಾಳೆ ರೆಪ್ರಿಗಳ ಸೆಮಿನಾರ್ ಇಲ್ಲಿನ ಗಾಂಧಿಭವನದಲ್ಲಿ ಹಮ್ಮಿಕೊಂಡಿದೆ.
ಶಾಲೆಗಳಲ್ಲಿ ಕರಾಟೆ ಶಿಕ್ಷಕರ ನೇಮಕಕ್ಕೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಲಿದೆಂದು ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಕರ್ನಾಟಕ ಕರಾಟೆ ಶಿಕ್ಷಕರ ಸಂಘದ ಮಹಮ್ಮದ್ ನದೀಪ್, ಸತೀಶ್ ಬೆಳಮಠ, ರವಿಕುಮಾರ್, ಸುರೇಶ್ ಕುಮಾರ್, ರಾಮಕೃಷ್ಣ, ಪ್ರಸಾದ್, ಹುಲುಗೇಶ್, ಸಂತೋಷ್ ಮೊದಲಾದವರು ಇದ್ದರು.